ಮುಂಬೈ,ಫೆ.22- ಅಹಮದಬಾದ್ ಸ್ಟೇಡಿಯಂನಲ್ಲಿ ಭಾರತ-ದಕ್ಷಿಣ ಆಫ್ರಿಕಾ ನಡುವಿನ ಟಿ20 ವಿಶ್ವಕಪ್ ಪಂದ್ಯಕ್ಕೆ ರಣಾಂಗಣ ಸಿದ್ಧವಾಗಿದ್ದು, ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ.ಎರಡು ತಂಡಗಳು ಲೀಗ್ ಮ್ಯಾಚ್‌ಗಳಲ್ಲಿ ಆಡಿರುವ ಎಲ್ಲಾ ಪಂದ್ಯಗಳನ್ನು ಗೆದ್ದು ಸೂಪರ್ 8ಕ್ಕೆ ಲಗ್ಗೆ ಹಾಕಿವೆ. ಹಾಗಾಗಿ, ಇಂದಿನ ಕದನ ಕುತೂಹಲ ಕೆರಳಿಸಿದೆ.
ಟೀಂ ಇಂಡಿಯಾ ಎಲ್ಲಾ ವಿಭಾಗದಲ್ಲೂ ಬಲಿಷ್ಠವಾಗಿದೆ. ಆದರೆ, ಆರಂಭಿಕ ಸ್ಫೋಟಕ ಬ್ಯಾಟ್‌್ಸಮನ್ ಅಭಿಷೇಕ್ ಶರ್ಮಾ ಫಾರ್ಮ್‌ನಲ್ಲಿ ಇಲ್ಲದೇ ಇರೋದು ಟೀಂ ಇಂಡಿಯಾವನ್ನು ಚಿಂತಿಗೀಡು ಮಾಡಿದೆ.
ಆಡಿದ 3 ಪಂದ್ಯಗಳಲ್ಲೂ ಅಭಿಷೇಕ ಶರ್ಮಾ ಶೂನ್ಯಕ್ಕೆ ಔಟ್ ಆಗಿದ್ದಾರೆ. ಹಾಗಾಗಿ, ಇಂದಿನ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಬ್ಯಾಟ್ ಅಬ್ಬರಿಸಬೇಕಿದೆ. ಇನ್ನುಳಿದಂತೆ ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ತಿಲಕ್‌ವರ್ಮಾ, ದುಬೆ, ರಿಂಕು ಸಿಂಗ್ ಎದುರಾಳಿಗಳ ನಿದ್ದೆಗೆಡಿಸಿದ್ದಾರೆ.
ಆಲ್‌ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ಮಿಂಚುತ್ತಿದ್ದಾರೆ. ಕುಲ್ದೀಪ್ ಯಾದವ್, ವರುಣ್ ಚಕ್ರವರ್ತಿ, ಬೂಮ್ರಾ ತಂಡದ ಟ್ರಂಪ್‌ಕಾರ್ಡ್ ಆಗಿ ಹೊರ ಹೊಮಿದ್ದಾರೆ.
2024ರ ವಿಶ್ವಕಪ್ ಫೈನಲ್ ಪಂದ್ಯದ ಸೋಲಿನ ಸೇಡು ತೀರಿಸಿಕೊಳ್ಳಲು ಹರಿಣಗಳು ಹಪಹಪಿಸುತ್ತಿವೆ. ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು ವಿಶ್ವಕಪ್ ಎತ್ತಿಹಿಡಿದಿತ್ತು. ಈ ಸೋಲಿಗೆ ಸೇಡು ತೀರಿಸಿಕೊಳ್ಳಲು ದಕ್ಷಿಣ ಆಫ್ರಿಕಾ ರಣತಂತ್ರ ರೂಪಿಸಿದೆ.
ಆದರೆ, ಅಷ್ಟು ಸುಲಭ ಅಲ್ಲ ಅನ್ನೋದು ಹರಿಣಗಳಿಗೂ ಗೊತ್ತಿದೆ. ಬ್ಯಾಟಿಂಗ್, ಬೌಲಿಂಗ್ ಎರಡು ವಿಭಾಗದಲ್ಲೂ ದಕ್ಷಿಣ ಆಫ್ರಿಕಾ ಬಲಿಷ್ಠವಾಗಿದೆ. ಆಡಮ್ ಮರ್ಕರಾಮ್, ಡಿ ಕಾಕ್, ಮಿಲ್ಲರ್, ಬ್ರೇವಿಸ್ ಬ್ಯಾಟಿಂಗ್ ಬೆನ್ನೆಲುಬಾಗಿದ್ದಾರೆ. ಸ್ಟಬ್, ಜಾನ್ಸನ್ ಬ್ಯಾಟಿಂಗ್ ಅಲ್ಲದೇ ಬೌಲಿಂಗ್‌ನಲ್ಲೂ ಕೈಚಳ ತೋರುತ್ತಿರುವುದು ತಂಡದ ಪ್ಲಸ್ ಪಾಯಿಂಟ್ ಆಗಿದೆ. ರಬಡ, ಎನ್‌ಗಿಡಿ, ಕೇಶವ ಮಹರಾಜ್ ಬೌಲಿಂಗ್ ನೊಗ ಹೊತ್ತಿದ್ದಾರೆ.
