Sunday, April 28, 2024
Homeರಾಷ್ಟ್ರೀಯನಾರಿಶಕ್ತಿ, ಯುವಶಕ್ತಿ, ಕಿಸಾನ್ ಔರ್ ಗರೀಬ್ ಎಂಬ ಜಾತಿ ಪರ ಕೆಲಸ ಮಾಡಿ : ಮೋದಿ

ನಾರಿಶಕ್ತಿ, ಯುವಶಕ್ತಿ, ಕಿಸಾನ್ ಔರ್ ಗರೀಬ್ ಎಂಬ ಜಾತಿ ಪರ ಕೆಲಸ ಮಾಡಿ : ಮೋದಿ

ನವದೆಹಲಿ,ಡಿ.23- ದೇಶದ ಯುವಕರು, ಬಡವರು , ರೈತರು ಹಾಗೂ ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು ಎಂದು ಬಿಜೆಪಿ ಕಾರ್ಯಕರ್ತರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. 2024ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಚಿಂತನ ಮಂಥಕ್ಕಾಗಿ ಜೆಪಿ ನಡ್ಡಾ ಅಧ್ಯಕ್ಷತೆಯಲ್ಲಿ ನಡೆದ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯುವಕರು, ಬಡವರು, ಮಹಿಳೆಯರು ಮತ್ತು ರೈತರು ಎಂಬ ನಾಲ್ಕು ಜಾತಿಗಳನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು ಎಂದು ಹೇಳಿದರು.

ಡಿ.3 ರಂದು ಮಧ್ಯಪ್ರದೇಶ, ಛತ್ತೀಸ್‍ಗಢ ಮತ್ತು ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದ ನಂತರ ಪ್ರಧಾನಿ ಮೋದಿ ಅವರು, ಈ ಚುನಾವಣೆಯಲ್ಲಿ ದೇಶವನ್ನು ಜಾತಿಗಳ ಆಧಾರದ ಮೇಲೆ ವಿಭಜಿಸುವ ಪ್ರಯತ್ನಗಳು ನಡೆದಿವೆ, ನನಗೆ ನಾಲ್ಕು ಜಾತಿಗಳು ಮಾತ್ರ ಗೊತ್ತು ಅವುಗಳೆಂದರೆ ನಾರಿ ಶಕ್ತಿ, ಯುವ ಶಕ್ತಿ, ಕಿಸಾನ್ ಔರ್ ಗರೀಬ್ ಪರಿವಾರ ಎಂದಿದ್ದಾರೆ.

ಸಭೆಯಲ್ಲಿ ಪ್ರಧಾನಿ ಮೋದಿ ಅವರು ಎಲ್ಲಾ ಅಧಿಕಾರಿಗಳಿಗೆ ಮಿಷನ್ ಮೋಡ್‍ನಲ್ಲಿ ಕೆಲಸ ಮಾಡಲು ಹೇಳಿದರು. ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಕೇಂದ್ರ ಸರ್ಕಾರದ ಬಡವರ ಕಲ್ಯಾಣ ಯೋಜನೆಗಳಿಗೆ ಸಂಬಂಧಿಸಿದ ಹೆಚ್ಚಿನ ಡೇಟಾವನ್ನು ಹಂಚಿಕೊಳ್ಳಲು ಅಧಿಕಾರಿಗಳಿಗೆ ತಿಳಿಸಲಾಯಿತು. ವಿರೋಧ ಪಕ್ಷಗಳ ಋಣಾತ್ಮಕ ಪ್ರಚಾರದ ಸತ್ಯಗಳ ಪ್ರಕಾರ ಸಕಾರಾತ್ಮಕ ಉತ್ತರಗಳನ್ನು ನೀಡಿ ಎಂದು ಅವರು ಸೂಚಿಸಿದರು.

ಹಮಾಸ್-ಇಸ್ರೇಲ್ ಯುದ್ಧದಲ್ಲಿ ಈವರೆಗೆ 20 ಸಾವಿರ ಪ್ಯಾಲೆಸ್ಟೀನಿಯರು ಬಲಿ

ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಸಭೆಯಲ್ಲಿ ಮೊದಲ ವಿಷಯ ಮಂಡಿಸಿದರು: ಲೋಕಸಭೆ ಚುನಾವಣೆಯಲ್ಲಿ ಶೇ.10ರಷ್ಟು ಮತಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಬೂತ್ ಮಟ್ಟದಲ್ಲಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು. ಈ ಕುರಿತು ಮಾತನಾಡಿದ ಪ್ರಧಾನಿ, ನಮ್ಮ ಯೋಜನೆಗಳು ಬಡವರು, ಯುವಕರು, ರೈತರು ಮತ್ತು ಮಹಿಳೆಯರಿಗೆ ಸರಿಯಾದ ರೀತಿಯಲ್ಲಿ ತಲುಪಿದರೆ ಅದು ನಮಗೆ ಸಹಾಯವಾಗುತ್ತದೆ ಎಂದರು.

ವಿಕಸಿತ್ ಭಾರತ್ ಸಂಕಲ್ಪ ಯಾತ್ರೆಯನ್ನು ಆಯೋಜಿಸುತ್ತಿರುವ ರಾಜ್ಯಗಳತ್ತ ಗಮನ ಹರಿಸಬೇಕು. ಯುಪಿಎ ಸರ್ಕಾರ ಮತ್ತು ಎನ್‍ಡಿಎ ಸರ್ಕಾರದ ನಡುವಿನ ವ್ಯತ್ಯಾಸವನ್ನು ಜನರಿಗೆ ಅರ್ಥಮಾಡಿಕೊಳ್ಳಲು ವಿಶೇಷ ಅಭಿಯಾನವನ್ನು ನಡೆಸಬೇಕು.ಬಿಜೆಪಿ ಪರ ಮತಗಳನ್ನು ಹೆಚ್ಚಿಸಲು ಬೂತ್ ನಿರ್ವಹಣೆಯತ್ತ ಗಮನ ಹರಿಸಬೇಕು ಎಂದು ಪ್ರಧಾನಿ ಮೋದಿ ಹೇಳಿದರು.

ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ಬೂತ್ ನಿರ್ವಹಣೆಯ ಉದಾಹರಣೆಯನ್ನು ಪ್ರಧಾನಿ ನೀಡಿದರು. ಪಕ್ಷದ ಪದಾಕಾರಿಗಳು ಬೂತ್ ನಿರ್ವಹಣೆಯನ್ನು ಸವಾಲಾಗಿ ತೆಗೆದುಕೊಳ್ಳಬೇಕು. ಸಂಘಟನಾ ಶಕ್ತಿಯಿಂದ ಮಾತ್ರ ಗೆಲುವು ಸಾಸಲಾಗುತ್ತದೆ; ಆದ್ದರಿಂದ, ಸಂಪೂರ್ಣವಾಗಿ ಸಿದ್ಧಪಡಿಸಿದ ನಂತರ ಜನರ ಬಳಿಗೆ ಹೋಗಿ ಎಂದು ಅವರು ತಿಳಿ ಹೇಳಿದರು.

RELATED ARTICLES

Latest News