Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ

Today's Horoscope

ನಿತ್ಯ ನೀತಿ : ತಪ್ಪು ದಾರಿಯಲ್ಲಿ ಸಿಗುವ ಕೋಟಿ ರೂಪಾಯಿಗಿಂತ, ಸರಿಯಾದ ಹಾದಿಯಲ್ಲಿ ಸಿಗುವ ಒಂದು ರೂಪಾಯಿ ನೆಮದಿ ತರುತ್ತದೆ. ಅಂತಿಮವಾಗಿ ಪ್ರಕೃತಿಯ ನ್ಯಾಯಾಲಯದಲ್ಲಿ ನಮ ಪ್ರಾಮಾಣಿಕತೆಗೆ ಬೆಲೆ ಸಿಗುತ್ತದೆ.

ಪಂಚಾಂಗ : ಬುಧವಾರ 05-08-2026
ಪರಾಭವ ನಾಮ ಸಂವತ್ಸರ / ಆಯನ:ದಕ್ಷಿಣಾಯನ ಋತು: ಸೌರ ವರ್ಷಾ / ಮಾಸ: ಆಷಾಢ / ಪಕ್ಷ: ಕೃಷ್ಣ / ತಿಥಿ: ಸಪ್ತಮಿ / ನಕ್ಷತ್ರ: ಅಶ್ವಿನಿ / ಯೋಗ: ಶೂಲ / ಕರಣ: ವಿಷ್ಟಿ
ಸೂರ್ಯೋದಯ – ಬೆ.6.06
ಸೂರ್ಯಾಸ್ತ – 06.47
ರಾಹುಕಾಲ – 12.00-1.30
ಯಮಗಂಡ ಕಾಲ – 7.30-9.00
ಗುಳಿಕ ಕಾಲ – 10.30-12.00

ರಾಶಿಭವಿಷ್ಯ :
ಮೇಷ
: ಸಂಗಾತಿ ಮೇಲೆ ಒತ್ತಡ ಹಾಕುವುದರಿಂದ ಅಸಮಾಧಾನವಾಗುವ ಸಾಧ್ಯತೆ ಇದೆ.
ವೃಷಭ: ನಿಮ್ಮ ಮೇಲೆ ಬಾಕಿ ಇರುವ ಕೆಲಸಗಳ ಹೊರೆ ಹೆಚ್ಚಾಗಬಹುದು. ಎಚ್ಚರಿಕೆಯಿಂದಿರಿ.

ಮಿಥುನ: ದೂರ ಪ್ರಯಾಣ ಮಾಡುವುದರಿಂದ ನಷ್ಟವಾಗುವ ಸಾಧ್ಯತೆಗಳು ಹೆಚ್ಚಾಗಿವೆ.
ಕಟಕ: ತಾಯಿಗೆ ದೈಹಿಕ ನೋವಿನಿಂದಾಗಿ ನೀವು ಸ್ವಲ್ಪ ಸಮಯದವರೆಗೆ ತೊಂದರೆ ಅನುಭವಿಸ ಬೇಕಾಗುತ್ತದೆ.
ಸಿಂಹ: ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಿ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ.

ಕನ್ಯಾ: ಆದಾಯ ಹೆಚ್ಚಾದರೂ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕುವುದು ಅನಿವಾರ್ಯ.
ತುಲಾ: ವ್ಯಾಪಾರದಲ್ಲಿ ಲಾಭ ದೊರೆಯಲಿದೆ. ಹಿರಿಯರಿಂದ ಹಿತವಚನ ಕೇಳುವಿರಿ.
ವೃಶ್ಚಿಕ: ಕಠಿಣ ಪರಿಶ್ರಮ ದಿಂದ ಮಾತ್ರ ನಿಮ್ಮ ಕೆಲಸದಲ್ಲಿ ಯಶಸ್ವಿಯಾಗಲು ಸಾಧ್ಯವಾಗುತ್ತದೆ.

ಧನುಸ್ಸು:ವಿರೋ ಗಳೂ ಸಹ ಮೆಚ್ಚುವಂತಹ ಕಾರ್ಯಸಾಧನೆ ಮಾಡುವಿರಿ.
ಮಕರ: ಕೆಲಸ-ಕಾರ್ಯಗಳು ಮಂದಗತಿಯಲ್ಲಿ ಸಾಗುತ್ತವೆ. ಮನೆ ಸಮಸ್ಯೆಗಳ ಬಗ್ಗೆ ಗಮನ ಕೊಡಿ.
ಕುಂಭ: ನೀವು ಮಾಡುವ ಕೆಲಸಗಳಿಂದ ಸಮಾಜ ದಲ್ಲಿ ಉತ್ತಮ ಸ್ಥಾನಮಾನ ದೊರೆಯಲಿದೆ.
ಮೀನ: ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳುವಿರಿ. ಎಲ್ಲೋ ಸಿಲುಕಿಕೊಂಡಿದ್ದ ಹಣ ಕೈ ಸೇರಲಿದೆ.

RELATED ARTICLES
spot_img

Latest News