Wednesday, April 29, 2026
Homeರಾಜ್ಯನಿವೃತ್ತ ಐಎಎಸ್‌‍ ಅಧಿಕಾರಿ ಸಿ.ಚಿಕ್ಕಣ್ಣ ವಿಧಿವಶ

ನಿವೃತ್ತ ಐಎಎಸ್‌‍ ಅಧಿಕಾರಿ ಸಿ.ಚಿಕ್ಕಣ್ಣ ವಿಧಿವಶ

Retired IAS officer C. Chikkanna passes away

ಬೆಂಗಳೂರು,ಫೆ.10- ನಿವೃತ್ತ ಐಎಎಸ್‌‍ ಅಧಿಕಾರಿ ಸಿ.ಚಿಕ್ಕಣ್ಣ (84) ಅವರು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.ಕರ್ನಾಟಕ ರಾಜ್ಯ ಚುನಾವಣಾ ಆಯೋಗದ ಅಧ್ಯಕ್ಷರಾಗಿ ಹಾಗೂ ಹಲವಾರು ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ್ದ ಸಿ.ಚಿಕ್ಕಣ್ಣ ಅವರು ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದರು.

ಕೃಷಿ ಸರ್ವೋದಯ ಫೌಂಡೇಶನ್‌ನ ಸಂಸ್ಥಾಪಕ ಟ್ರಸ್ಟಿಯಾಗಿ ಸೇವೆ ಸಲ್ಲಿಸುತ್ತಿದ್ದ ಅವರು ಸ್ಪರ್ಧಾತಕ ಪರೀಕ್ಷೆ (ಯುಪಿಎಸ್‌‍ಸಿ, ಕೆಎಎಸ್‌‍)ಗಳಿಗೆ ಸಾವಿರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದರು.

ಬಡ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣದ ಜೊತೆಗೆ ಕೆಎಎಸ್‌‍, ಐಎಎಸ್‌‍ ಪರೀಕ್ಷೆಗಳನ್ನು ಹೇಗೆ ಬರೆಯಬೇಕು ಮತ್ತು ಪರೀಕ್ಷೆ ಸಿದ್ಧತೆಯ ಬಗ್ಗೆ ತಿಳುವಳಿಕೆ ನೀಡುತ್ತಿದ್ದರು. ಸದಾ ಸಮಾಜದ ಏಳಿಗೆಗಾಗಿ ಹಾತೊರೆಯುತ್ತಿದ್ದ ಚಿಕ್ಕಣ್ಣ ಅವರು ಅಪಾರವಾದ ಅಭಿಮಾನಿ ಬಳಗವನ್ನೂ ಕೂಡ ಹೊಂದಿದ್ದರು.

ಬೆಂಗಳೂರಿನ ವಿಜಯನಗರದ ಎಂ.ಸಿ.ಲೇಔಟ್‌ನಲ್ಲಿ ವಾಸವಾಗಿದ್ದ ಅವರು ಕೆಲ ದಿನಗಳ ಹಿಂದೆ ಆರೋಗ್ಯದಲ್ಲಿ ಏರುಪೇರಾಗಿ ಎಂ.ಎಸ್‌‍.ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಸಂದರ್ಭದಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.

ಅವರ ನಿವಾಸದ ಬಳಿ ಇಂದು ಸಂಜೆ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಹಲವಾರು ಶಾಸಕರು, ಸಚಿವರು ಭೇಟಿ ನೀಡಿ ಮೃತರ ಆತಕ್ಕೆ ಶಾಂತಿ ಕೋರಿದರು.

RELATED ARTICLES

Latest News