Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (05-06-2026)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (05-06-2026)

Today's Horoscope

ನಿತ್ಯ ನೀತಿ : ಜೀವನದಲ್ಲಿ ಹೊಂದಾಣಿಕೆ ಎಷ್ಟು ಮುಖ್ಯನೋ.! ಅರ್ಥ ಮಾಡಿಕೊಳ್ಳುವ ಮನಸ್ಸು ಅಷ್ಟೇ ಮುಖ್ಯ..!!

ಪಂಚಾಂಗ : ಶುಕ್ರವಾರ, 05-06-2026
ಪರಾಭವ ನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ಗ್ರೀಷ / ಮಾಸ: ಅಧಿಕ ಜ್ಯೇಷ್ಠ / ಪಕ್ಷ: ಕೃಷ್ಣ / ತಿಥಿ: ಪಂಚಮಿ / ನಕ್ಷತ್ರ: ಶ್ರವಣಪೂರ್ವ / ಯೋಗ: ಬ್ರಹಾ / ಕರಣ: ಕೌಲವ
ಸೂರ್ಯೋದಯ – ಬೆ.5.53
ಸೂರ್ಯಾಸ್ತ – 06.44
ರಾಹುಕಾಲ – 10.30-12.00
ಯಮಗಂಡ ಕಾಲ – 3.00- 4.30
ಗುಳಿಕ ಕಾಲ – 7.30-9.00

ರಾಶಿಭವಿಷ್ಯ :
ಮೇಷ
: ನಿಮ್ಮ ಕೆಲಸದಲ್ಲಿ ಪ್ರಾಮಾಣಿಕತೆ ಕಾಪಾಡಿಕೊಳ್ಳಿ ಮತ್ತು ಎಚ್ಚರಿಕೆಯಿಂದ ಮಾಡಿ.
ವೃಷಭ: ವ್ಯವಹಾರದಲ್ಲಿನ ನಿಮ್ಮ ನಿರ್ಧಾರಗಳು ಲಾಭ ತಂದುಕೊಡಲು ಕಾರಣವಾಗುತ್ತವೆೆ. ಹಿರಿಯ ಅಧಿಕಾರಿಗಳು ನಿಮ್ಮ ವ್ಯಕ್ತಿತ್ವವನ್ನು ಪ್ರಶಂಸಿಸುವರು.
ಮಿಥುನ: ಕುಟುಂಬದ ಸದಸ್ಯರಿಂದ ಒಳ್ಳೆಯ ಸುದ್ದಿ ಕೇಳುವಿರಿ. ಅತ್ತಿಗೆಯಿಂದ ಲಾಭವಾಗಲಿದೆ.

ಕಟಕ: ತಂದೆಯ ಮಾರ್ಗ ದರ್ಶನದೊಂದಿಗೆ, ನಿಮಗೆ ಅಂಟಿಕೊಂಡಿರುವ ಎಲ್ಲಾ ಕೆಲಸ-ಕಾರ್ಯಗಳು ಪೂರ್ಣಗೊಳ್ಳುತ್ತವೆ.
ಸಿಂಹ: ಯೋಜಿತ ರೀತಿಯಲ್ಲಿ ಹೋದರೆ ಸಮಸ್ಯೆಗಳು ನಿವಾರಣೆಯಾಗುವುದರಲ್ಲಿ ಸಂದೇಹವಿಲ್ಲ.
ಕನ್ಯಾ: ನಿಮ್ಮ ಕೆಲಸದ ಸ್ಥಳದಲ್ಲಿ ಸ್ವಲ್ಪ ಕಷ್ಟ ಅನುಭವಿ ಸುತ್ತೀರಿ. ಕುಟುಂಬದ ಖರ್ಚುಗಳನ್ನು ನಿಯಂತ್ರಿಸುವ ಅವಶ್ಯಕತೆ ಇರುತ್ತದೆ.

ತುಲಾ: ಹಿಂದೆ ನೀಡಿದ ಹಣವನ್ನು ನಿಮ್ಮ ಸ್ನೇಹಿತರು ಹಿಂದಿರುಗಿಸುವುದರಿಂದ ಮನಸ್ಸಿಗೆ ಸಂತೋಷವಾಗುತ್ತದೆ. ಅದೃಷ್ಟ ನಿಮ್ಮ ಕಡೆಗಿದೆ.
ವೃಶ್ಚಿಕ: ಮುಂಬರುವ ದಿನಗಳನ್ನು ಗಮನದಲ್ಲಿಟ್ಟು ಕೊಂಡು ಬಟ್ಟೆ, ಆಭರಣ ಇತ್ಯಾದಿಗಳನ್ನು ಖರೀದಿಸಿ.
ಧನುಸ್ಸು: ಹೊಸ ವ್ಯಾಪಾರ ಆರಂಭಿಸಲು ಸಮಯ ಅನುಕೂಲಕರವಾಗಿದೆ. ಗೌರವ ಹೆಚ್ಚಾಗುತ್ತದೆ.

ಮಕರ: ಪೋಷಕರ ಆರೋಗ್ಯದ ಬಗ್ಗೆ ಸಂಪೂರ್ಣ ಕಾಳಜಿ ವಹಿಸಿ ಮತ್ತು ವೈದ್ಯರ ಸಲಹೆ ಪಡೆಯಿರಿ.
ಕುಂಭ: ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ಹೆಚ್ಚು ಜಾಗ್ರತೆ ವಹಿಸುವುದು ಒಳಿತು.
ಮೀನ: ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಿ. ಇಲ್ಲದಿದ್ದರೆ ಅಪಘಾತ ಸಂಭವಿಸಬಹುದು.

RELATED ARTICLES
spot_img

Latest News