Homeರಾಜ್ಯಯುವ ದಸರಾದಲ್ಲಿ ಕಿಕ್ಕೇರಿಸಿದ ಗಾಯಕ ಶಂಕರ್‌ ಮಹದೇವನ್‌ ಕಂಠಸಿರಿ

ಯುವ ದಸರಾದಲ್ಲಿ ಕಿಕ್ಕೇರಿಸಿದ ಗಾಯಕ ಶಂಕರ್‌ ಮಹದೇವನ್‌ ಕಂಠಸಿರಿ

ಮೈಸೂರು,ಅ.15- ಏಕದಂತಾಯ ವಕ್ರತುಂಡಾಯ ಗೌರಿತನಯ ಯದೀಮಹಿ ಎಂಬ ಗಣೇಶನ ಶ್ಲೋಕ ಹಾಗೂ ಓಂ ನಮಃ ಶಿವಾಯ ಎಂದು ಶಿವನ ಶ್ಲೋಕ ಹಾಡುವ ಮೂಲಕ ಕಂಚಿನ ಕಂಠದ ಬಾಲಿವುಡ್‌ ಗಾಯಕ ಶಂಕರ್‌ ಮಹದೇವನ್‌ ಅವರು ಯುವ ದಸರಾ ವೇದಿಕೆಯಲ್ಲಿ ಕಿಚ್ಚೆಬ್ಬಿಸಿದರು.

ನಗರದ ಉತ್ತನಹಳ್ಳಿ ಜ್ವಾಲಾಮುಖಿ ತ್ರಿಪುರ ಸುಂದರಿ ದೇವಸ್ಥಾನ ಹತ್ತಿರದ ಮೈದಾನದಲ್ಲಿ ನಡೆಯುತ್ತಿರುವ ಯುವ ದಸರಾ ಕಾರ್ಯಕ್ರಮದ ಎರಡನೇ ದಿನ ಶಂಕರ್‌ ಮಹದೇವನ್‌ ತಂಡವು ಹಾಡಿದ ಡ್ಯಾನ್ಸ್ ವಿತ್‌ ಬೇಬಿ, ಕೋಯಿ ಕಹೆ ರಹತಾ ರಹೀ, ಬೋಲ ಹಲ್ಗೆ ಹಲ್ಗೆ ಹಿಂದಿ ಗಾಯನದ ಮೋಡಿಗೆ ಕಿಕ್ಕಿರಿದು ತುಂಬಿದ್ದ ಮೈದಾನದಲ್ಲಿ ಯುವ ಸಮೂಹದ ಸಂಭ್ರಮ ಮುಗಿಲು ಮುಟ್ಟಿತ್ತು.

ಕನ್ನಡ ಹಾಡುಗಳುಗೆ ಫಿದಾ: ಭಜರಂಗಿ ಸಿನಿಮಾದ ಜೈ ಜೈ ಭಜರಂಗಿ, ಮಾಣಿಕ್ಯ ಸಿನಿಮಾದ ಜೀವ ಜೀವ ನಮ್‌ ಜೀವ ಕಣೋ ಇವನು, ರಾಜ್‌ ಸಿನಿಮಾದ ಮುತ್ತು ರಾಜ ಕಾಲಿಟ್ಟ ಸೈಡು ಬಿಡಲೇ ಹಾಗೂ ಇನ್ನಿತರ ಕನ್ನಡ ಹಾಡುಗಳನ್ನು ಹಾಡಿ ರಂಜಿಸಿದರು.ಹಿಂದಿ ಸರಿಗಮಪ ಖ್ಯಾತಿಯ ಜ್ಯೋತಿರ್ಮಯಿ ನಾಯಕ್‌ ಕೂಡ ಹಲವಾರು ಹಿಂದಿ ಗೀತೆಗಳನ್ನು ಹಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.

ಸ್ಟೆಪ್‌ ಹಾಕಿದ ಪಾಲಿಕೆ ಆಯುಕ್ತರು :
ಶಂಕರ್‌ ಮಹದೇವನ್‌ ಗಾಯನ ಆಲಿಸಲು ಬಂದಿದ್ದ ನಗರ ಪಾಲಿಕೆ ಆಯುಕ್ತರಾದ ಎಂ.ಕೆ.ಸವಿತಾ ಹಾಗೂ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಎದ್ದು ಸ್ಟೆಪ್‌ ಹಾಕಿ ಎಲ್ಲರ ಗಮನ ಸೆಳೆದರು.ಈ ವೇಳೆ ನಗರಾಭಿವೃದ್ಧಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಯತೀಂದ್ರ ಸಿದ್ದರಾಮಯ್ಯ, ಶಾಸಕ ತನ್ವೀರ್‌ ಸೇಠ್‌ ಹಾಗೂ ಸಂಸದ ಸುನೀಲ್‌ ಬೋಸ್‌‍ ಹಾಜರಿದ್ದರು.

RELATED ARTICLES
spot_img

Latest News