Homeರಾಜ್ಯಅಶಿಸ್ತು ತೋರಿಸಿದರೆ ಮುಲಾಜಿಲ್ಲದೇ ವಜಾ : ಪೊಲೀಸರಿಗೆ ಆಯುಕ್ತರ ಖಡಕ್‌ ಎಚ್ಚರಿಕೆ

ಅಶಿಸ್ತು ತೋರಿಸಿದರೆ ಮುಲಾಜಿಲ್ಲದೇ ವಜಾ : ಪೊಲೀಸರಿಗೆ ಆಯುಕ್ತರ ಖಡಕ್‌ ಎಚ್ಚರಿಕೆ

Commissioner seemant Kumar Singh warns police officers against indiscipline

ಬೆಂಗಳೂರು,ಜು.3-ಪೊಲೀಸ್‌‍ ಇಲಾಖೆ ಶಿಸ್ತಿನ ಇಲಾಖೆ.ಯಾವುದೇ ರ್ಯಾಂಕ್‌ನ ಅಧಿಕಾರಿಗಳು, ಸಿಬ್ಬಂದಿಗಳು ಅಶಿಸ್ತನ್ನು ತೋರಿಸಿದರೆ ಮುಲಾಜಿಲ್ಲದೆ ಅವರನ್ನು ವಜಾ ಮಾಡಲಾಗುವುದೆಂದು ನಗರ ಪೊಲೀಸ್‌‍ಆಯುಕ್ತ ಸೀಮಂತ್‌ಕುಮಾರ್‌ ಸಿಂಗ್‌ ಎಚ್ಚರಿಸಿದರು.ಆಡುಗೋಡಿಯ ಸಿಎಆರ್‌ ದಕ್ಷಿಣ ಕವಾಯಿತು ಮೈದಾನದಲ್ಲಿ ಹಮಿಕೊಂಡಿದ್ದ ಮಾಸಿಕ ಪರೇಡ್‌ ವೀಕ್ಷಿಸಿ ನಂತರ ಅವರು ಮಾತನಾಡಿದರು.

ಅಶಿಸ್ತು ತೋರಿದ ಕೆಲವರ ಮೇಲೆ ಈಗಾಗಲೇ ಕಠಿಣ ಕ್ರಮ ಕೈಗೊಂಡಿದ್ದೇವೆ. ಕರ್ತವ್ಯದಲ್ಲಿ ಲೋಪ ಕಂಡು ಬಂದರೆ ನಿರ್ಧಾಕ್ಷಿಣ್ಯವಾಗಿ ಅಮಾನತು ಮಾಡುವುದಾಗಿ ತಿಳಿಸಿದರು.ನಮ 112 ಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಈ ಹಿಂದೆ ಸ್ಥಳಕ್ಕೆ ತೆರಳಲು 13 ನಿಮಿಷವಾಗುತ್ತಿತ್ತು. ಇದೀಗ ಕೇವಲ 6 ನಿಮಿಷ 30 ಸೆಕೆಂಡ್‌ ಒಳಗೆ ಘಟನಾ ಸ್ಥಳಕ್ಕೆ ತಲುಪುತ್ತಿದ್ದಾರೆ. ಇದು ಅತ್ಯಂತ ಶ್ಲಾಘನೀಯ, ಇದು ಬೆಂಗಳೂರು ಪೊಲೀಸರ ಮೆಚ್ಚುಗೆ ಕೆಲಸ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಬೆಂಗಳೂರಿನಂತಹ ದೊಡ್ಡ ಸಿಟಿಯಲ್ಲಿ ತೊಂದರೆಗೊಳಗಾದವರಿಗೆ ಸ್ಪಂದನೆಯೇ ಬಹಳ ಮುಖ್ಯ. ನಮ 112 ಗೆ ಕರೆ ಬಂದ ತಕ್ಷಣ ಹತ್ತಿರದಲ್ಲಿರುವ ವಾಹನ ಸ್ಥಳಕ್ಕೆ ತಲುಪಲಿದೆ. ಇದೊಂದು ಒಳ್ಳೆಯ ಬೆಳವಣಿಗೆ ಎಂದರು.

