ಬೆಂಗಳೂರು,ಮೇ 15- ಬಹುಭಾಷಾ ನಟಿಯೊಬ್ಬರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಅಸಭ್ಯ ಮತ್ತು ಕೀಳು ಮಟ್ಟದ ಸಂದೇಶಗಳನ್ನು ಕಳುಹಿಸಿದ ವ್ಯಕ್ತಿಗೆ ನಟಿ ತಿರುಗೇಟು ನೀಡಿದ್ದು, ಇದೀಗ ಆತ ಕ್ಷಮೆಯಾಚಿಸಿದ್ದಾನೆ.
ಮಹೇಶ್ ಹೊಸಮನಿ ಎಂಬ ಹೆಸರಿನ ಖಾತೆಯಿಂದ ಆರೋಪಿಯು ತಾನು ಪೊಲೀಸ್ ಎಂದು ಬಿಂಬಿಸಿಕೊಂಡಿದ್ದು, ಆತನ ಮೆಸೇಜ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ತಕ್ಕ ಉತ್ತರ ನೀಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಮಹೇಶ್ ಹೊಸಮನಿ ಎಂಬಾತ ತನ್ನ ಖಾತೆಯಿಂದ ನಟಿಗೆ ಅಸಭ್ಯ ಭಾಷೆಯಲ್ಲಿ ಪ್ರಶ್ನೆ ಕೇಳಿದ್ದಾನೆ.
ಇದರಿಂದ ಕೆರಳಿದ ನಟಿ , ಆತನ ಪೊೈಲ್ ಫೋಟೋ ಮತ್ತು ಮೆಸೇಜ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ಸಾಮಾಜಿಕ ಜಾಲ ತಾಣದಲ್ಲಿ ಬಹಿರಂಗಪಡಿಸಿದ್ದಾರೆ. ನಟಿಯ ದಿಟ್ಟ ಉತ್ತರಕ್ಕೆ ಕಂಗಾಲಾದ ಆ ವ್ಯಕ್ತಿ, ತನ್ನ ತಪ್ಪನ್ನು ಒಪ್ಪಿಕೊಂಡು ಬೇಷರತ್ ಕ್ಷಮೆಯಾಚಿಸಿದ್ದಾನೆ.
ಈ ವ್ಯಕ್ತಿ ಪೊೈಲ್ ಚಿತ್ರದಲ್ಲಿ ಪೊಲೀಸ್ ಸಮವಸ ಧರಿಸಿರುವುದು ನಟಿಯ ಆಕ್ರೋಶಕ್ಕೆ ಪ್ರಮುಖ ಕಾರಣವಾಗಿದೆ. ತಮಗೆ ಬಂದಿರುವ ಸ್ಕ್ರೀನ್‌ಶಾಟ್ ಅನ್ನು ಸಾಮಾಜಿಕ ಜಾಲ ತಾಣದಲ್ಲಿ ಹಂಚಿಕೊಂಡಿರುವ ನಟಿ, ನೇರವಾಗಿ ಬೆಂಗಳೂರು ಸಿಟಿ ಪೊಲೀಸ್ ಖಾತೆಗೆ ಟ್ಯಾಗ್ ಮಾಡಿದ್ದಾರೆ.
ಈ ನಡುವೆ ನಟಿ ಸಾರ್ವಜನಿಕವಾಗಿ ಪ್ಟೋ್ ಹಂಚಿಕೊಳ್ಳುತ್ತಿದ್ದಂತೆ ಅಸಭ್ಯವಾಗಿ ವರ್ತಿಸುತ್ತಿದ್ದ ಮಹೇಶ್ ಹೊಸಮನಿ ತನ್ನ ಕೆರಿಯರ್‌ಗೆ ತೊಂದರೆಯಾಗಬಹುದು ಎಂದು ಅರಿತು ತಕ್ಷಣ ನಟಿಗೆ ಸಂದೇಶ ಕಳುಹಿಸಿ ಪೋಸ್ಟ್‌ನ್ನು ಸಾಮಾಜಿಕ ಜಾಲ ತಾಣದಿಂದ ತೆಗೆಯುವಂತೆ ಮನವಿ ಮಾಡಿಕೊಂಡಿದ್ದಾನೆ.
ಸಾರಿ ಮೇಡಂ, ಅಕ್ಷರಗಳು ತಪ್ಪಾಗಿರಬಹುದು ಆದರೆ ನಾನು ನಿಮ ಮೇಲಿನ ಕಾಳಜಿಯಿಂದ ಹಾಗೆ ಹೇಳಿದೆ. ನಾನು ನಿಮ ಅಭಿಮಾನಿ, ದಯವಿಟ್ಟು ಸ್ಟೋರಿ ತೆಗೆಯಿರಿ, ಇದು ನನ್ನ ವೃತ್ತಿಜೀವನಕ್ಕೆ ಸಮಸ್ಯೆಯಾಗುತ್ತದೆ ಎಂದು ಗೋಗರೆದಿದ್ದಾನೆ.
ಇನ್ನು ಈ ವಿಚಾರ ಮುನ್ನೆಲೆಗೆ ಬರುತ್ತಿದ್ದಂತೆ ಮಹೇಶ್ ಹೊಸಮನಿ ತನ್ನ ಇನ್‌ಸ್ಟಾಗ್ರಾಮ್ ಖಾತೆಯ ಎಲ್ಲಾ ವಿವರಗಳನ್ನು ಹೈಡ್ ಮಾಡಿದ್ದಾನೆ. ಮಹೇಶ್ ಹೊಸಮನಿ ಪೊಲೀಸ್ ಇಲಾಖೆಯ ಸಿಬ್ಬಂದಿಯೇ ಅಥವಾ ಸಾರ್ವಜನಿಕನೇ ಎಂಬುವುದನ್ನು ಪೊಲೀಸರು ಪತ್ತೆಹಚ್ಚುತ್ತಿದ್ದು, ಇಂತಹ ಮೆಸೇಜ್ ಕಳುಹಿಸಿರುವ ವ್ಯಕ್ತಿ ಯಾರೇ ಆದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಈ ಸಂಜೆಗೆ ತಿಳಿಸಿದ್ದಾರೆ.
