Homeಅಂತಾರಾಷ್ಟ್ರೀಯಫಿಲಿಪ್ಪೀನ್ಸ್ ನಲ್ಲಿ ನಿರ್ಮಾಣ ಹಂತದ 9 ಅಂತಸ್ತಿನ ಕಟ್ಟಡ ಕುಸಿತ

ಫಿಲಿಪ್ಪೀನ್ಸ್ ನಲ್ಲಿ ನಿರ್ಮಾಣ ಹಂತದ 9 ಅಂತಸ್ತಿನ ಕಟ್ಟಡ ಕುಸಿತ

ಮನಿಲಾ, ಮೇ 24- ಫಿಲಿಪ್ಪೀನ್ಸ್ ರಾಜಧಾನಿ ಮನಿಲಾದ ಉತ್ತರ ಭಾಗದಲ್ಲಿರುವ ಏಂಜಲೀಸ್‌‍ ನಗರದಲ್ಲಿ ನಿರ್ಮಾಣ ಹಂತದಲ್ಲಿದ್ದ ಒಂಬತ್ತು ಅಂತಸ್ತಿನ ಕಟ್ಟಡ ಇಂದು ಮುಂಜಾನೆ ಕುಸಿದಿದೆ. ಹಲವಾರು ಕಾರ್ಮಿಕರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರೀ ಗುಡುಗು-ಮಳೆಯ ನಡುವೆ ಬೆಳಗ್ಗಿನ ಜಾವ ಈ ಘಟನೆ ನಡೆದಿದೆ. ಕಟ್ಟಡ ಕುಸಿಯುವ ಮುನ್ನ 22 ಕಾರ್ಮಿಕರು ಸುರಕ್ಷಿತವಾಗಿ ಹೊರಬರಲು ಸಾಧ್ಯವಾಗಿದ್ದು, ಇನ್ನೂ ಹಲವರು ಒಳಗೆ ಸಿಲುಕಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸ್‌‍ ಬ್ರಿಗೇಡಿಯರ್‌ ಜನರಲ್‌ ಜೆಸ್‌‍ ಮೆಂಡೆಜ್‌ ಅವರ ಪ್ರಕಾರ, 100ಕ್ಕೂ ಹೆಚ್ಚು ಪೊಲೀಸರು ಮತ್ತು ಸರ್ಕಾರಿ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಅವಶೇಷಗಳಡಿ ಸಿಲುಕಿರುವವರನ್ನು ಪತ್ತೆಹಚ್ಚಲು ಪ್ರಯತ್ನ ನಡೆಸುತ್ತಿದ್ದಾರೆ.

ಏಂಜಲೀಸ್‌‍ ನಗರದ ಮಾಹಿತಿ ವಿಭಾಗದ ಮುಖ್ಯಸ್ಥ ಜೇ ಪೆಲಾಯೊ ಅವರು, ನಿರ್ಮಾಣ ಸ್ಥಳದ ಮೇಲ್ವಿಚಾರಕರ ಮಾಹಿತಿ ಪ್ರಕಾರ ಕನಿಷ್ಠ 30 ಕಾರ್ಮಿಕರು ಇನ್ನೂ ಅವಶೇಷಗಳಡಿ ಸಿಲುಕಿರಬಹುದು ಎಂದು ತಿಳಿಸಿದ್ದಾರೆ. ಏಂಜಲೀಸ್‌‍ ನಗರವು ಹಿಂದೆ ಅಮೆರಿಕದ ದೊಡ್ಡ ವಾಯುಪಡೆ ನೆಲೆಗಳಲ್ಲಿ ಒಂದಾಗಿತ್ತು. ಬಳಿಕ ಅದು ವಾಣಿಜ್ಯ ಮತ್ತು ಮನರಂಜನಾ ಕೇಂದ್ರವಾಗಿ ಅಭಿವೃದ್ಧಿಯಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

RELATED ARTICLES

Latest News