ಬೆಂಗಳೂರು, ಏ. 30-ನಗರದಲ್ಲಿ ಇನ್ನು ಮೂರು ದಿನ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂಬ ಎಚ್ಚರಿಕೆ ಹಿನ್ನೆಲೆಯಲ್ಲಿ ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಸಿಬ್ಬಂದಿಗಳ ರಜೆಗಳನ್ನು ಜಿಬಿಎ ಮುಖ್ಯ ಅಯುಕ್ತ ಮಹೇಶ್ವರ್ ರಾವ್ ರದ್ದುಗೊಳಿಸಿದ್ದಾರೆ.
ಈ ಕುರಿತಂತೆ 5 ನಗರಪಾಲಿಕೆ ಅಯುಕ್ತರಿಗೆ ಸೂಚನೆ ನೀಡಿ ಆಯಾ ಪಾಲಿಕೆ ವ್ಯಾಪ್ತಿಯ ಎಲ್ಲಾ ಸಿಬ್ಬಂದಿಗಳು ಹಾಗೂ ಅಧಿಕಾರಿಗಳ ರಜೆ ರದ್ದು ಪಡಿಸಿ ಮಳೆಗಾಲದಲ್ಲಿ ಎಚ್ಚರಿಕೆ ವಹಿಸಲು ಸೂಚಿಸುವಂತೆ ತಿಳಿಸಿದ್ದಾರೆ.
ನಿಮ ಪಾಲಿಕೆ ವ್ಯಾಪ್ತಿಯಲ್ಲಿ ಮಳೆಯ ಅನಾಹುತ ತಡೆಯಲು ಎಲ್ಲಾ ರೀತಿಯ ಸಿದ್ದತೆ ಮಾಡಿ. ಮರ ತೆರವಿಗೆ ಬೇಕಾದ ಎಲ್ಲಾ ಸಾಮಗ್ರಿಗಳನ್ನು ಸಿದ್ದಪಡಿಸಿ. ರಾಜಕಾಲುವೆ ಸಮೀಪ ಇರುವ ಮನೆಗಳ ಬಗ್ಗೆ ಹೆಚ್ಚಿನ ಗಮನ ಹರಿಸಲು ಅವರು ಸೂಚನೆ ನೀಡಿದ್ದಾರೆ.
ಎಂಜಿನಿಯರ್‌ಗಳು. ಅರೋಗ್ಯ ಇಲಾಖೆ ಸಿಬ್ಬಂದಿ ಗಳು ಅಲರ್ಟ್ ಅಗಿ ಇರುವಂತೆ ಮೌಖಿಕವಾಗಿ ಸೂಚಿಸಿದ್ದಾರೆ. ಇನ್ನೂ ಜಿಬಿಎಯ ಎಲ್ಲಾ ಕಂಟ್ರೋಲ್ ರೂಮ್ ಗಳು ದಿನದ 24+7 ಗಂಟೆಗಳು ಕಾರ್ಯ ನಿರ್ವಹಿಸಲು ಅದೇಶ ನೀಡಿದ್ದಾರೆ.
ಕಂಟ್ರೋಲ್ ರೂಮ್ ಗೆ ಬರುವಂತಹ ದೂರುಗಳನ್ನು ಸ್ವೀಕರಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ರವಾನೆ ಮಾಡಿ ಅದಷ್ಟು ಬೇಗ ಸಮಸ್ಯೆ ಇತ್ಯರ್ಥ ಮಾಡಬೇಕು ಎಂದು ಸೂಚನೆ ನೀಡಿದ್ದಾರೆ. ಮಳೆ ಅನಾಹುತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಮಹೇಶ್ವರ ರಾವ್ ಅವರು, ಬಿದ್ದಿರುವ ಮರಗಳನ್ನು ಶೀಘ್ರ ತೆರವುಗೊಳಿಸುವಂತೆ ಸಿಬ್ಬಂದಿ ಗಳಿಗೆ ಹಾಗೂ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಅಂಡರ್ ಪಾಸ್ ಗಳನ್ನು ವೀಕ್ಷಣೆ ಮಾಡಿ ಮಳೆಯ ನೀರು ತೆರವು ಮಾಡಲು ಸೂಚನೆ ನೀಡಿದರು.ಮಳೆಯ ನೀರು ಮನೆಗಳಿಗೆ ನುಗ್ಗಿದ ಪ್ರದೇಶಗಳಿಗೆ ಬೇಟಿ ನೀಡಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು.
ಸಾರ್ವಜನಿಕರು ಜಿಬಿಎ ಮುಖ್ಯ ಅಯುಕ್ತರಿಗೆ ತಮ್ಮ ಬಡಾವಣೆಗಳು ಪ್ರತಿ ಬಾರಿ ಮಳೆ ಬಂದಾಗಲೂ ಅನಾಹುತ ನಡೆಯುತ್ತವೆ. ಮನೆಯಲ್ಲಿದ್ದ ದಿನಸಿ ಪದಾರ್ಥಗಳು ಹಾಳಾಗಿವೇ ಎಂದು ತಮ ಅಳಲು ತೋಡಿಕೊಂಡರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಅಯುಕ್ತರು ಪರಿಹಾರ ನೀಡುವುದಾಗಿ ಭರವಸೆ ನೀಡಿದರು. ಸ್ಥಳೀಯ ಅಧಿಕಾರಿಗಳಿಗೆ ಮಳೆಯಿಂದ ಹಾನಿಯದ ವಸ್ತುಗಳ ಬಗ್ಗೆ ಮಾಹಿತಿ ಪಡೆದು ವರದಿ ನೀಡುವಂತೆ ಸೂಚನೆ ನೀಡಿದರು.
