ಬೆಂಗಳೂರು,ಏ.5- ಮಹಿಳಾ ಕಸ್ಟಮ್ಸೌ ಅಧಿಕಾರಿಯೊಬ್ಬರಿಗೆ ಪ್ರೀತಿಯ ನಾಟಕವಾಡಿ ಸಲುಗೆ ಬೆಳೆಸಿಕೊಂಡು ಬ್ಲಾಕ್‌ಮೇಲ್ ಮಾಡಿ ಲೈಂಗಿಕ ದೌರ್ಜನ್ಯವೆಸಗಿದ್ದ ಉದ್ಯಮಿಯನ್ನು ಇಂದಿರಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಒಂಬತ್ತು ವರ್ಷದ ಹಿಂದೆ ಮಹಿಳಾ ಕಸ್ಟಮ್ಸೌ ಅಧಿಕಾರಿಯೊಬ್ಬರ ಹಿಂದೆ ಬಿದ್ದು ಉದ್ಯಮಿ ಕೃಪಲಾನಿ ಎಂಬಾತ ಪರಿಚಯ ಮಾಡಿಕೊಂಡು ಸ್ನೇಹ ಬೆಳೆಸಿದ್ದಾನೆ.ಆರೋಪಿ ಕೃಪಲಾನಿ ಎಲೆಕ್ಟ್ರಾನಿಕ್ ಬ್ಯುಸಿನೆಸ್ ನಡೆಸುತ್ತಿದ್ದು, ಈ ಕಸ್ಟಮ್ಸೌ ಮಹಿಳಾ ಅಧಿಕಾರಿ ಜೊತೆ ಪ್ರೀತಿಯ ನಾಟಕವಾಡಿ ಮದುವೆ ಮಾಡಿಕೊಳ್ಳುವುದಾಗಿ ಆಮಿಷವೊಡ್ಡಿ ಲೈಂಗಿಕ ದೌರ್ಜನ್ಯ ವೆಸಗಿದ್ದಾನೆ.
ನಾನು ಹೇಳಿದಂತೆ ಕೇಳದಿದ್ದರೆ ನಿಮ ಖಾಸಗಿ ಫೋಟೋ , ವಿಡಿಯೋ ವೈರಲ್ ಮಾಡುವುದಾಗಿ ಸಹ ಆರೋಪಿ ಬೆದರಿಸಿದ್ದಾನೆ.ದಿನ ಕಳೆದಂತೆ ಉದ್ಯಮಿಯ ವರ್ತನೆಯಿಂದ ಬೇಸತ್ತು ಈ ಅಧಿಕಾರಿ ಯಲಹಂಕ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅತ್ಯಾಚಾರ ಪ್ರಕರಣ ದಾಖಲಾಗಿದೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಇಂದಿರಾನಗರ ಪೊಲೀಸ್ ಠಾಣೆಗೆ ವರ್ಗಾಯಿಸಿ ತನಿಖೆಗಾಗಿ ಪುಲಕೇಶಿನಗರ ಉಪವಿಭಾಗದ ಎಸಿಪಿ ಹಾಗೂ ಇನ್‌್ಸಪೆಕ್ಟರ್‌ಗೆ ಸೂಚಿಸಲಾಗಿತ್ತು.
ತನಿಖೆ ಕೈಗೊಂಡ ಪೊಲೀಸರು ಆರೋಪಿ ಉದ್ಯಮಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಈ ಮಹಿಳಾ ಅಧಿಕಾರಿಯ ಕಣ್ತಪ್ಪಿಸಿ ಆರೋಪಿ ಅವ್ಯವಹಾರ ನಡೆಸಿದ್ದಾನೆ.ಅಷ್ಟೇ ಅಲ್ಲದೆ ಕೆಲಸದ ಕೆಲ ಲೂಪ್‌ಗಳನ್ನು ತಿಳಿದುಕೊಂಡು ಈ ಅಧಿಕಾರಿಯನ್ನು ಬಳಸಿಕೊಂಡು ಕೆಲ ಕಸ್ಟಮ್ಸೌ ಅಧಿಕಾರಿಗಳ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಹಣ ಕೂಡ ಪಡೆದಿದ್ದಾನೆ ಎಂಬ ಆರೋಪ ಸಹ ಕೇಳಿ ಬಂದಿದೆ.ಈ ಎಲ್ಲಾ ಆರೋಪಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
