ನವದೆಹಲಿ, ಏ. 19- ಬಿಸಿಸಿಐ ಮುಖ್ಯ ಆಯ್ಕೆಗಾರರಾಗಿ ಮಾಜಿ ಕ್ರಿಕೆಟಿಗ ಅಜಿತ್ ಅಗರ್ಕರ್ ಅವರೇ ಮುಂದುವರೆಯುವ ಸಾಧ್ಯತೆಗಳಿವೆ.
ಅಜಿತ್ ಅಗರ್ಕರ್ ಅವರ ಮುಖ್ಯ ಆಯ್ಕೆಗಾರನ ಅವಧಿಯು ಜೂನ್ ತಿಂಗಳಿಗೆ ಅಂತ್ಯಗೊಳ್ಳಲಿದೆ. ಆದರೆ 2027ರ ಏಕದಿನ ವಿಶ್ವಕಪ್ ಅನ್ನು ದೃಷ್ಟಿಯಲ್ಲಿಟ್ಟುಕೊಂಡು ಅವರ ಅವಧಿಯನ್ನು ಮುಂದು ವರಿಸುವ ನಿರೀಕ್ಷಿಯಿದೆ.
ಅಜಿತ್ ಅಗರ್ಕರ್ ಅವರು ಬಿಸಿಸಿಐ ಮುಖ್ಯ ಆಯ್ಕೆಗಾರರಾದ ನಂತರ ಕೆಲವು ಬಲಿಷ್ಠ ನಿರ್ಧಾರ ಗಳನ್ನು ತೆಗೆದುಕೊಂಡ ಪರಿಣಾಮ ಟೀಮ್ ಇಂಡಿಯಾ 2023ರ ಏಕದಿನ ಫೈನಲ್ ತಲುಪಿದ್ದಲ್ಲದೆ, 2024, 2026ರ ಟಿ-20 ವಿಶ್ವಕಪ್ ಹಾಗೂ 2025ರ ಚಾಂಪಿಯನ್ ಟ್ರೋಫಿಯನ್ನು ಗೆದ್ದು ಸಂಭ್ರ ಮಿಸಿದೆ. ಆದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ತಂಡವು ತವರಿನಲ್ಲೇ ಕ್ಲೀನ್‌ಸ್ವೀಪ್ ಆಗಿದೆ.
