ಬೆಂಗಳೂರು,ಫೆ.9-ಬಿಬಿಎ ಪದವೀಧರೆ ತನ್ನ ತಾಯಿ ಹಾಗೂ ದೊಡ್ಡಮನ ಖಾಸಗಿ ಫೋಟೋವನ್ನು ತನ್ನ ಪ್ರಿಯಕರನಿಗೆ ಕಳುಹಿಸಿರುವ ಅಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.
23 ವರ್ಷದ ಪದವೀಧರೆಗೆ ಪ್ರಿಯಕರ ವರುಣ್ ಎಂಬಾತ ತಾಯಿ ಹಾಗೂ ದೊಡ್ಡಮನ ಖಾಸಗಿ ಫೋಟೋ ಕಳುಹಿಸುವಂತೆ ಹೇಳಿದ್ದಾನೆ. ಅದರಂತೆ ಆಕೆ ಅವರ ಖಾಸಗಿ ಫೋಟೋಗಳನ್ನು ತೆಗೆದು ಕಳುಹಿಸಿದ್ದಾಳೆ.
ಪದೇಪದೇ ಮಗಳು ಯಾರೊಂದಿಗೋ ಮಾತನಾಡುತ್ತಿರುವ ಬಗ್ಗೆ ಪೋಷಕರು ಕೇಳಿದಾಗ ಆಕೆ ಜಾರಿಕೆ ಉತ್ತರ ನೀಡಿ ರೇಗಾಡಿದ್ದಾಳೆ. ಪಾಸ್‌ವರ್ಡ್ ಪಡೆದು ಆಕೆಯ ಫೋನ್ ಪರಿಶೀಲಿಸಿದಾಗ ಅದರಲ್ಲಿ ತಾಯಿ ಮಲಗಿದ್ದಾಗ ತೆಗೆದ ಖಾಸಗಿ ಫೋಟೋ ಹಾಗೂ ದೊಡ್ಡಮ ಸ್ನಾನ ಮಾಡುವ ಫೋಟೋಗಳು ಇರುವುದು ಕಂಡು ಒಂದು ಕ್ಷಣ ಆತಂಕಗೊಂಡಿದ್ದಾರೆ.
ಅದನ್ನು ಯಾರಿಗೆ ಕಳುಹಿಸಿರಬಹುದೆಂದು ನೋಡಿದಾಗ ಗೆಳೆಯ ವರುಣ್ ಜೊತೆಗಿನ ಚಾಟ್ ಕಂಡುಬಂದಿದೆ.ಮಗಳ ವರ್ತನೆಯಿಂದ ಬೇಸತ್ತ ತಾಯಿ ಇದೀಗ ಬ್ಯಾಟರಾಯನಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
