Homeರಾಜ್ಯಬೀದರ್‌ : ಎಸ್‌‍ಐಆರ್‌ ವೇಳೆ ಹೃದಯಾಘಾತದಿಂದ ಮತ್ತೊಬ್ಬ ಬಿಎಲ್‌ಒ ಸಾವು

ಬೀದರ್‌ : ಎಸ್‌‍ಐಆರ್‌ ವೇಳೆ ಹೃದಯಾಘಾತದಿಂದ ಮತ್ತೊಬ್ಬ ಬಿಎಲ್‌ಒ ಸಾವು

Bidar: Another BLO dies of heart attack during SIR

ಬೀದರ್‌: ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಸರ್ವೆ ಕಾರ್ಯದ ವೇಳೆ ಬಿಎಲ್‌ಒ ಹೃದಯಾಘಾತದಿಂದ ಮೃತಪಟ್ಟ ಘಟನೆ ಬೀದರ್‌ ಜಿಲ್ಲೆಯ ಅಮಲಾಪುರ ಗ್ರಾಮದಲ್ಲಿ ನಡೆದಿದೆ.

45 ವರ್ಷದ ಸುನೀಲ್‌ ಮೃತ ಬಿಎಲ್‌ಒ ಭಾಲ್ಕಿ ತಾಲೂಕಿನ ಮೂಲದ ಸುನೀಲ್‌ ಅವರು ಕಳೆದ ಹಲವು ದಿನಗಳಿಂದ ಎಸ್‌‍ಐಆರ್‌ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಅಮಲಾಪುರ ಗ್ರಾಮದ 33ನೇ ಬೂತ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದ್ದು, ಬಳಿಕ ಕುಸಿದು ಬಿದ್ದಿದ್ದಾರೆ.

ಸ್ಥಳೀಯರು ತಕ್ಷಣವೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ವೇಳೆ ಸ್ಟಂಟ್‌ ಅಳವಡಿಸುವ ಸಂದರ್ಭದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಘಟನೆ ಗಾಂಧಿಗಂಜ್‌ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

RELATED ARTICLES
spot_img

Latest News