Homeಜಿಲ್ಲಾ ಸುದ್ದಿಗಳುಚಿಕ್ಕಮಗಳೂರು : ಕಾಫಿ ತೋಟದಲ್ಲಿ ಚಿರತೆ ಮರಿಗಳು ಪ್ರತ್ಯಕ್ಷ

ಚಿಕ್ಕಮಗಳೂರು : ಕಾಫಿ ತೋಟದಲ್ಲಿ ಚಿರತೆ ಮರಿಗಳು ಪ್ರತ್ಯಕ್ಷ

ಚಿಕ್ಕಮಗಳೂರು,ಆ.21- ಕಾಫಿ ನಾಡಿನ ಕಳಸ ತಾಲೂಕಿನ ಮರಸಣಿಗೆ ಗ್ರಾಮದ ಗುಮನ್‌ ಖಾನ್‌ ತೋಟದ ಪಕ್ಕದಲ್ಲಿ ಚಿರತೆಯೆಂದು ಎರಡು ಮರಿಗಳಿಗೆ ಜನ ನೀಡಿದೆ. ಸ್ಥಳದಲ್ಲಿ ತಾಯಿ ಚಿರತೆ ಕಾಣಿಸಿಕೊಂಡಿರುವುದಿಲ್ಲ.

ಚಿರತೆ ಮರಿಗಳನ್ನು ಕಂಡು ಕಾರ್ಮಿಕರು ಭಯಭೀತರಾಗಿ ತೋಟದ ಮಾಲೀಕರಿಗೆ ತಿಳಿಸಿದ್ದು ಈ ವಿಷಯವನ್ನು ಕೂಡಲೇ ಅರಣ್ಯ ಇಲಾಖೆ ಗಮನಕ್ಕೆ ತರಲಾಗಿದೆ. ಚಿರತೆ ಮರಿಗಳು ಪ್ರತ್ಯಕ್ಷವಾಗಿರುವ ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ ಅಧಿಕಾರಿಗಳು ಚಿರತೆ ಮರಿಗಳನ್ನು ತಾಯಿಯ ಜೊತೆ ಸೇರಿಸುವ ಕೆಲಸದಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.

RELATED ARTICLES
spot_img

Latest News