Thursday, April 16, 2026
Homeರಾಜ್ಯ5ವರ್ಷ ನಮ್ಮಪ್ಪನೇ ಸಿಎಂ : ಯತೀಂದ್ರ

5ವರ್ಷ ನಮ್ಮಪ್ಪನೇ ಸಿಎಂ : ಯತೀಂದ್ರ

My father will be CM for 5 years: Yathindra

ಮೈಸೂರು, ಫೆ.6- ನಾಯಕತ್ವ ಬದಲಾವಣೆ ವಿಚಾರ ಇತ್ಯರ್ಥವಾಗಿದೆ. ಹೈಕಮಾಂಡ್‌ ನಾಯಕರು ಬಾಯಿ ಬಿಟ್ಟು ಹೇಳದೆ ಇದ್ದರೂ, ಸಿದ್ದರಾಮಯ್ಯ ಅವರ ಬದಲಾವಣೆ ಇಲ್ಲ ಎಂಬ ಸಂದೇಶವನ್ನು ಪರೋಕ್ಷವಾಗಿ ರವಾನಿಸಿದ್ದಾರೆ ಎಂದು ವಿಧಾನ ಪರಿಷತ್ತಿನ ಸದಸ್ಯ ಹಾಗೂ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಹೇಳಿದ್ದಾರೆ.

ಸುದ್ದಿಗಾರರಿಗೆ ಮಾತನಾಡಿರುವ ಅವರು, ತಮ ತಂದೆ ಸಿದ್ದರಾಮಯ್ಯ ಅವರು 5 ವರ್ಷ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ. ಇದರಲ್ಲಿ ಯಾವುದೇ ಬದಲಾವಣೆ ಪರಿಸ್ಥಿತಿ ಸದ್ಯಕಂತು ಕಂಡು ಬಂದಿಲ್ಲ ಎದ್ದಿದ್ದಾರೆ.

ನಾಯಕತ್ವ ಬದಲಾಗಬೇಕು ಎಂದು ಬೇಡಿಕೆ ಮಂಡಿಸಿದವರಿಗೆ ಹೈಕಮಾಂಡ್‌ ಮನ್ನಣೆ ನೀಡಿಲ್ಲ. ಈ ಮೂಲಕ ಹೈಕಮಾಂಡ್‌ ಸ್ಪಷ್ಟ ಸಂದೇಶವನ್ನು ರವಾನಿಸಿದೆ. ಮುಖ್ಯಮಂತ್ರಿ ಬದಲಾವಣೆ ಎಂಬುದು ಮುಗಿದು ಹೋಗಿರುವ ವಿಚಾರ. ರಾಜಕೀಯ ವಲಯದಲ್ಲಿ ಇಂತಹ ಯಾವುದೇ ಚರ್ಚೆಗಳು ನಡೆಯುತ್ತಿಲ್ಲ. ಮಾಧ್ಯಮಗಳಲ್ಲಿ ಮಾತ್ರ ಚರ್ಚೆಯಾಗುತ್ತಿದೆ ಎಂದರು.

ನಾಯಕತ್ವಕ್ಕಿಂತ ಸದ್ಯಕ್ಕೆ ನಮ ಮುಂದೆ ಬೇರೆ ಬೇರೆ ಗಂಭೀರ ವಿಚಾರಗಳಿವೆ. ಬಜೆಟ್‌ ಮಂಡನೆಯಾಗುತ್ತಿದೆ ಮೊದಲಿನಂತೆ ತೆರಿಗೆ ಆದಾಯ ಸಂಗ್ರಹವಾಗುತ್ತಿಲ್ಲ. ಕೇಂದ್ರ ಸರ್ಕಾರವು ಸರಿಯಾದ ಅನುದಾನ ನೀಡುತ್ತಿಲ್ಲ. ರಾಜ್ಯದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಗಮನ ಹರಿಸಬೇಕಿದೆ ಎಂದರು.

