Homeರಾಜ್ಯಚರ್ಚೆಗೆ ಗ್ರಾಸವಾಗಿದೆ 6 ತಿಂಗಳು ತುಂಬುವ ಮುನ್ನವೇ ಚಿಕ್ಕಮಗಳೂರು ಡಿಸಿ ವರ್ಗಾವಣೆ

ಚರ್ಚೆಗೆ ಗ್ರಾಸವಾಗಿದೆ 6 ತಿಂಗಳು ತುಂಬುವ ಮುನ್ನವೇ ಚಿಕ್ಕಮಗಳೂರು ಡಿಸಿ ವರ್ಗಾವಣೆ

Chikkamagaluru DC transfer before completing six months

ಬೆಂಗಳೂರು, ಮೇ 20-ಚಿಕ್ಕಮಗಳೂರು ಜಿಲ್ಲಾಧಿಕಾರಿಯಾಗಿದ್ದ ನಾಗರಾಜ ಎನ್‌.ಎಂ.ಅವರನ್ನು ಅಧಿಕಾರ ವಹಿಸಿಕೊಂಡು ಆರು ತಿಂಗಳು ತುಂಬುವ ಮುನ್ನವೇ ರಾಜ್ಯ ಸರ್ಕಾರ ವರ್ಗಾವಣೆ ಮಾಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಸಾಮಾನ್ಯವಾಗಿ ಐಎಎಸ್‌‍ ಅಧಿಕಾರಿಯನ್ನು ಒಂದು ಹುದ್ದೆಯಿಂದ ಮತ್ತೊಂದು ಹುದ್ದೆಗೆ ವರ್ಗಾವಣೆ ಮಾಡಲು ಎರಡು ವರ್ಷ ಬೇಕು. ಆದರೆ, ರಾಜ್ಯ ಸರ್ಕಾರ ಕೇವಲ ನಾಲ್ಕೂವರೆ ತಿಂಗಳಿಗೆ ನಾಗರಾಜ್‌ ಅವರನ್ನು ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಹುದ್ದೆಯಿಂದ ವರ್ಗಾವಣೆ ಮಾಡಿ ಆದೇಶಿಸಿದೆ.

ಸಕಾರಣವಿಲ್ಲದೆ, ಗಂಭೀರ ಆರೋಪಗಳು ಇಲ್ಲದಿದ್ದರೂ ಅವಧಿಗೂ ಮುನ್ನ ಐಎಎಸ್‌‍ ಅಧಿಕಾರಿಯನ್ನು ವರ್ಗಾವಣೆ ಮಾಡುವುದರಿಂದ ಅದರಲ್ಲೂ ಸರಿಸಮನಾದ ಹುದ್ದೆಗೆ ಬದಲಾಗಿ ಬೇರೊಂದು ಹುದ್ದೆ ನೀಡುವುದರಿಂದ ಅಧಿಕಾರಿಯ ನೈತಿಕ ಸ್ಥೈರ್ಯ ಕುಗ್ಗಿಸಿದಂತಾಗುತ್ತದೆ ಎಂಬ ಆರೋಪಗಳು ಸಾರ್ವಜನಿಕವಾಗಿ ಕೇಳಿಬರುತ್ತಿವೆ.

2016ರ ಕರ್ನಾಟಕ ಬ್ಯಾಚ್‌ನ ಐಎಎಸ್‌‍ ಅಧಿಕಾರಿಯಾಗಿರುವ ನಾಗರಾಜ ಎನ್‌.ಎಂ. ಅವರನ್ನು ಚಿಕ್ಕಮಗಳೂರು ಜಿಲ್ಲಾಧಿಕಾರಿ ಹುದ್ದೆಯಿಂದ ಕರ್ನಾಟಕ ರಾಜ್ಯ ಏಡ್‌್ಸ ನಿಯಂತ್ರಣ ಸೊಸೈಟಿಯ ಓಂಬುಡ್‌್ಸಮನ್‌ ಹುದ್ದೆಗೆ ನಿನ್ನೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಕಲಬುರಗಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಭನ್ವರ್‌ಸಿಂಗ್‌ ಮೀನಾ ಅವರನ್ನು ಚಿಕ್ಕಮಗಳೂರು ಜಿಲ್ಲಾಧಿಕಾರಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ನಾಗರಾಜ್‌ ಅವರ ಮೇಲೆ ಗಂಭೀರ ಸ್ವರೂಪದ ಆರೋಪಗಳು ಇಲ್ಲದಿದ್ದರೂ ಏಕಾಏಕಿ ವರ್ಗಾವಣೆ ಮಾಡಿರುವುದು, ಅದರಲ್ಲೂ ಸಮಾನ ಹುದ್ದೆ ನೀಡದೇ ಓಂಬುಡ್‌್ಸಮನ್‌ ಹುದ್ದೆ ನೀಡಿರುವುದು ರಾಜಕೀಯವಾಗಿ, ಅಧಿಕಾರಿಗಳ ಮಟ್ಟದಲ್ಲಿ ಹಾಗೂ ಸಾರ್ವಜನಿಕವಾಗಿ ಗಂಭೀರ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಅಲ್ಲದೆ, ಸರ್ಕಾರದ ಈ ನಿರ್ಧಾರವೂ ಅನುಮಾನಕ್ಕೆ ಆಸ್ಪದ ನೀಡಿದೆ.

