Thursday, April 16, 2026
Homeರಾಜ್ಯಮದ್ಯ ಸೇವಿಸಿ ಪೊಲೀಸರಿಗೆ ಸಿಕ್ಕಿಬಿದ್ದ ಲಾರಿ ಚಾಲಕ ಆತ್ಮಹತ್ಯೆ

ಮದ್ಯ ಸೇವಿಸಿ ಪೊಲೀಸರಿಗೆ ಸಿಕ್ಕಿಬಿದ್ದ ಲಾರಿ ಚಾಲಕ ಆತ್ಮಹತ್ಯೆ

Lorry driver commits suicide after being caught by police under

ಬೆಂಗಳೂರು,ಏ.5- ಲಾರಿ ಚಾಲಕನೊಬ್ಬ ನೇಣು ಬಿಗಿದುಕೊಂಡು ಆತಹತ್ಯೆ ಮಾಡಿಕೊಂಡಿರುವ ಘಟನೆ ಜೆ ಪಿ ನಗರ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ತಮಿಳುನಾಡು ಮೂಲದ ಷಣುಗ (26) ಆತಹತ್ಯೆಗೆ ಶರಣಾದ ಲಾರಿ ಚಾಲಕ.

ತಮಿಳುನಾಡಿನಿಂದ ಲಾರಿಯಲ್ಲಿ ಲೋಡ್‌ ಮಾಡಿಕೊಂಡು ಚಾಲಕ ಬೆಂಗಳೂರಿಗೆ ಬಂದು ಜೆಪಿನಗರ 22ನೇ ಮುಖ್ಯರಸ್ತೆಯಲ್ಲಿ ಹೋಗುತ್ತಿದ್ದರು.ಆ ಸಂದರ್ಭದಲ್ಲಿ ಜೆಪಿನಗರ ಸಂಚಾರಿ ಠಾಣೆ ಪೊಲೀಸರು ಡ್ರಂಕ್‌ ಅಂಡ್‌ ಡ್ರೈವ್‌ ಪರಿಶೀಲನೆ ಮಾಡಲು ವಾಹನಗಳನ್ನು ತಪಾಸಣೆ ಮಾಡುತ್ತಿದ್ದರು.

ಇದೇ ಮಾರ್ಗದಲ್ಲಿ ಬಂದ ಈ ಲಾರಿಯನ್ನು ತಡೆದು ಚಾಲಕನನ್ನು ಪರೀಕ್ಷಿಸಿದಾಗ ಮದ್ಯ ಸೇವಿಸಿರುವುದು ಕಂಡು ಬಂದಿದೆ. ಹಾಗಾಗಿ ಆತನಿಗೆ ನೋಟೀಸ್‌‍ ಕೊಟ್ಟು ಕಳುಹಿಸಿದ್ದಾರೆ.
ಇದರಿಂದ ಬೇಸರಗೊಂಡು ಲಾರಿ ಚಾಲಕ ಮಾಲೀಕರಿಗೆ ಗೊತ್ತಾದರೆ ನನಗೆ ಬೈಯುತ್ತಾರೆಂದು ಹೆದರಿ 32ನೇ ಮುಖ್ಯ ರಸ್ತೆಗೆ ಹೋಗಿ ಲಾರಿ ಸ್ಟ್ಯಾಂಡ್‌ನಲ್ಲಿ ನಿಲ್ಲಿಸಿದ್ದ ಲಾರಿಯ ಟಾಪ್‌ನ ಹುಕ್ಕಿಗೆ ಹಗ್ಗದಿಂದ ನೇಣು ಬಿಗಿದುಕೊಂಡು ಆತಹತ್ಯೆ ಮಾಡಿಕೊಂಡಿದ್ದಾನೆ.

ಈ ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು, ಮೃತನ ಕುಟುಂಬಕ್ಕೆ ಮಾಹಿತಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News