Homeರಾಜ್ಯಅಸಭ್ಯ ವರ್ತನೆ ತೋರಿದ ಶಾಸಕ ಪ್ರದೀಪ್‌ ಈಶ್ವರ್‌ ವಿರುದ್ಧ ಪೊಲೀಸರಿಗೆ ಜೆಡಿಎಸ್‌‍ ದೂರು

ಅಸಭ್ಯ ವರ್ತನೆ ತೋರಿದ ಶಾಸಕ ಪ್ರದೀಪ್‌ ಈಶ್ವರ್‌ ವಿರುದ್ಧ ಪೊಲೀಸರಿಗೆ ಜೆಡಿಎಸ್‌‍ ದೂರು

JDS files complaint with police against MLA Pradeep Eshwar for indecent behaviour

ಬೆಂಗಳೂರು, ಜೂ.30- ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್‌ ಈಶ್ವರ್‌ ಅಸಭ್ಯ ವರ್ತನೆ ತೋರಿ, ಸಾರ್ವಜನಿಕವಾಗಿ ಪ್ರಚೋದನೆ ಮಾಡಿದ್ದಾರೆ ಎಂದು ಆರೋಪಿಸಿರುವ ಜೆಡಿಎಸ್‌‍, ಇವರ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸುವಂತೆ ರಾಜ್ಯ ಪೊಲೀಸ್‌‍ ಮಹಾ ನಿರ್ದೇಶಕರಿಗೆ ದೂರು ನೀಡಲಿದೆ.

ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಜೆಡಿಎಸ್‌‍ ಮುಖ್ಯ ವಕ್ತಾರ ಹಾಗೂ ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ ಅವರು ಶಾಸಕರು ಇದೇ ರೀತಿ ವರ್ತನೆ ಮುಂದುವರೆಸಿದರೆ ಪಕ್ಷದ ವತಿಯಿಂದ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ ಎಂದರು.ಬಿಡದಿ ಟೌನ್‌ಶಿಪ್‌ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಜೆಡಿಎಸ್‌‍ ಬೆಂಬಲ ನೀಡಿರುವುದರಿಂದ ಇದನ್ನು ಡೈವರ್ಟ್‌ ಮಾಡಲು ಈ ರೀತಿಯ ಹುನ್ನಾರ ಮಾಡಲಾಗಿದೆ ಎಂದು ಆರೋಪಿಸಿದರು.

ಕೆಂಪೇಗೌಡ ಜಯಂತಿ ಸಂದರ್ಭದಲ್ಲಿ ಶಾಸಕರು ತೊಡೆ ತಟ್ಟಿ, ತೋಳೇರಿಸಿ ಅಸಭ್ಯ ವರ್ತನೆ ಮಾಡಿದ್ದಾರೆ. ಅಲ್ಲದೆ ಜನರನ್ನು ಪ್ರಚೋದಿಸಿದ್ದಾರೆ. ಆದರೂ ಅವರ ವಿರುದ್ಧ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.ಕಾಂಗ್ರೆಸ್‌‍ ನಾಯಕರು ಶಾಸಕರಿಗೆ ಸೂಕ್ತ ತಿಳುವಳಿಕೆ ನೀಡಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಅವರು, ಕಾನೂನು ಬಾಹಿರವಾಗಿ ಮೂರು ಸಿಎ ನಿವೇಶನವನ್ನು ಪಡೆದಿರುವುದನ್ನು ಜೆಡಿಎಸ್‌‍ ಪ್ರಶ್ನಿಸಿದ್ದರಿಂದ ಅವರು ನಮ ನಾಯಕರ ವಿರುದ್ಧ ಅವಹೇಳನ ಮಾಡುತ್ತಿದ್ದಾರೆ ಎಂದು ಆಪಾದಿಸಿದರು.