ಮುಡಾ ನಿವೇಶನ ಹಂಚಿಕೆಯಲ್ಲಿ ಯಾವುದೇ ಹಗರಣ ನಡೆದಿರಲಿಲ್ಲ. ರಾಜಕೀಯ ದುರುದ್ದೇಶಕ್ಕಾಗಿ ಸುಳ್ಳು ಆರೋಪ ಮಾಡಲಾಗುತ್ತಿತ್ತು. ತನಿಖೆಯ ಬಿ-ವರದಿಯನ್ನು ಜನಪ್ರತಿನಿಧಿಗಳ ನ್ಯಾಯಾಲಯ ಒಪ್ಪಿಕೊಂಡಿದೆ. ದೂರುದಾರರು ಮೇಲನವಿ ಸಲ್ಲಿಸುವುದಾಗಿ ಹೇಳಿದ್ದಾರೆ. ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿನ ತೀರ್ಪು ಸತ್ಯಕ್ಕೆ ಸಂದ ಜಯ. ತೀರ್ಪು ತಮ ಪರವಾಗಿ ಬಂದಿರುವುದು ತಮ ತಾಯಿಗೆ ಹೆಚ್ಚು ಸಂತೋಷ ತಂದಿದೆ ಎಂದರು.

ಪ್ರಕರಣ ಇನ್ನೂ ಪೂರ್ತಿ ಮುಗಿದಿಲ್ಲ. ಹೀಗಾಗಿ ನಿವೇಶನಗಳನ್ನು ಮರಳಿ ಪಡೆಯಲು ಮನವಿ ಸಲ್ಲಿಸುವುದಿಲ್ಲ. ಅರ್ಜಿದಾರರು ಮೇಲನವಿ ಸಲ್ಲಿಸುವುದಾಗಿ ಹೇಳಿದ್ದಾರೆ. ಕಾದು ನೋಡುತ್ತಿದ್ದೇವೆ ಎಂದರು.

ಮಹಾತ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ಕೇಂದ್ರ ಸರ್ಕಾರ ರದ್ದು ಮಾಡಿ, ವಿಬಿ ಜಿ ರಾಮ ಜಿ ಜಾರಿಗೆ ತರುತ್ತಿದೆ. ಇದರಲ್ಲಿ ಕೂಲಿ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ. ಜೊತೆಗೆ ಮಹಾತ ಗಾಂಧೀಜಿಯವರ ಹೆಸರನ್ನು ಬದಲಾವಣೆ ಮಾಡಲಾಗಿದೆ ಇದು ಸರಿಯಲ್ಲ ಎಂದರು.

ಸಚಿವ ಕೆ.ಜೆ.ಜಾರ್ಜ್‌ ಪ್ರಕರಣದಲ್ಲಿ ನನ್ನ ಹೆಸರನ್ನು ಅನಗತ್ಯವಾಗಿ ತಳಕು ಹಾಕಲಾಗಿದೆ. ನನಗೆ ಚಾರ್ಜ್‌ ಅವರು ರಾಜೀನಾಮೆ ಕೊಡಲು ಹೋಗಿದ್ದಾಗಲಿ, ಅದಕ್ಕೆ ಸಂಬಂಧಪಟ್ಟಂತ ಕಾರಣಗಳ ಬಗ್ಗೆಯಾಗಲಿ ಮಾಹಿತಿ ಇರಲಿಲ್ಲ. ಖುದ್ದು ಚಾರ್ಜ್‌ ಅವರೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಬಿಜೆಪಿಯವರು ದುರುದ್ದೇಶ ಪೂರ್ವಕವಾಗಿ ನನ್ನ ಹೆಸರನ್ನು ಎಳೆದು ತರುತ್ತಿದ್ದಾರೆ ಎಂದು ಕಿಡಿಕಾರಿದರು.

ಗ್ರಾಮ ಪಂಚಾಯಿತಿ ಸೇರಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಷ್ಟೆ ಅಲ್ಲ, ವಿಧಾನ ಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲೂ ಮತ ಪತ್ರಗಳನ್ನೇ ಬಳಕೆ ಮಾಡಬೇಕು. ಈ ಮೊದಲಿನಂತೆ ಮತಪೆಟ್ಟಿಗೆಗಳನ್ನು ಕಳ್ಳತನ ಮಾಡಲು ಈಗಿನ ವಾತಾವರಣದಲ್ಲಿ ಸಾಧ್ಯವಿಲ್ಲ. ತಂತ್ರಜ್ಞಾನ ಬಳಸಿ ಮತಗಳತನ ಮಾಡಿದರೆ ಅದನ್ನು ಪತ್ತೆ ಹಚ್ಚುವುದು ಕಷ್ಟವಾಗುತ್ತಿದೆ ಎಂದರು.

RELATED ARTICLES

Latest News