Thursday, April 16, 2026
Homeರಾಜ್ಯSHOCKING : ನೆಲಮಂಗಲ, ಕೋಲಾರ, ಚಿಕ್ಕಬಳ್ಳಾಪುರ ತರಕಾರಿಯಲ್ಲಿ ವಿಷಕಾರಿ ಅಂಶಗಳು ಪತ್ತೆ..!

SHOCKING : ನೆಲಮಂಗಲ, ಕೋಲಾರ, ಚಿಕ್ಕಬಳ್ಳಾಪುರ ತರಕಾರಿಯಲ್ಲಿ ವಿಷಕಾರಿ ಅಂಶಗಳು ಪತ್ತೆ..!

Toxic elements found in vegetables from Nelamangala, Kolar, Chikkaballapur..!

ಬೆಂಗಳೂರು, ಫೆ.24- ನೀವು ಬಾಯಿ ಚಪ್ಪರಿಸಿ ತಿನ್ನುವ ತರಕಾರಿಗಳು ತಿನ್ನಲು ಯೋಗ್ಯವಲ್ಲವಂತೆ. ಅದರಲ್ಲೂ ನೆಲಮಂಗಲ, ಕೋಲಾರ ಚಿಕ್ಕಬಳ್ಳಾಪುರದಲ್ಲಿ ಬೆಳೆಯುವ ತರಕಾರಿಗಳು ವಿಷಪೂರಿತವಾಗಿವೆಯಂತೆ..!

ಇದನ್ನು ನಾವು ಹೇಳುತ್ತಿರುವುದಲ್ಲ ಸ್ವತಃ ತಜ್ಞರೇ ನಡೆಸಿರುವ ಪರೀಕ್ಷೆಯಲ್ಲಿ ಈ ವಿಷಯ ತಿಳಿದುಬಂದಿದೆ.ನಾವು ತಿನ್ನುವ ತರಕಾರಿಯಲ್ಲಿ ಸೀಸ ಮತ್ತಿತರ ನಿಷೇಧಿತ ಕೀಟನಾಶಕ ಅಂಶಗಳು ಪತ್ತೆಯಾಗಿವೆ. ತಜ್ಞರು ನೀಡಿರುವ ವರದಿಯಲ್ಲಿ ಬೆಂಗಳೂರು ಸುತ್ತಮುತ್ತ ಸಿಗುವ ತರಕಾರಿಯಲ್ಲಿದೆ ವಿಷಕಾರಿ ವಸ್ತುಗಳಿರುವುದು ದೃಢಪಟ್ಟಿದೆ.

ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ರಚಿಸಿದ ತಜ್ಞರ ಸಮಿತಿ ಈ ಸ್ಪೋಟಕ ವಿಚಾರವನ್ನು ಬಯಲು ಮಾಡಿದೆ. ಕೃಷಿ ವಿಶ್ವವಿದ್ಯಾಲಯದ ಸದಸ್ಯರನ್ನು ಒಳಗೊಂಡಿದ್ದ ಸಮಿತಿ ನೆಲಮಂಗಲ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಬೆಳೆಯೋ ತರಕಾರಿಯಲ್ಲಿ ವಿಷ ಇದೆ ಎನ್ನುವುದನ್ನು ದೃಢಪಡಿಸಿದೆ.

ಮೂರು ಪ್ರದೇಶಗಳ ಕೃಷಿ ಭೂಮಿಯಲ್ಲಿ ಬೆಳೆಯಲಾಗಿದ್ದ 19 ತರಕಾರಿ ಮಾದರಿ ಹಾಗೂ ರಾಜಾಜಿನಗರ ಮಾರುಕಟ್ಟೆ, ಹಾಪ್‌ಕಾಮ್ಸೌ, ಎಪಿಎಂಸಿ ಗಳಿಂದ 53 ತರಕಾರಿ ಮಾದರಿಯನ್ನೂ ಸಂಗ್ರಹಿಸಲಾಗಿತ್ತು ಒಟ್ಟು 72 ತರಕಾರಿ ಮಾದರಿಯಲ್ಲಿ 11 ಬಗೆಯ ವಿಷಕಾರಿ ಅಂಶ, 230 ಕೀಟನಾಶಕ ಅಂಶ ಪತ್ತೆಯಾಗಿವೆ.

ಪರೀಕ್ಷೆ ಹೇಗೆ ನಡೆಸಲಾಯಿತು?-
ಸಿಪಿಸಿಬಿಯ ಐದು ಸದಸ್ಯರ ಸಮಿತಿ ರಚಿಸಲಾಗಿತ್ತು.
ಒಟ್ಟು 72 ತರಕಾರಿ ಮಾದರಿಗಳನ್ನು ಸಂಗ್ರಹಿಸಲಾಗಿತ್ತು.
ನೆಲಮಂಗಲ, ರಾಜಾಜಿನಗರ, ಕೋಲಾರ ಮಾರುಕಟ್ಟೆಗಳ ಒಟ್ಟು 53 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ನೆಲಮಂಗಲ, ಕೋಲಾರ, ಚಿಕ್ಕಬಳ್ಳಾಪುರ ಕೃಷಿ ಭೂಮಿಗಳ ಬೆಳೆಗಳನ್ನು ಅನುಮೋದಿತ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಲಾಯಿತು.
13 ಸ್ಥಳಗಳಿಂದ 26 ಮಣ್ಣು ಮಾದರಿಗಳು ಕೂಡ ಸಂಗ್ರಹಿಸಲಾಯಿತು.

