Homeರಾಜ್ಯಉತ್ತರ ಕರ್ನಾಟಕದಲ್ಲಿ ವರುಣಾರ್ಭಟ , ಜನ ಜೀವನ ಅಸ್ಥವ್ಯಸ್ಥ

ಉತ್ತರ ಕರ್ನಾಟಕದಲ್ಲಿ ವರುಣಾರ್ಭಟ , ಜನ ಜೀವನ ಅಸ್ಥವ್ಯಸ್ಥ

Rainfall in North Karnataka, life disrupted

ಬೆಂಗಳೂರು,ಜೂ.10- ರಾಜ್ಯದಲ್ಲಿ ಮುಂಗಾರು ಮಳೆಯ ಆರ್ಭಟ ಜೋರಾಗಿದ್ದು, ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಸುರಿದ ಭಾರಿ ಮಳೆಗೆ ಜನ ಜೀವನ ಅಸ್ಥವ್ಯಸ್ಥಗೊಂಡಿದೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ನಿನ್ನೆ ಸುರಿದ ಮಳೆಗೆ ಅಕ್ಷರಸಹ ಜನರು ತತ್ತರಿಸಿ ಹೋಗಿದ್ದಾರೆ. ರಸ್ತೆಯೆಲ್ಲ ಕೆರೆಯಂತಾಗಿದ್ದು, ವಾಹನ ಸವಾರರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.

ಬೈಲಹೊಂಗಲ ನಗರದ ಕಲಟಗಲ್ಲಿ, ಭಗವಾನ್‌ ಚಾಳ, ಹುಡೇದ ಭಾವಿ ಸೇರಿದಂತೆ ಮತ್ತಿರ ಪ್ರದೇಶಗಳಲ್ಲಿ ಮಳೆಗೆ ಮನೆಗಳು ಉರುಳಿ ಬಿದ್ದಿದ್ದು, ಅದೃಷ್ಟವಶಾತ್‌ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಸವದತ್ತಿ ನಗರದಲ್ಲಿ ಮಳೆ ನೀರಿಗೆ ಆಟೋ ಹಾಗೂ ದ್ವಿಚಕ್ರ ವಾಹನ ಕೊಚ್ಚಿ ಹೋಗಿದೆ.
ವಿಜಯಪುರ ನಗರದ ಹಲವೆಡೆ ಮಳೆಯಾಗಿದ್ದು, ಚರಂಡಿಯಲ್ಲಿ ಭಾರಿ ಪ್ರಮಾಣದ ಮಳೆ ನೀರು ಹರಿಯುತ್ತಿದ್ದು, ವಾಹನ ಸವಾರರು ತೀವ್ರ ತೊಂದರೆ ಅನುಭವಿಸುವಂತಾಗಿತ್ತು.

RELATED ARTICLES
spot_img

Latest News