Wednesday, April 29, 2026
Homeಕ್ರೀಡಾ ಸುದ್ದಿಟ್ರೋಫಿ ಮುಖ್ಯ, ವೈಯಕ್ತಿಕ ಸಾಧನೆ ಅಲ್ಲ : ಗಂಭೀರ್‌

ಟ್ರೋಫಿ ಮುಖ್ಯ, ವೈಯಕ್ತಿಕ ಸಾಧನೆ ಅಲ್ಲ : ಗಂಭೀರ್‌

‘Stop celebrating milestones, celebrate trophies’: Gautam Gambhir

ಅಹಮದಾಬಾದ್‌, ಮಾ.9- ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಹುದ್ದೆಯಲ್ಲಿ ನಾನು ಇದುವರೆಗೂ ಟ್ರೋಫಿಗಳನ್ನು ಗೆಲ್ಲುವತ್ತ ಗಮನ ಹರಿಸಲಾಗುವುದೇ ಹೊರತು ವ್ಯಕ್ತಿಗತ ಮೈಲಿಗಲ್ಲುಗಳ ತಡೆಗಲ್ಲ ಎಂದು ಗೌತಮ್‌ ಗಂಭೀರ್‌ ಅವರು ಪ್ರತಿಪಾದಿಸಿದ್ದಾರೆ.

ನಿನ್ನೆ ಇಲ್ಲಿ ನಡೆದ ಟಿ.20 ವಿಶ್ವಕಪ್‌ ಕ್ರಿಕೆಟ್‌ ಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡವನ್ನು 96 ರನ್‌ಗಳಿಂದ ಮಣಿಸಿದ ಭಾರತ ವಿಶ್ವಕಪ್‌ ಎತ್ತಿ ಹಿಡಿದ ಬಳಿಕ ಗಂಭೀರ್‌ ತಾವು ನಂಬಿರುವ ಈ ಸಿದ್ಧಾಂತವನ್ನು ಒತ್ತಿ ಹೇಳಿದರು.

ಭಾರತೀಯ ಕ್ರಿಕೆಟ್‌ನಲ್ಲಿ ಬಹಳಷ್ಟು ಸಮಯದಿಂದ ವೈಯಕ್ತಿಕ ಸಾಧನೆಗಳ ಬಗ್ಗೆ ಮಾತನಾಡಲಾಗುತ್ತಿದೆ. ಆದರೆ ಅಂತಿಮವಾಗಿ ಟ್ರೋಫಿ ಗೆಲ್ಲುವುದೇ ಮುಖ್ಯವೇ ಹೊರತು ವ್ಯಕ್ತಿಪೂಜೆ ಅಲ್ಲ ಎಂದು ಐಸಿಸಿ ವಿಶ್ವಕಪ್‌ ಫೈನಲ್‌ಗಳಲ್ಲಿ ಗರಿಷ್ಠ ಸ್ಕೋರರ್‌ ಆಗಿದ್ದ ಗೌತಮ್‌ ನುಡಿದರು.

ಕ್ರಿಕೆಟ್‌ ಮಾಧ್ಯಮಗಳು ವೈಯಕ್ತಿಕ ಸಾಧನೆಗಳನ್ನು ಸಂಭ್ರಮಿಸದೆ, ಟ್ರೋಫಿಗಳನ್ನು ಸಂಭ್ರಮಿಸಬೇಕು ಎಂದು ಬಿಜೆಪಿ ಮಾಜಿ ಸಂಸದ ಗಂಭೀರ್‌ ಆಗ್ರಹಿಸಿದರು.ಭಾರತೀಯ ಕ್ರಿಕೆಟ್‌ನಲ್ಲಿ ಗಂಭೀರ್‌ ಅವರು 2011ರ ಐಸಿಸಿ ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ ಬಾರಿಸಿದ 97 ರನ್‌ಗಳು ಮತ್ತು 2007ರ ಟಿ.20 ವಿಶ್ವಕಪ್‌ ಫೈನಲ್‌ನಲ್ಲಿ ಸಿಡಿಸಿದ 75 ರನ್‌ಗಳು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದನ್ನು ಇಲ್ಲಿ ನೆನೆಯಬಹುದು.

RELATED ARTICLES

Latest News