ಪರೀಕ್ಷೆಯಲ್ಲಿ ಪತ್ತೆಯಾದದ್ದು ಏನು:
26 ಮಣ್ಣು ಮಾದರಿಗಳಲ್ಲಿ 23 ಮಾದರಿಗಳು ಮಾಲಿನ್ಯಗೊಂಡಿದ್ದವು.
ಪರೀಕ್ಷೆಯಲ್ಲಿ 12 ಕೀಟನಾಶಕಗಳ ಅವಶೇಷಗಳು ಹೆಚ್ಚಿರುವುದು ಪತ್ತೆ.
72 ತರಕಾರಿ ಮಾದರಿಯಲ್ಲಿ ಸೀಸದ ಪ್ರಮಾಣ ಪತ್ತೆ.
19 ತರಕಾರಿ ಮಾದರಿಯಲ್ಲಿ ಸೀಸದ ಪ್ರಮಾಣ ಹೆಚ್ಚಿರುವುದು ಬೆಳಕಿಗೆ.
ಬದನೆಕಾಯಿ, ಹೀರೆಕಾಯಿ, ಕ್ಯಾಪ್ಸಿಕಂ, ಸೌತೆಕಾಯಿ, ಬೀನ್‌್ಸನಲ್ಲಿ ಸೀಸದ ಅಂಶ ಪತ್ತೆ.
ಮಣ್ಣಿನಲ್ಲಿ ತಾಮ್ರ, ಸೀಸ, ಸತು ಮತ್ತು ಕಬ್ಬಿಣದ ಅಂಶಗಳು ಪತ್ತೆ.
ಪರೀಕ್ಷೆಯಲ್ಲಿ 12 ಕೀಟನಾಶಕಗಳ ಅವಶೇಷಗಳು ಹೆಚ್ಚಿರುವುದು ಪತ್ತೆ.
ರೈತರು ವಿವಿಧ ಕೀಟನಾಶಕಗಳನ್ನು ಬಳಕೆ ಮಾಡುತ್ತಿರೋದು ಬೆಳಕಿಗೆ.

ಯಾವ ತರಕಾರಿಗಳು ಡೇಂಜರ್‌ ?-
ಬದನೆಕಾಯಿಯಲ್ಲಿ 20 ಪಟ್ಟು ಹೆಚ್ಚು ಸೀಸ ಇರುವುದು ಪತ್ತೆ.
ತೊಂಡೆಕಾಯಿಯಲ್ಲಿ ಸುಮಾರು 18 ಪಟ್ಟು ಹೆಚ್ಚು ಸೀಸದ ಅಂಶ.
ಅವರೆಕಾಯಿಯಲ್ಲಿ ಸುಮಾರು 9 ಪಟ್ಟು ಹೆಚ್ಚು ಸೀಸದ ಅಂಶ.
ಸೊಪ್ಪುಗಳು ಮತ್ತು ಕೋಸುಗಳಲ್ಲಿ ಸುಮಾರು 5 ಪಟ್ಟು ಸೀಸದ ಅಂಶ.

ಮಲೀನವಾಗಿರುವ ತರಕಾರಿಗಳು..!
ಸೌತೆಕಾಯಿ- ಹೀರೇಕಾಯಿ- ಕ್ಯಾಪ್ಸಿಕಂ- ಬೀಟ್ರೂಟ್‌- ಹಾಗಲಕಾಯಿ- ಚಿಲ್ಲಿ ಬಜ್ಜಿ- ಶುಂಠಿ.

ಆರೋಗ್ಯದ ಮೇಲಾಗುವ ಪರಿಣಾಮಗಳೇನು.?-
ವಿಷಕಾರಿ ತರಕಾರಿಗಳನ್ನು ಸೇವಿಸುವುದು ನರಮಂಡಲಗಳ ಮೇಲೆ ಹಾನಿ ಬೀರುತ್ತದೆ.
ಮಕ್ಕಳಲ್ಲಿ ಬುದ್ಧಿಮತ್ತೆ ಕುಸಿತ, ಮೂತ್ರಪಿಂಡ ಸಮಸ್ಯೆಗಳು, ರಕ್ತದ ಒತ್ತಡ ಸಮಸ್ಯೆಗಳು ಕಂಡು ಬರುತ್ತವೆ.

ಹೀಗಾಗಿ ಸಿಲಿಕಾನ್‌ ಸಿಟಿ ಜನರು ಮಾರುಕಟ್ಟೆಗಳಿಂದ ತರುವ ತರಕಾರಿಗಳನ್ನು ಚೆನ್ನಾಗಿ ತೊಳೆದು, ಉಪ್ಪು ನೀರಿನಲ್ಲಿ ಸ್ವಲ್ಪ ಹೊತ್ತು ನೆನಸಿಡಬೇಕು ನಂತರ ಸಿಪ್ಪೆತೆಗೆದು ಬಳಸುವುದು ಸೂಕ್ತ.

RELATED ARTICLES

Latest News