ವಕ್ತಾರ ಎಸ್‌‍.ಪಿ.ಪ್ರದೀಪ್‌ಕುಮಾರ್‌ ಮಾತನಾಡಿ, ಜನರನ್ನು ಪ್ರಚೋದಿಸಿದ ಜಾತಿ, ವೈಷಮ್ಯದ ಬಗ್ಗೆ ಮಾತನಾಡಿದ ಶಾಸಕರ ವಿರುದ್ಧ ದೂರು ಕೊಟ್ಟರೂ ದೂರು ದಾಖಲಿಸಿಲ್ಲ. ಶಾಸಕರ ವರ್ತನೆಯನ್ನು ಬೆಂಬಲಿಸುತ್ತಿರುವ ಕಾಂಗ್ರೆಸ್‌‍ಗೆ ಸಂಸ್ಕೃತಿ ಇದೆಯೇ ಎಂದು ಪ್ರಶ್ನಿಸಿದರು. ವಿಜಯನಗರ ಅರಸರ ಸಾಮಂತ ಕೆಂಪೇಗೌಡರ ಜನದಿನದ ಶುಭಾಶಯ ಎಂದು ಹೇಳುವ ಮೂಲಕ ವ್ಯಂಗ್ಯವಾಗಿ ಕೆಂಪೇಗೌಡರನ್ನು ಅವಮಾನಿಸಿದ್ದಾರೆ ಎಂದರು.

ಮತ್ತೊಬ್ಬ ವಕ್ತಾರ ದೇವರಾಜು ಮಾತನಾಡಿ, ನಾಡಪ್ರಭು ಕೆಂಪೇಗೌಡರ ಬಗ್ಗೆ ವ್ಯಂಗ್ಯವಾಗಿ ಮಾತನಾಡಿರುವ ಶಾಸಕ ಪ್ರದೀಪ್‌ ಈಶ್ವರ್‌ ಅವರ ಧಾಟಿಯಲ್ಲಿಯೇ ಅವರ ನಾಯಕರ ವಿರುದ್ಧವೂ ನಾವು ಮಾತನಾಡಬಹುದೇ?, ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡರು, ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿಯವರ ವಿರುದ್ಧ ಅವಹೇಳನ ಮಾಡಿದ್ದಾರೆ. ಏಕಪಕ್ಷೀಯವಾಗಿ ಜೆಡಿಎಸ್‌‍ ಕಾರ್ಯಕರ್ತರನ್ನು ಮಾತ್ರ ಬಂಧಿಸಿದ್ದಾರೆ. ಪ್ರಚೋದನೆ ಮಾಡಿದ ಶಾಸಕರ ವಿರುದ್ಧ ಯಾವುದೇ ಕ್ರಮ ಇಲ್ಲ ಎಂದು ಅಸಮಾಧಾನ ಹೊರಹಾಕಿದರು.

ವಕ್ತಾರ ಗಂಗಾಧರ್‌ ಮೂರ್ತಿ ಮಾತನಾಡಿ, ಕಾಂಗ್ರೆಸ್‌‍ನವರಿಗೆ ಜೆಡಿಎಸ್‌‍ ಭಯ ಇರುವುದರಿಂದಲೇ ನಮ ನಾಯಕರ ವಿರುದ್ಧ ಅವಹೇಳನ ರೀತಿ ಮಾತನಾಡುತ್ತಿದ್ದಾರೆ. ಪ್ರದೀಪ್‌ ಈಶ್ವರ್‌ ಅವರ ಟ್ರಸ್ಟ್‌ಗೆ ಸಿಎ ನಿವೇಶನ ಪಡೆದಿರುವುದು ಸರಿಯಲ್ಲ ಎಂದು ನ್ಯಾಯಾಲಯ ಹೇಳಿದೆ. ಶಾಸಕರ ಕಡೆಗೆ ಚಪ್ಪಲಿ ಎಸೆದಿದ್ದು ತಪ್ಪು. ಆದರೆ ಅದಕ್ಕೆ ಪ್ರಚೋದನೆ ನೀಡಿದ ಶಾಸಕರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಪ್ರಶಾಂತಿ ಮಾತನಾಡಿ, ಪ್ರದೀಪ್‌ ಈಶ್ವರ್‌ರವರು ಬಾಯಿಬಿಟ್ಟರೆ ಹೊಲಸು ಮಾತುಗಳೇ ಬರುತ್ತವೆ. ಅಸಭ್ಯ ವರ್ತನೆ ತೋರುತ್ತಿದ್ದಾರೆ. ಬಿಡದಿ ರೈತರ ಪರವಾಗಿ ಜೆಡಿಎಸ್‌‍ ಹೋರಾಟ ಮಾಡುತ್ತಿರುವುದನ್ನು ಬೇರೆ ಕಡೆ ತಿರುಗಿಸಲು ಹುನ್ನಾರ ಮಾಡಿದ್ದಾರೆ ಎಂದು ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲಾ ಜೆಡಿಎಸ್‌‍ ಅಧ್ಯಕ್ಷ ಬಿ.ಎನ್‌.ಮುನಿಯಪ್ಪ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

Latest News