ಬೆಂಗಳೂರು,ಫೆ.25- ನಗರದ ಸರ್ಜಾಪುರ ರಸ್ತೆಯಲ್ಲಿರುವ ಪ್ರತಿಷ್ಠಿತ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಆವರಣದಲ್ಲಿ ದೇಶವಿರೋಧಿ ಚಟುವಟಿಕೆಗಳು ನಡೆಯುತ್ತಿವೆ ಎಂದು ಆರೋಪಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಬೃಹತ್ ಪ್ರತಿಭಟನೆ ನಡೆಸಿದ್ದು, ಶಿಕ್ಷಣ ಸಂಸ್ಥೆಯ ಮಾನ್ಯತೆಯನ್ನು ರದ್ದುಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದೆ.
ವಿಶ್ವವಿದ್ಯಾಲಯದಲ್ಲಿ ಸಕ್ರಿಯವಾಗಿರುವ ಸ್ಪಾರ್ಕ್ ಮತ್ತು ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್(ಎಐಎಸ್‌ಎ) ಸಂಘಟನೆಗಳು ಭಾರತೀಯ ಸೈನಿಕರನ್ನು ಅವಮಾನಿಸುವಂತಹ ಮತ್ತು ಕಾಶೀರದ ಪ್ರತ್ಯೇಕತಾ ವಾದವನ್ನು ಬೆಂಬಲಿಸುವಂತಹ ಕಾರ್ಯಕ್ರಮಗಳನ್ನು ಆಯೋಜಿಸಿವೆ. ರಾಷ್ಟ್ರದ ಏಕತೆ ಮತ್ತು ಸಾರ್ವಭೌಮತ್ವಕ್ಕೆ ಧಕ್ಕೆ ತರುವಂತಹ ವಿಷಯಗಳನ್ನು ಚರ್ಚೆಯ ಹೆಸರಿನಲ್ಲಿ ಪ್ರಚೋದಿಸಲಾಗುತ್ತಿದೆ ಎಂಬುದು ಪ್ರತಿಭಟನಾಕಾರರ ಮುಖ್ಯ ದೂರಾಗಿದೆ.
ಪ್ರತಿಭಟನೆ ಕೇವಲ ಘೋಷಣೆಗಳಿಗೆ ಸೀಮಿತವಾಗದೆ, ಎಬಿವಿಪಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದೆ.
ಪತ್ರದಲ್ಲಿನ ಅಂಶಗಳು
ಮಾನ್ಯತೆ ರದ್ದು: ದೇಶವಿರೋಧಿ ಮನಸ್ಥಿತಿಗೆ ವೇದಿಕೆ ಮಾಡಿಕೊಡುತ್ತಿರುವ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಮಾನ್ಯತೆಯನ್ನು ತಕ್ಷಣ ರದ್ದುಗೊಳಿಸಬೇಕು. ಸಂಘಟನೆಗಳ ನಿಷೇಧ: ಸೈನಿಕರ ವಿರುದ್ಧ ದ್ವೇಷ ಹರಡುತ್ತಿರುವ ಸ್ಪಾರ್ಕ್ ಸಂಘಟನೆಯನ್ನು ನಿಷೇಧಿಸಬೇಕು.
ವಿವಿಯಿಂದ ಕ್ಷಮೆಯಾಚನೆ:
ರಾಷ್ಟ್ರವಿರೋಧಿ ಕೃತ್ಯಗಳಿಗೆ ಅವಕಾಶ ನೀಡಿದ್ದಕ್ಕಾಗಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಬಹಿರಂಗವಾಗಿ ಕ್ಷಮೆಯಾಚಿಸಬೇಕು.ಈ ಗಂಭೀರ ಆರೋಪಗಳನ್ನು ವಿಶ್ವವಿದ್ಯಾಲಯದ ಅಧಿಕಾರಿಗಳು ಮತ್ತು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಕಟುವಾಗಿ ನಿರಾಕರಿಸಿದ್ದಾರೆ. ಇದು ಕೇವಲ ಶೈಕ್ಷಣಿಕ ಚರ್ಚೆಯಾಗಿತ್ತು ಮತ್ತು ಯಾವುದೇ ಕಾನೂನು ಬಾಹಿರ ಚಟುವಟಿಕೆ ನಡೆದಿಲ್ಲ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.
