ನಿತ್ಯ ನೀತಿ : ನೀರಿನಲ್ಲಿ ದೋಣಿ ಇರಬೇಕು. ಆದರೆ, ದೋಣಿಯಲ್ಲಿ ನೀರು ಇರಬಾರದು. ಬದುಕಿನಲ್ಲಿ ನೆನಪುಗಳು ಇರಬೇಕು, ನೆನಪುಗಳೇ ಬದುಕು ಆಗಬಾರದು.
ಪಂಚಾಂಗ : ಮಂಗಳವಾರ, 07-07-2026
ಪರಾಭವ ನಾಮ ಸಂವತ್ಸರ / ಆಯನ:ದಕ್ಷಿಣಾಯನ ಋತು: ಸೌರ ವರ್ಷಾ / ಮಾಸ: ನಿಜ ಜ್ಯೇಷ್ಠ / ಪಕ್ಷ: ಕೃಷ್ಣ / ತಿಥಿ: ಸಪ್ತಮಿ / ನಕ್ಷತ್ರ: ಉ.ಭಾ. / ಯೋಗ: ಶೋಭನ / ಕರಣ: ಬಾಲವ
ಸೂರ್ಯೋದಯ – ಬೆ.5.59
ಸೂರ್ಯಾಸ್ತ – 06.51
ರಾಹುಕಾಲ – 3.00-4.30
ಯಮಗಂಡ ಕಾಲ – 9.00- 10.30
ಗುಳಿಕ ಕಾಲ – 12.00- 1.30
ರಾಶಿಭವಿಷ್ಯ :
ಮೇಷ: ಮಕ್ಕಳು ಶಿಕ್ಷಣ ಹಾಗೂ ಸೃಜನಶೀಲ ಕ್ಷೇತ್ರ ಗಳಲ್ಲಿ ಆಸಕ್ತಿ ವಹಿಸುವರು.
ವೃಷಭ: ಉದ್ಯೋಗದಲ್ಲಿ ಬಡ್ತಿ ಹಾಗೂ ನೀವು ಕೇಳಿದ ಸ್ಥಳಕ್ಕೆ ವರ್ಗಾವಣೆ ಪಡೆಯಲು ಅವಕಾಶವಿದೆ.
ಮಿಥುನ: ವಿವಾಹದ ಆಚೆಗಿನ ಸಂಬಂಧಗಳ ಕಡೆಗೆ ಆಲೋಚನೆ ಮಾಡದಿರಿ. ಎಚ್ಚರಿಕೆ ವಹಿಸಿ.
ಕಟಕ: ಸಾಲಗಾರರ ಒತ್ತಡ ಹೆಚ್ಚಾಗಲಿದೆ.
ಸಿಂಹ: ನಿಮ್ಮ ಅಹಂಕಾರದ ಕಾರಣಕ್ಕೆ ಹಣಕಾಸು ನಷ್ಟ ಅನುಭವಿಸಲಿದ್ದೀರಿ.
ಕನ್ಯಾ: ಉದ್ಯೋಗದ ಕಡೆಗೆ ಹೆಚ್ಚಿನ ಗಮನ ಹರಿಸಿ.
ತುಲಾ: ಯಾವುದೇ ಕಾರಣಕ್ಕೂ ಕೆಲಸ ಬಿಡುವಂಥ ನಿರ್ಧಾರ ಮಾಡಬೇಡಿ. ಯಾವುದೇ ಅಪಾಯಕಾರಿ ಸವಾಲುಗಳನ್ನು ಮೈ ಮೇಲೆ ಎಳೆದುಕೊಳ್ಳಬೇಡಿ.
ವೃಶ್ಚಿಕ: ಇತರರ ಸಾಲಗಳಿಗೆ ಜಾಮೀನಾಗಿ ನಿಲ್ಲಬೇಡಿ. ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಧನುಸ್ಸು: ಹೆಜ್ಜೆಹೆಜ್ಜೆಗೂ ಶತ್ರುಗಳಿಂದ ಅಡೆತಡೆ ಸೇರಿದಂತೆ ಹಲವು ತೊಂದರೆಗಳು ಎದುರಾಗಲಿವೆ.
ಮಕರ:ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಹಿನ್ನಡೆಯಾಗಲಿದೆ.
ಕುಂಭ: ದಂಪತಿ ಮಧ್ಯೆ ಸಣ್ಣ- ಪುಟ್ಟ ವಿಚಾರಗಳಿಗೆ ಭಿನ್ನಾಭಿಪ್ರಾಯ ಎದುರಾಗಬಹುದು.
ಮೀನ: ಮಧುಮೇಹ, ರಕ್ತದೊತ್ತಡದ ಸಮಸ್ಯೆ ಕಾಣಿಸಿಕೊಳ್ಳಬಹುದು ಅಥವಾ ಉಲ್ಬಣಿಸಬಹುದು.
