Homeಜಿಲ್ಲಾ ಸುದ್ದಿಗಳುಮೊದಲನೇ ಮಹಡಿಯಿಂದ ಆಯತಪ್ಪಿ ಕೆಳಗೆ ಬಿದ್ದ 3 ವರ್ಷದ ಮಗು ಸ್ಥಿತಿ ಗಂಭೀರ

ಮೊದಲನೇ ಮಹಡಿಯಿಂದ ಆಯತಪ್ಪಿ ಕೆಳಗೆ ಬಿದ್ದ 3 ವರ್ಷದ ಮಗು ಸ್ಥಿತಿ ಗಂಭೀರ

ಚಿಕ್ಕಬಳ್ಳಾಪುರ,ಜು.14- ಅಪ್ಪ-ಅಮನ ಜೊತೆ ಬಟ್ಟೆ ಅಂಗಡಿಯೊಂದಕ್ಕೆ ಬಂದಿದ್ದ 3 ವರ್ಷದ ಮಗು ಮೊದಲನೇ ಹಂತದ ಮಹಡಿಯಿಂದ ಆಯತಪ್ಪಿ ಕೆಳಗೆ ಬಿದ್ದಿರುವ ಘಟನೆ ಪಟ್ಟಣದ ಪಿಳ್ಳಪ್ಪ ಕಾಂಪ್ಲೆಕ್ಸ್ ನಲ್ಲಿ ನಡೆದಿದೆ.

ತಾಲ್ಲೂಕಿನ ಕೊಲುವನಹಳ್ಳಿ ಗ್ರಾಮದ ದಂಪತಿ ಪುತ್ರಿ ಗಗನಸಿಂಧು (3) ಅಪ್ಪ-ಅಮನ ಜೊತೆ ಬಟ್ಟೆ ಅಂಗಡಿಗೆ ಬಂದಿದ್ದು, ಈ ವೇಳೆ ಪೋಷಕರು ಬಟ್ಟೆ ಖರೀದಿಯಲ್ಲಿ ತೊಡಗಿದ್ದಾಗ ಮಗು ಆಟವಾಡಿಕೊಂಡು ಅಂಗಡಿಯ ಹೊರಗೆ ಬಂದಿದ್ದು, ಮೊದಲ ಮಹಡಿಯ ಗ್ರಿಲ್‌ ಮೇಲೆ ನಿಂತಿದ್ದಾಗ ಆಯತಪ್ಪಿ ಬಿದ್ದಿದೆ.

ಇದನ್ನು ಕೂಡಲೇ ಗಮನಿಸಿದ ಅಂಗಡಿಯವರು ಹಾಗೂ ಪೋಷಕರು ಕೂಗುತ್ತಾ ಮೇಲಿನಿಂದ ಕೆಳಗೆ ಇಳಿದುಬಂದಿದ್ದು, ಕೂಡಲೇ ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದು, ಪ್ರಾಣಾಪಾಯದಿಂದ ಮಗು ಪಾರಾಗಿದೆ.

RELATED ARTICLES

Latest News