ಐಎಎಸ್‌‍, ಐಪಿಎಸ್‌‍ ಹಾಗೂ ಐಎಫ್‌ಎಸ್‌‍ ಅಧಿಕಾರಿಗಳನ್ನು ರಾಜ್ಯ ಸರ್ಕಾರ ಆಡಳಿತಾನುಕೂಲಕ್ಕಾಗಿ ಕಾಲ ಕಾಲಕ್ಕೆ ವರ್ಗಾವಣೆ ಮಾಡುತ್ತದೆ. ಎರಡು ವರ್ಷ ತುಂಬುವ ಮೊದಲೇ ಸರ್ಕಾರ ತನ್ನ ವಿವೇಚನಾನುಸಾರ ವರ್ಗಾವಣೆ ಮಾಡುತ್ತದೆ.ಅಂದರೆ, ಒಬ್ಬ ಅಧಿಕಾರಿಯ ಮೇಲೆ ಗಂಭೀರ ಸ್ವರೂಪದ ಆರೋಪಳಿದ್ದಾಗ, ಸಾರ್ವಜನಿಕರ ಒತ್ತಡ, ಆಡಳಿತಾತಕ ಕಾರಣಗಳಿಗಾಗಿ ವರ್ಗಾವಣೆ ಮಾಡಲಾಗುತ್ತದೆ. ಅಂತಹ ಸಂಗತಿಗಳು ಈ ವರ್ಗಾಣೆಯಲ್ಲಿ ಕಂಡುಬರುತ್ತಿಲ್ಲ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.

ಐಎಎಸ್‌‍ ಅಧಿಕಾರಿಯನ್ನು ಸರ್ಕಾರದ ವಿವೇಚನಾನುಸಾರ ಸರಿಸಮಾನವಲ್ಲದಿದ್ದರೂ ಬೇರೆ ಬೇರೆ ಹುದ್ದೆಗಳಿಗೆ ವರ್ಗಾವಣೆ ಮಾಡಲು ಅವಕಾಶವಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಸಿವೆ.

ಇಂತಹ ವರ್ಗಾವಣೆಗಳಾದಾಗ ಬಹುತೇಕ ಐಎಎಸ್‌‍, ಐಪಿಎಸ್‌‍ ಹಾಗೂ ಐಎಫ್‌ಎಸ್‌‍ ಅಧಿಕಾರಿಗಳು ತಕರಾರು ಮಾಡದೆ ಪಾಲನೆ ಮಾಡುತ್ತಾರೆ. ಸರ್ಕಾರ ಆಡಳಿತಾತಕವಾಗಿ ವರ್ಗಾಯಿಸಿದೆ ಎಂದೇ ಭಾವಿಸುತ್ತಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ನಡೆದ ನಂತರದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ವರ್ಗಾವಣೆ ಮಾಡಿರಬಹುದು ಎಂಬ ಚರ್ಚೆಗಳು ನಡೆಯುತ್ತಿವೆ.

ಹೈಕೋರ್ಟಿನ ಆದೇಶದಂತೆ ಶೃಂಗೇರಿ ಕ್ಷೇತ್ರ ಚುನಾವಣಾಧಿಕಾರಿಯಾಗಿ ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಗೌರವ್‌ಕುಮಾರ್‌ ಶೆಟ್ಟಿ ಕಾರ್ಯನಿರ್ವಹಿಸಿದ್ದರು. ಅಂಚೆ ಮತ ಎಣಿಕೆ ಹಾಗೂ ಫಲಿತಾಂಶ ಪ್ರಕಟಣೆಯ ಬಗ್ಗೆ ಕಾಂಗ್ರೆಸ್‌‍ ಅಭ್ಯರ್ಥಿ ಆಕ್ಷೇಪ ವ್ಯಕ್ತಪಡಿಸಿದ್ದರು. ಜಿಲ್ಲಾಧಿಕಾರಿಯಾಗಿದ್ದ ನಾಗರಾಜ್‌ ಅವರು ಜಿಲ್ಲಾ ಚುನಾವಣಾಧಿಕಾರಿಯಾಗಿದ್ದರು.

RELATED ARTICLES

Latest News