ಘಟನೆಯ ಹಿನ್ನಲೆ
ಈ ವಿವಿಯಲ್ಲಿ ಭಾರತೀಯ ಸೈನಿಕರಿಗೆ ಅಪಮಾನ ಮಾಡುವಂತಹ ಹಾಗೂ ಕಾಶೀರ ಭೂಭಾಗ ವಿಚಾರಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸಿವೆ ಎಂದು ಎಬಿವಿಪಿ ಆರೋಪಿಸಿದೆ. ಅಜೀಂ ಪ್ರೇಮ್ ಜೀ ವಿಶ್ವವಿದ್ಯಾಲಯದಲ್ಲಿ ಸ್ಪಾರ್ಕ್ ಎನ್ನುವ ಸಂಘಟನೆ ದೇಶ ವಿರೋಧಿ ಚಿಂತನೆಗಳ ಕೂಟ ನಡೆಸಿದೆ ಎಂದು ಆರೋಪ ಮಾಡ್ತಿದ್ದಾರೆ. ಕಾಶೀರ ಭಾರತದ ಭೂಭಾಗವಲ್ಲ. ಭಾರತದವರು ಅಲ್ಲಿಗೆ ಹೋಗಿ ದೌರ್ಜನ್ಯ ಎಸಗುತ್ತಿದ್ದಾರೆ ಎನ್ನುವ ಬಗ್ಗೆ ಸ್ಪಾರ್ಕ್ ಸಂಘಟನೆ ದೇಶ ವಿರೋಧಿ ಕಾರ್ಯಕ್ರಮಗಳನ್ನ ರೂಪಿಸುತ್ತಿತ್ತು ಎಂದು ಆರೋಪಿಸಿದ್ದಾರೆ.
ಕಠಿಣ ಕ್ರಮಕ್ಕೆ ಆಗ್ರಹ
ಅದನ್ನ ವಿರೋಧಿಸಿ ಸಂಘಟನೆ ಪ್ರತಿಭಟನೆ ನಡೆಸಿದೆ. ಆದ್ರೆ ಕಾಲೇಜಿನವರು ಸೆಕ್ಯೂರಿಟಿ ಹಾಗೂ ವಿದ್ಯಾರ್ಥಿಗಳನ್ನ ಬಳಸಿಕೊಂಡು ನಮ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ರು. ನಾವು ಭಾರತ ಬಾವುಟ ಹಿಡಿದು ಪ್ರತಿಭಟನೆ ಮಾಡಿದಾಗ ವಿದ್ಯಾರ್ಥಿಗಳು ಅಶ್ಲೀಲ ಸನ್ನೆ ಮಾಡಿದ್ದಾರೆ ಎಂದು ಎಪಿವಿಪಿ ಕಾರ್ಯಕರ್ತರು ಆರೋಪ ಮಾಡಿದ್ದಾರೆ. ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವವರ ವಿರುದ್ದ ಕಠಿಣ ಕ್ರಮವಾಗಲಿ ಎಂದು ಆಗ್ರಹಿಸಿದ್ದಾರೆ.
ಮತ್ತೊಂದೆಡೆ ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಸಂಘ ಂಂ ಪ್ರಾಯೋಜಿತ ಂಖಏ ಎನ್ನುವ ಸಂಸ್ಥೆಯ ಮೂಲಕ ಯಾವುದೇ ದೇಶವಿರೋಧಿ ಚಿಂತನೆಗಳ ಕೂಟ ನಡೆದಿಲ್ಲ ಎಂದು ಕಾಲೇಜು ಆಡಳಿತ ಮಂಡಳಿ ತಿಳಿಸಿದೆ.
ಕಾಶೀರ ಮಹಿಳೆಯರ ಧ್ವನಿಯಾಗಿ ಕಾರ್ಯಕ್ರಮ ರಚನೆ ನಡೆದಿದೆ. ಯಾವುದೇ ದೇಶ ವಿರೋಧಿ ಚಿಂತನೆ ಅಲ್ಲ. ಆದರೆ ಪ್ರತಿಭಟನೆ ಮೂಲಕ ಚರ್ಚೆಗೆ ಹಾನಿ ಮಾಡಿದೆ ಎಂದು ವಿದ್ಯಾರ್ಥಿಗಳು ಆರೋಪ ಮಾಡಿದ್ದಾರೆ. ಎಐಎಸ್‌ಎ ವಿರುದ್ಧ ಕೆರಳಿ ಕೆಂಡವಾದ ವಿದ್ಯಾರ್ಥಿಗಳು ಬಲವಂತವಾಗಿ ಕ್ಯಾಂಪಸ್‌ಗೆ ನುಗ್ಗಿ ವಿಶ್ವವಿದ್ಯಾಲಯದ ಆಸ್ತಿಯನ್ನು ಧ್ವಂಸಗೊಳಿಸಿದ್ದಾರೆ. ವಿದ್ಯಾರ್ಥಿಗಳನ್ನು ದೇಶದ್ರೋಹಿಗಳು ಎಂದು ಕರೆದಿದ್ದಾರೆ. ಇವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.
ಅಜೀಂ ಪ್ರೇಮ್ ಜೀ ಯೂನಿವರ್ಸಿಟಿಯಲ್ಲಿ ಪ್ರತಿಭಟನೆ ಸಂಬಂಧ ಎಬಿವಿಪಿ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ಕೂಡ ದಾಖಲಾಗಿದೆ. ರಾತ್ರಿ ವೇಳೆ ಆನೇಕಲ್ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ. 21 ಮಂದಿಗೆ ಜಾಮೀನು ಮಂಜೂರು ಮಾಡಲಾಗಿದ್ದು, ನಸುಕಿನ ಜಾವ 3.30ರ ಸುಮಾರಿಗೆ ಎಬಿವಿಪಿ ಕಾರ್ಯಕರ್ತರನ್ನು ಬಿಡುಗಡೆ ಮಾಡಲಾಗಿದೆ.
