Saturday, April 18, 2026
Homeರಾಜ್ಯಅಬಕಾರಿ ಹಗರಣದಲ್ಲಿ ರಾಹುಲ್‌ಗಾಂಧಿಗೂ ಪಾಲಿದೆ : ಆರ್‌.ಅಶೋಕ್‌ ಆರೋಪ

ಅಬಕಾರಿ ಹಗರಣದಲ್ಲಿ ರಾಹುಲ್‌ಗಾಂಧಿಗೂ ಪಾಲಿದೆ : ಆರ್‌.ಅಶೋಕ್‌ ಆರೋಪ

Rahul Gandhi also has a share in the excise scam: R. Ashok alleges

ಬೆಂಗಳೂರು,ಫೆ.4- ರಾಜ್ಯದಲ್ಲಿ ಬಹುಕೋಟಿ ಮೌಲ್ಯದ ಅಬಕಾರಿ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್‌ ಗಾಂಧಿ ಪಾಲಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಅವರು, ಗಂಭೀರ ಆರೋಪ ಮಾಡಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಾವು ಅಬಕಾರಿ ಸಚಿವ ಆರ್‌.ಬಿ.ತಿಮಾಪುರ ಅವರ ರಾಜೀನಾಮೆಗೆ ಆಗ್ರಹಿಸುತ್ತಿದ್ದೇವೆ.ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವರನ್ನು ರಕ್ಷಿಸುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ. ಈ ಹಗರಣದಲ್ಲಿ ಅವರಿಗೂ ಪಾಲು ಇರಬಹುದು. ತಮ ಸ್ಥಾನ ಉಳಿಸಿಕೊಳ್ಳಲು ಹಣವನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿಗೆ ಕಳುಹಿಸಲಾಗಿದೆ ಎಂದು ಆರೋಪಿಸಿದರು.

ಅಬಕಾರಿ ಸಚಿವರ ಮೇಲೆ ನೇರ ಆರೋಪ ಬಂದಿದೆ. ಭ್ರಷ್ಟಾಚಾರದ ಆರೋಪ ಬಂದ ಸಂದರ್ಭದಲ್ಲಿ ಸ್ವತಃ ಮುಖ್ಯಮಂತ್ರಿಗಳೇ ಅವರ ಬೆನ್ನಿಗೆ ನಿಂತಿದ್ದನ್ನು ಗಮನಿಸಿದರೆ, ಅಬಕಾರಿ ಇಲಾಖೆಯ ಐದಾರು ಸಾವಿರ ಕೋಟಿ ಭ್ರಷ್ಟಾಚಾರದ ಹಗರಣದಲ್ಲಿ ಹಲವರಿಗೆ ಪಾಲು ಹೋಗಿದೆ. ಕಾಂಗ್ರೆಸ್‌‍ ಪಕ್ಷದ ಹೈಕಮಾಂಡಿಗೂ ಪಾಲು ಹೋಗಿರುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ದೂರಿದರು.

ಅಬಕಾರಿ ಇಲಾಖೆಯಲ್ಲಿ ನಡೆದ ಭ್ರಷ್ಟಾಚಾರವು ರೂ. 5,000 ರಿಂದ 6,000 ಕೋಟಿ ಮೊತ್ತದ ಮಟ್ಟಿಗೆ ವ್ಯಾಪಿಸಿದೆ. ಈ ಹಗರಣಕ್ಕೆ ಸಂಬಂಧಿಸಿ ಸಾಕ್ಷ್ಯಗಳ ಕೊರತೆ ಇಲ್ಲ. ಲೋಕಾಯುಕ್ತರು ಅಬಕಾರಿ ಇಲಾಖೆ ಅಧಿಕಾರಿಯನ್ನು ರೂ. 25 ಲಕ್ಷ ಲಂಚ ಸ್ವೀಕರಿಸುವ ವೇಳೆ ಬಲೆಗೆ ಬೀಳಿಸಿರುವುದು, ಸಂಭಾಷಣೆಯ ಪೆನ್‌‍ಡ್ರೈವ್‌ ಸಾಕ್ಷ್ಯಗಳು ಮತ್ತು ಲೊಕಾಯುಕ್ತರಲ್ಲಿ ಪ್ರಕರಣ ದಾಖಲಾಗಿರುವುದು ಸ್ಪಷ್ಟ ಸಾಕ್ಷ್ಯಗಳಾಗಿವೆ ಎಂದು ಹೇಳಿದರು.

