Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (21-08-2026)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (21-08-2026)

ನಿತ್ಯ ನೀತಿ : ಉರಿಯುತ್ತಿರುವ ಬೆಂಕಿಯೇ ಹೆಚ್ಚು ಹೊತ್ತು ಇರಲ್ಲ, ಅಂದಮೇಲೆ ಉರಿದುಕೊಳ್ಳುವ ಜನ ಎಷ್ಟು ದಿನ ಇರುತ್ತಾರೆ.?

ಪಂಚಾಂಗ : ಶುಕ್ರವಾರ, 21-08-2026
ಪರಾಭವ ನಾಮ ಸಂವತ್ಸರ / ಆಯನ:ದಕ್ಷಿಣಾಯನ ಋತು: ಸೌರ ವರ್ಷಾ / ಮಾಸ: ಶ್ರಾವಣ / ಪಕ್ಷ: ಶುಕ್ಲ / ತಿಥಿ: ನವಮಿ / ನಕ್ಷತ್ರ: ಅನುರಾಧಾ / ಯೋಗ: ವೈಧೃತಿ / ಕರಣ: ಬಾಲವ
ಸೂರ್ಯೋದಯ – ಬೆ.6.09
ಸೂರ್ಯಾಸ್ತ – 06.39
ರಾಹುಕಾಲ – 10.30-12.00
ಯಮಗಂಡ ಕಾಲ – 3.00- 4.30
ಗುಳಿಕ ಕಾಲ – 7.30-9.00

ರಾಶಿಭವಿಷ್ಯ
ಮೇಷ
: ವೃತ್ತಿರಂಗದಲ್ಲಿ ಯಶಸ್ಸು ಕಾಣುವಿರಿ, ನಿಮ್ಮ ಪ್ರತಿಭೆಗೆ ತಕ್ಕ ಫಲ ಸಿಗಲಿದೆ.
ವೃಷಭ: ವಿಪರೀತ ಹಣವ್ಯಯ, ಚಂಚಲ ಮನಸ್ಸು, ಹಿರಿಯರ ಮಾತಿಗೆ ಗೌರವ ಕೊಡಿ.
ಮಿಥುನ: ಉದ್ಯೋಗದಲ್ಲಿ ಭಡ್ತಿ ಸಿಗುವುದು, ಅ ಕ ಕೆಲಸದ ಒತ್ತಡ ಉಂಟಾಗಲಿದೆ.

ಕಟಕ: ವಿಪರೀತ ತಿರುಗಾಟ, ಸಣ್ಣ ಮಾತಿನಿಂದ ಕಲಹ ಉಂಟಾಗುವುದು.
ಸಿಂಹ: ಕೆಲಸದಲ್ಲಿ ಏಕಾಗ್ರತೆ ಕಾಪಾಡಿಕೊಳ್ಳಿ, ಅನ್ಯರ ಮನಸ್ಸನ್ನು ಗೆಲ್ಲುವಿರಿ.
ಕನ್ಯಾ: ಹಳೆಯ ಸಾಲ ವಸೂಲಿ ಆಗುವುದು, ಸಹೋದರರಿಂದ ಉತ್ತಮ ಬೆಂಬಲ.

ತುಲಾ: ಅಪರಿಚಿತದಿಂದ ತೊಂದರೆ ಉಂಟಾಗಲಿದೆ, ವಿದ್ಯಾರ್ಥಿಗಳು ಗೊಂದಲಕ್ಕೆ ಸಿಲುಕುವಿರಿ.
ವೃಶ್ಚಿಕ: ಅವಸರದ ತೀರ್ಮಾನ ತೆಗೆದುಕೊಳ್ಳಬೇಡಿ, ಕುತಂತ್ರಕ್ಕೆ ಬಲಿಯಾಗುವಿರಿ ಎಚ್ಚರ.
ಧನುಸ್ಸು: ವಿವಿಧ ಮೂಲಗಳಿಂದ ಧನ ಲಾಭ, ಹಿತ ಶತ್ರು ಬಾಧೆ ದಿನಪೂರ್ತಿ ಕಾಡಲಿದೆ.

ಮಕರ: ಶಾಲಾ ಮಿತ್ರರನ್ನು ಭೇಟಿ ಮಾಡುವಿರಿ, ಪಿತ್ರಾರ್ಜಿತ ಆಸ್ತಿ ವಿವಾದ ಬಗೆಹರಿಯಲಿದೆ.
ಕುಂಭ: ಭೂ ವ್ಯವಹಾರದಲ್ಲಿ ನಷ್ಟ, ಶರೀರದಲ್ಲಿ ತಳಮಳ. ದೇವತಾ ಕಾರ್ಯಗಳಲ್ಲಿ ಭಾಗಿಯಾಗುವಿರಿ.
ಮೀನ: ಕ್ಷುಲ್ಲಕ ವಿಷಯಕ್ಕೆ ಮಾತಿನ ಚಕಮಕಿ,ಆರ್ಥಿಕ ಪರಿಸ್ಥಿತಿ ಏರಿಳಿತ.

RELATED ARTICLES
spot_img

Latest News