ಬೆಂಗಳೂರು,ಮೇ 15-ನಗರದಲ್ಲಿ ಮೆಟ್ರೋ ಹಳದಿ ಮಾರ್ಗ ಕಾರ್ಯಾಚರಣೆ ಆರಂಭವಾದ ಬಳಿಕ ರಾಗಿಗುಡ್ಡ ಮೆಟ್ರೋ ನಿಲ್ದಾಣ ಬಳಿ ಫ್ಲೈ ಓವರ್ ಇಳಿಯುವ ಮುಂಚೆಯೇ ಕಿಲೋ ಮೀಟರ್ ನಷ್ಟು ಟ್ರಾಫಿಕ್ ಜಾಮ್ ಎದುರಾಗುತ್ತಿದ್ದು, ವಾಹನ ಸವಾರರಿಗೆ ಪೀಕಲಾಟವಾಗಿದೆ.
ಈ ಮಾರ್ಗದ ಡಬಲ್ ಡೆಕ್ಕರ್‌ಫ್ಲೈ ಓವರ್ ಕೂಡ ವಾಹನ ಸವಾರರಿಗೆ ವರದಾನವಾಗಿರುವ ನಡುವೆಯೇ ಹೊಸ ಸಮಸ್ಯೆ ಉಲ್ಬಣಗೊಂಡಿದೆ.ಮೆಟ್ರೋ ಹಳದಿ ಮಾರ್ಗದಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ಡಬಲ್ ಡೆಕ್ಕರ್ ್ಲೖೆ ಓವರ್ ನಿರ್ಮಾಣವಾಗಿದೆ. ನಿಜಕ್ಕೂ ಇದು ವಾಹನ ಸವಾರರಿಗೆ ನಿರಾಳ ತಂದಿದೆ. ಆದರೆ ನಿರ್ಮಾಣ ಮಾಡಲಾದ ಲೂಪ್ ಮತ್ತು ಇಳಿಜಾರು ಸೇರಿ 5.12 ಕಿಲೋ ಮೀಟರ್ ಉದ್ದವಿರುವ ಮೇಲ್ಸೇತುವೆ ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್ ವರೆಗೆ ಸಂಪರ್ಕ ಕಲ್ಪಿಸುತ್ತೆ.
ಆದರೆ ಮೇಲ್ಸೇತುವೆ ನಿರ್ಗಮನದ ಬಳಿ ಸಂಚಾರ ದಟ್ಟಣೆ ಉಂಟಾಗುತ್ತಿರುವುದರಿಂದ ಸಾರ್ವಜನಿಕರು ಕಿರಿಕಿರಿ ಅನುಭವಿ ಸುವಂತಾಗಿ ಪೀಕ್ ಅವರ್ ನಲ್ಲಂತೂ ಕಿಲೋ ಮೀಟರ್ ಗಟ್ಟಲೆ ಜಾಮ್ ಆಗುತ್ತಿರುವುದು ಕಂಡು ಬರುತ್ತಿದೆ.
ಈ ಸಮಸ್ಯೆಗೆ ಪರಿಹಾರ ಕಲ್ಪಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಟ್ರಾಫಿಕ್ ಕಿರಿಕಿರಿ ಮತ್ತಷ್ಟು ಕಗ್ಗಂಟಾಗಿ ಕಾಡಲಿದೆ ಎಂದು ಸಾರ್ವಜನಿಕರು ಬೇಸರ ಹೊರಹಾಕಿದ್ದಾರೆ. ಒಟ್ಟಾರೆ ಡಬಲ್ ಡೆಕ್ಕರ್ ಫ್ಲೈ ಓವರ್ ನಗರದ ಮತ್ತಷ್ಟು ಹೊಸ ಮಾರ್ಗಗಳಲ್ಲಿ ಬರಬೇಕು ಎಂಬ ಬೇಡಿಕೆ ಇದೆ. ಆದರೆ ಡಬಲ್ ಡೆಕ್ಕರ್‌ಫ್ಲೈ ಓವರ್ ನಿರ್ಮಾಣದ ಬಳಿಕ ಆಗುವ ಸಾಧಕ ಬಾಧಕಗಳ ಬಗ್ಗೆಯೂ ಅಧಿಕಾರಿಗಳು ನಿಗಾ ವಹಿಸಬೇಕು. ಇಲ್ಲವಾದಲ್ಲಿ ಡಬಲ್ ಡೆಕ್ಕರ್ ್ಲೖೆ ಓವರ್ ಗಳು ಸಂಚಾರ ದಟ್ಟಣೆ ಹೆಚ್ಚಾಗುತ್ತದೇ ಹೊರತು ನಿವಾರಣೆಯಾಗುವುದಿಲ್ಲ ಎಂದು ವಾಹನ ಸವಾರರು ಬೇಸರ ವ್ಯಕ್ತಪಡಿಸಿದ್ದಾರೆ.
