Homeರಾಜ್ಯಅಲುಗಾಡುವ ಕುರ್ಚಿಯಲ್ಲಿ 'ಹಲೋ ಅಪ್ಪ' ಖ್ಯಾತಿಯ ಸಿಎಂ ಸಿದ್ದರಾಮಯ್ಯ ವರ್ಗಾವಣೆ ದಂಧೆ : ಅಶೋಕ್‌ ವಾಗ್ದಾಳಿ

ಅಲುಗಾಡುವ ಕುರ್ಚಿಯಲ್ಲಿ ‘ಹಲೋ ಅಪ್ಪ’ ಖ್ಯಾತಿಯ ಸಿಎಂ ಸಿದ್ದರಾಮಯ್ಯ ವರ್ಗಾವಣೆ ದಂಧೆ : ಅಶೋಕ್‌ ವಾಗ್ದಾಳಿ

R Ashok attack on CM Siddaramaiah

ಬೆಂಗಳೂರು,ಮಾ.20- ಒಂದು ಕಡೆ ಸಂಪೂರ್ಣವಾಗಿ ದಿವಾಳಿ ಆಗಿರುವ ಖಜಾನೆ, ಮತ್ತೊಂದು ಕಡೆ ಸದಾ ಅಲುಗಾಡುತ್ತಿರುವ ಕುರ್ಚಿ, ಇವೆರಡರ ಮಧ್ಯೆ ಸಿಲುಕಿಕೊಂಡು ದುರ್ಬಲರಾಗಿರುವ ಹಲೋ ಅಪ್ಪ ಖ್ಯಾತಿಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರ್ಗಾವಣೆ ದಂಧೆಯನ್ನೇ ಮುಖ್ಯ ಕಾಯಕ ಮಾಡಿಕೊಂಡಿದ್ದಾರೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಗಂಭೀರ ಆರೋಪ ಮಾಡಿದ್ದಾರೆ.

ತಮ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಕಾಂಗ್ರೆಸ್‌‍ ಸರ್ಕಾರಕ್ಕೆ ಮತ್ತೊಮೆ ಹೈಕೋರ್ಟ್‌ ಛೀಮಾರಿ! ಎಂದು ಪೋಸ್ಟ್‌ ಮಾಡಿರುವ ಅವರು, ಇದನ್ನ ಗಮನಿಸಿರುವ ಮಾನ್ಯ ಹೈಕೋರ್ಟ್‌, ಮುಖ್ಯಮಂತ್ರಿಗಳಾದವರಿಗೆ ಸರ್ಕಾರಿ ನೌಕರರ ವರ್ಗಾವಣೆಗಿಂತ ಮಾಡಬೇಕಾದ ಉತ್ತಮ ಕೆಲಸಗಳಿವೆ ಎಂದು ಚಾಟಿ ಬೀಸಿರುವುದು ರಾಜ್ಯದಲ್ಲಿ ದುರಾಡಳಿತ, ವರ್ಗಾವಣೆ ದಂಧೆ ಎಷ್ಟು ತಾಂಡವವಾಡುತ್ತಿದೆ ಎನ್ನುವುದಕ್ಕೆ ಕನ್ನಡಿ ಹಿಡಿದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಈ ನಾಲಾಯಕ್‌ ಕಾಂಗ್ರೆಸ್‌‍ ಸರ್ಕಾರಕ್ಕೆ ಕಿಂಚಿತ್ತಾದರೂ ನಾಚಿಕೆ, ಮಾನ, ಮರ್ಯಾದೆ ಇದ್ದರೆ, ಈ ಕೊಡಲೇ ವಿಧಾನಸಭೆ ವಿಸರ್ಜನೆ ಮಾಡಿ ಕನ್ನಡಿಗರ ಕ್ಷಮೆ ಕೇಳಬೇಕು ಎಂದು ಅಶೋಕ್‌ ಒತ್ತಾಯಿಸಿದ್ದಾರೆ.

RELATED ARTICLES
spot_img

Latest News