ನಿತ್ಯ ನೀತಿ : ಹಣದಿಂದ ಬರುವ ಗೌರವ ದೀಪದ ಬೆಳಕಿನಂತೆ. ದೀಪದ ಎಣ್ಣೆ ಇರುವವರೆಗೆ ಮಾತ್ರ ಬೆಳಗುತ್ತದೆ. ಒಳ್ಳೆಯತನಕ್ಕೆ ಸಿಗುವ ಸೂರ್ಯನಂತೆ. ಸೃಷ್ಟಿ ಇರುವವರೆಗೆ ಬೆಳಗುತ್ತದೆ.
ಪಂಚಾಂಗ : ಭಾನುವಾರ , 14-06-2026
ಪರಾಭವ ನಾಮ ಸಂವತ್ಸರ / ಆಯನ:ಉತ್ತರಾಯಣ/ ಋತು: ಸೌರ ಗ್ರೀಷ / ಮಾಸ: ಅಧಿಕ ಜ್ಯೇಷ್ಠ / ಪಕ್ಷ: ಕೃಷ್ಣ / ತಿಥಿ: ಚತುರ್ದಶಿ / ನಕ್ಷತ್ರ: ರೋಹಿಣಿ / ಯೋಗ: ಧೃತಿ / ಕರಣ: ಚತುಷ್ಪಾದ
ಸೂರ್ಯೋದಯ – ಬೆ.5.54
ಸೂರ್ಯಾಸ್ತ – 06.47
ರಾಹುಕಾಲ – 4.30-6.00
ಯಮಗಂಡ ಕಾಲ – 12.00-1.30
ಗುಳಿಕ ಕಾಲ -3.00-4.30
ರಾಶಿಭವಿಷ್ಯ :
ಮೇಷ: ಕಾಫಿ ಮತ್ತು ಅಡಿಕೆ ಕೃಷಿಕರಿಗೆ ಹೆಚ್ಚಿನ ಲಾಭ ಸಿಗಲಿದೆ. ಸ್ವಂತ ವ್ಯಾಪಾರದಲ್ಲಿ ಅಭಿವೃದ್ಧಿ ಸಾಧಿಸುವಿರಿ.
ವೃಷಭ: ಕೆಲಸದಲ್ಲಿ ಬಡ್ತಿ ಸಿಗಬಹುದು ಹಾಗೂ ಪ್ರಗತಿ ಪಥದೆಡೆಗೆ ಜೀವನ ಸಾಗಬಹುದು.
ಮಿಥುನ: ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸದ ಕೊರತೆ ಕಾಡಬಹುದು. ದಾಂಪತ್ಯದಲ್ಲಿ ಅಪನಂಬಿಕೆ.
ಕಟಕ: ವ್ಯಾಪಾರಿಗಳು ತಮ್ಮ ಕಠಿಣ ಪರಿಶ್ರಮಕ್ಕೆ ಅನುಗುಣವಾಗಿ ಉತ್ತಮ ಫಲ ಪಡೆಯುವರು.
ಸಿಂಹ: ಉದ್ಯೋಗ ಸ್ಥಳದಲ್ಲಿ ನಿಮ್ಮ ಕೆಲಸಕ್ಕೆ ಹಿರಿಯರಿಂದ ಮನ್ನಣೆ ಸಿಗಲಿದೆ.
ಕನ್ಯಾ: ಹೊಸ ವ್ಯಾಪಾರದಲ್ಲಿ ಪ್ರಗತಿ ಸಾಧಿಸುವಿರಿ.
ತುಲಾ: ಯಾರ ಬಗ್ಗೆಯೂ ಹಗುರವಾಗಿ ಮಾತನಾಡ ಬೇಡಿ. ನಿಮಗೆ ಬರಬೇಕಾದ ಹಳೇ ಬಾಕಿ ಇದ್ದಲ್ಲಿ ಬರುವ ಸಾಧ್ಯತೆಗಳು ಹೆಚ್ಚಾಗಿವೆ.
ವೃಶ್ಚಿಕ: ಯಾವುದಾದರೂ ಒಂದು ವಿಚಾರವಾಗಿ ಚಿಂತೆ ನಿಮ್ಮನ್ನು ಕಾಡಲಿದೆ.
ಧನುಸ್ಸು: ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲಕರ ವಾದ ದಿನವಾಗಿದೆ. ಧೈರ್ಯ ಹೆಚ್ಚಾಗಿರುತ್ತದೆ.
ಮಕರ: ಮಹಿಳೆಯರು ಸಂಸಾರದ ಗುಟ್ಟನ್ನು ಹೊಸಬರ ಜತೆಗೆ ಹಂಚಿಕೊಳ್ಳದಿರಿ.
ಕುಂಭ: ಕೆಲ ಜನರು ನಿಮ್ಮನ್ನು ನೋಡಿ ಅಸೂಯೆ ಪಡೆಯಬಹುದು. ಖರ್ಚು ಹೆಚ್ಚಾಗುವ ಸಂಭವವಿದೆ.
ಮೀನ: ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ.