ಅಂತರಾಷ್ಟ್ರೀಯ ಮಾದಕ ವ್ಯಸನ ಮತ್ತು ಕಳ್ಳ ಸಾಗಾಣೆ ವಿರೋಧಿ ದಿನ ಅಂಗವಾಗಿ ರಾಜ್ಯ ಸರ್ಕಾರವು ನಗರದ ಕಂಠೀರವ ಕ್ರೀಡಾಂಗಣದಲ್ಲಿ ಹಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಹಾಗೂ ಗೃಹಸಚಿವರು ರೈಸ್‌‍ ಹಾಗೂ ಬೇಡ ಬ್ರೋ ಎಂಬ ಎರಡು ಮಹತ್ವದ ಉಪಕ್ರಮಗಳಿಗೆ ಚಾಲನೆ ನೀಡಿದ್ದಾರೆ. ಈ ಅಭಿಯಾನದಲ್ಲಿ ಕಾನ್‌ಸ್ಟೇಬಲ್‌ನಿಂದ ಹಿಡಿದು ಕಮಿಷನರ್‌ ಮಟ್ಟದ ವರೆಗೂ ಪಾಲ್ಗೊಳ್ಳಬೇಕು ಎಂದು ಹೇಳಿದರು.

ಇದೊಂದು ವಿಶೇಷ ಅಭಿಯಾನ. ಸಂಚಾರಿ ಪೊಲೀಸರು, ಸಿಎಆರ್‌, ಬೇರೆ ಬೇರೆ ಘಟಕಗಳ ಸಿಬ್ಬಂದಿಗಳು ತಮಗೂ ಇದಕ್ಕೂ ಸಂಬಂಧವಿಲ್ಲವೆಂದುಕೊಳ್ಳಬಾರದು. ಎಲ್ಲರೂ ಡ್ರಗ್‌್ಸ ವಿರುದ್ಧದ ಅಭಿಯಾನದಲ್ಲಿ ಪಾಲ್ಗೊಳ್ಳಬೇಕೆಂದು ಸಲಹೆ ನೀಡಿದರು.ನಗರದಲ್ಲಿ ಒಟ್ಟು 20 ಸಾವಿರ ಸಿಬ್ಬಂದಿ ಇದ್ದಾರೆ. ಪತ್ರಿಯೊಬ್ಬ ಸಿಬ್ಬಂದಿಯೂ ಕರ್ತವ್ಯದ ಸಂದರ್ಭದಲ್ಲಿ ಡ್ರಗ್ಸ್ ಸೇವನೆ,ಸಾಗಾಟ, ಮಾರಾಟ ಕಂಡು ಬಂದ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.

ಉತ್ತಮ ಸಮಾಜ ನಿರ್ಮಾಣಕ್ಕೆ ಜನರಿಗೆ ಸ್ಪಂದಿಸಬೇಕು. ಈಗಾಗಲೇ ನಾವು ಒಂದು ವರ್ಷದಲ್ಲಿ 350 ಕೋಟಿ ಬೆಲೆಯ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದೇವೆ. ಮುಂದೆಯೂ ಸಹ ಡ್ರಗ್‌್ಸ ವಿರುದ್ಧ ನಿರಂತರ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ತಿಳಿಸಿದರು. ಸರ್ಕಾರ ಬದಲಾಣೆ ವೇಳೆ ಸಿಬ್ಬಂದಿ ಉತ್ತಮ ಕೆಲಸ ಮಾಡಿದ್ದಾರೆ. ಇದೊಂದು ನಮಗೆ ಸವಾಲಾಗಿತ್ತು. ಯಾವುದೇ ಸಣ್ಣಪುಟ್ಟ ಘಟನೆಯೂ ನಡೆಯದಂತೆ ಕರ್ತವ್ಯ ನಿಭಾಯಿಸಿದ್ದಾರೆ. ಮುಂದೆಯೂ ಸಹ ಇದೇ ರೀತಿ ಕೆಲಸ ನಿರ್ವಹಿಸಬೇಕು, ಹಬ್ಬ ಹರಿದಿನಗಳಲ್ಲಿ ಸೂಕ್ತ ಬಂದೋಬಸ್ತ್‌ ಮಾಡಿಕೊಳ್ಳಬೇಕೆಂದು ಆಯುಕ್ತರು ಸೂಚಿಸಿದರು.

RELATED ARTICLES

Latest News