ಸರ್ಕಾರದ ವಿರುದ್ಧ ಆರಂಭಿಸಿರುವ ನಮ ಹೋರಾಟ ನಿಲ್ಲಲ್ಲ. ದಾಖಲೆ ಸಮೇತ ಸರ್ಕಾರದ ಮುಂದಿಟ್ಟರೂ ಸರ್ಕಾರ ಒಪ್ಪದ ಸ್ಥಿತಿಯಲ್ಲಿದೆ. ಸಿಎಂ ಈ ಹಿಂದೆ ಇದ್ದಂತೆ ಇಲ್ಲ. ಅವರು ಏನೂ ಮಾಡಲಾಗದ ಅಸಹಾಯಕ ಪರಿಸ್ಥಿತಿಯಲ್ಲಿದ್ದಾರೆ. ಎರಡು ಪಕ್ಷದವರ ಹೋರಾಟ ಮುಂದುವರೆಯುತ್ತದೆ. ಅಬಕಾರಿ ಇಲಾಖೆಯಲ್ಲಿ ಹಗರಣ ನಡೆದಿರುವುದಕ್ಕೆ ಪುಷ್ಟಿ ನೀಡುವಂತಹ ಸಾಕ್ಷ್ಯಾಧಾರಗಳನ್ನು ನೀಡಿದರೂ ಮುಖ್ಯಮಂತ್ರಿಗಳು ಸಚಿವ ತಿಮಾಪುರ ಅವರ ರಾಜೀನಾಮೆ ಪಡೆಯುತ್ತಿಲ್ಲ. ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಅಬಕಾರಿ ಇಲಾಖೆ ಸಚಿವರ ಬೆಂಬಲಕ್ಕೆ ನಿಂತಿದ್ದಾರೆ ಎಂದು ಆರೋಪಿಸಿದರು.

ಅಬಕಾರಿ ಇಲಾಖೆ ಅಧಿಕಾರಿಗಳ ವರ್ಗಾವಣೆ, ಲೈಸೆನ್‌್ಸ ನೀಡಿಕೆ ಹಾಗೂ ಮದ್ಯದಂಗಡಿಗಳಿಂದ ಪ್ರತಿ ತಿಂಗಳು 15-20 ಸಾವಿರ ರೂಪಾಯಿ ವಸೂಲು ಮಾಡಲಾಗುತ್ತಿದೆ. ಈ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕು, ಇಲ್ಲವೇ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಭಂಡತನ ಮಾಡುತ್ತಿದೆ. ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಅಬಕಾರಿ ಸಚಿವರ ರಾಜೀನಾಮೆ ಪಡೆಯಬೇಕು ಎಂದು ಮತ್ತೊಮೆ ಆಗ್ರಹಿಸುತ್ತೇನೆ. ಅಬಕಾರಿ ಸಚಿವರ ರಾಜೀನಾಮೆ ಪಡೆಯುವ ತನಕ ಬಿಜೆಪಿ, ಜೆಡಿಎಸ್‌‍ ಅಹೋರಾತ್ರಿ ಧರಣಿ ನಡೆಸಲಿದ್ದೇವೆ. ರಾಜ್ಯದಲ್ಲಿ ಲೂಟಿ ಸರ್ಕಾರ ಇದೆ. ರಾಜ್ಯ ಕಾಂಗ್ರೆಸ್‌‍, ಕೇಂದ್ರ ಕಾಂಗ್ರೆಸ್‌‍ನ ರಿಸರ್ವ್‌ ಬ್ಯಾಂಕ್‌ ಆಗಿದೆ. ಸದ್ಯದಲ್ಲೇ ಸರ್ಕಾರದಲ್ಲಿ ಸಚಿವ ಸಂಪುಟ ಪುನರ್‌ ರಚನೆ ಆಗಲಿದೆ. ಮುಖ್ಯಮಂತ್ರಿಗಳು ಸ್ಥಾನ ಉಳಿಸಿಕೊಳ್ಳಬೇಕಿದೆ. ಭ್ರಷ್ಟಾಚಾರ ಆರೋಪ ಹೊತ್ತಿರುವವರನ್ನು ಉಳಿಸಿಕೊಳ್ಳುವ ಅಗತ್ಯವಾದರೂ ಏನಿದೆ? ಎಂದು ಪ್ರಶ್ನೆ ಮಾಡಿದರು.

ಸಚಿವ ತಿಮಾಪುರ ರಾಜೀನಾಮೆ ಕೊಡಬೇಕು. ನಮ ಸರ್ಕಾರದಲ್ಲಿ ಹಿಂದೆ ಈ ರೀತಿ ಆದಾಗ ರಾಜೀನಾಮೆ ಕೊಟ್ಟು ತನಿಖೆಯಲ್ಲಿ ಸುಳ್ಳು ಎಂದ ಮೇಲೆ ವಾಪಸ್‌‍ ಸಚಿವ ಸ್ಥಾನ ತೆಗೆದುಕೊಂಡಿದ್ದಾರೆ. ಈಗಲೂ ಹಾಗೇ ಮಾಡಿ. ತಪ್ಪು ಮಾಡಿಲ್ಲ ಎಂದರೆ, ಮತ್ತೆ ವಾಪಸ್‌‍ ಬನ್ನಿ. ಸದ್ಯ ತಿಮಾಪುರ ರಾಜೀನಾಮೆ ಕೊಡಬೇಕು. ಇಲ್ಲ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.

RELATED ARTICLES

Latest News