ಚಿಕ್ಕಮಗಳೂರು,ಆ.21- ಕಾಫಿ ನಾಡಿನ ಕಳಸ ತಾಲೂಕಿನ ಮರಸಣಿಗೆ ಗ್ರಾಮದ ಗುಮನ್ ಖಾನ್ ತೋಟದ ಪಕ್ಕದಲ್ಲಿ ಚಿರತೆಯೆಂದು ಎರಡು ಮರಿಗಳಿಗೆ ಜನ ನೀಡಿದೆ. ಸ್ಥಳದಲ್ಲಿ ತಾಯಿ ಚಿರತೆ ಕಾಣಿಸಿಕೊಂಡಿರುವುದಿಲ್ಲ.
ಚಿರತೆ ಮರಿಗಳನ್ನು ಕಂಡು ಕಾರ್ಮಿಕರು ಭಯಭೀತರಾಗಿ ತೋಟದ ಮಾಲೀಕರಿಗೆ ತಿಳಿಸಿದ್ದು ಈ ವಿಷಯವನ್ನು ಕೂಡಲೇ ಅರಣ್ಯ ಇಲಾಖೆ ಗಮನಕ್ಕೆ ತರಲಾಗಿದೆ. ಚಿರತೆ ಮರಿಗಳು ಪ್ರತ್ಯಕ್ಷವಾಗಿರುವ ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ ಅಧಿಕಾರಿಗಳು ಚಿರತೆ ಮರಿಗಳನ್ನು ತಾಯಿಯ ಜೊತೆ ಸೇರಿಸುವ ಕೆಲಸದಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.
