ಬೆಂಗಳೂರು,ಆ.13- ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಧರ್ಮಪತ್ನಿ ದಿ.ಚೆನ್ನಮ್ಮ ಅವರ ಸ್ಮರಣಾರ್ಥ ಮಧ್ಯಾಹ್ನದ ಬಿಸಿಯೂಟಕ್ಕೆ ಅನ್ನಪೂರ್ಣೇಶ್ವರಿ ಬಿಸಿಯೂಟ ಎಂದು ನಾಮಕರಣ ಮಾಡಬೇಕೆಂದು ರಾಜ್ಯ ಸರ್ಕಾರಕ್ಕೆ ಜೆಡಿಎಸ್ ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಒತ್ತಾಯಿಸಿದ್ದಾರೆ.
ಸಂತಾಪ ನಿರ್ಣಯದ ಮೇಲೆ ಮಾತನಾಡಿದ ಅವರು, ಚೆನ್ನಮ್ಮನವರು ತಮ ಜೀವಿತ ಅವಧಿಯಲ್ಲಿ ಮನೆಗೆ ಬಂದ ಯಾರಿಗೇ ಆಗಲಿ ಊಟ, ತಿಂಡಿ ನೀಡಿ ಸತ್ಕರಿಸುವುದು ಅವರ ದೊಡ್ಡತನವಾಗಿತ್ತು. ಹೀಗಾಗಿ ರಾಜ್ಯ ಸರ್ಕಾರ ಮಧ್ಯಾಹ್ನದ ಬಿಸಿಯೂಟಕ್ಕೆ ಅವರ ಸರಣಾರ್ಥ ಅನ್ನಪೂರ್ಣೇಶ್ವರಿ ಬಿಸಿಯೂಟ ಎಂದು ನಾಮಕರಣ ಮಾಡಲಿ ಎಂದು ಮನವಿ ಮಾಡಿದರು.
ಶ್ರೀ ಚೆನ್ನಮ ದೇವೇಗೌಡರ ಜೀವನದಲ್ಲಿ ನಡೆದು ಬಂದ ದಾರಿ ಸರಿಸಿದ ಅವರು, 72 ವರ್ಷ ದೇವೇಗೌಡರ ಜೊತೆ ಜೀವದಲ್ಲಿ ಮನೆಗೆ ಬಂದತಹ ಎಲ್ಲರಿಗೂ ಊಟ ನೀಡಿದಂಥ ಅನ್ನಪೂರ್ಣೇಶ್ವರಿ ಎಂದೇ ಹೆಸರಾಗಿದ್ದರು. ಇವರ ನಡೆ ನಮೆಲ್ಲರಿಗೂ ಆದರ್ಶ.
ರಾಜ್ಯದಲ್ಲಿ ಪ್ರತಿದಿನ ಸರ್ಕಾರಿ ಶಾಲೆ ಮಕ್ಕಳಿಗೆ ನೀಡುವಂತಹ ಮಧ್ಯಾನದ ಬಿಸಿ ಊಟಕ್ಕೆ ಚೆನ್ನಮ ಅನ್ನಪೂರ್ಣೇಶ್ವರಿ ಬಿಸಿಯೂಟ ಎಂದು ಹೆಸರಿಟ್ಟು ಪ್ರತಿದಿನ ಊಟ ನೀಡುವಂತಹ ಕಾರ್ಯಕ್ರಮವನ್ನು ಜಾರಿಗೆ ತರಬೇಕೆಂದು ಪ್ರಸ್ತಾಪಿಸಿದರು.
