ನಿತ್ಯ ನೀತಿ : ಮಳೆ ಬಂದು ನಿಂತ ನಂತರವೇ ಪ್ರಕೃತಿ ಸುಂದರವಾಗಿ ಕಾಣುವುದು. ಹಾಗೆ ಜೀವನದಲ್ಲಿ ಕಷ್ಟಗಳು ಬಂದು ಹೋದ ನಂತರವೇ ಜೀವನ ಸುಂದರವಾಗಿ ಕಾಣುವುದು..!!
ಪಂಚಾಂಗ : ಬುಧವಾರ, 02-09-2026
ಪರಾಭವ ನಾಮ ಸಂವತ್ಸರ / ಆಯನ:ದಕ್ಷಿಣಾಯನ ಋತು: ಸೌರ ಶರದ / ಮಾಸ: ಶ್ರಾವಣ
ಪಕ್ಷ: ಕೃಷ್ಣ / ತಿಥಿ: ಪಂಚಮಿ / ನಕ್ಷತ್ರ: ಭರಣಿ / ಯೋಗ: ಧ್ರುವ / ಕರಣ: ಗರಜ
ಸೂರ್ಯೋದಯ : ಬೆ.6.10
ಸೂರ್ಯಾಸ್ತ : 06.32
ರಾಹುಕಾಲ : 12.00-1.30
ಯಮಗಂಡ ಕಾಲ : 7.30-9.00
ಗುಳಿಕ ಕಾಲ : 10.30-12.00
ರಾಶಿ ಭವಿಷ್ಯ
ಮೇಷ: ಮಕ್ಕಳ ಜೀವನದಲ್ಲಿ ಕೆಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ, ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಿಸಲಿದೆ.
ವೃಷಭ: ಆಧ್ಯಾತ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ. ವೃತ್ತಿ ಪ್ರಗತಿಗೆ ಹೊಸ ಅವಕಾಶಗಳು ದೊರೆಯಲಿವೆ.
ಮಿಥುನ: ಉದ್ಯೋಗಸ್ಥರಿಗೆ ಬಡ್ತಿಯ ಅವಕಾಶಗಳು ಹೆಚ್ಚಾಗುತ್ತವೆ, ಕಚೇರಿಯಲ್ಲಿ ಕೆಲಸದ ಜವಾಬ್ದಾರಿಗಳು ಹೆಚ್ಚಾಗುತ್ತವೆ.
ಕಟಕ: ಆರ್ಥಿಕವಾಗಿ ಉತ್ತಮ ದಿನ. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಯೋಚಿಸಿ ಮುಂದುವರಿಯಿರಿ.
ಸಿಂಹ:ವೃತ್ತಿಜೀವನದಲ್ಲಿ ಪ್ರಗತಿಗೆ ಹಲವು ಹೊಸ ಅವಕಾಶಗಳು ದೊರೆಯಲಿವೆ. ಆರೋಗ್ಯ ಸುಧಾರಿಸಲಿದೆ.
ಕನ್ಯಾ: ಪಿತ್ರಾರ್ಜಿತ ಆಸ್ತಿಯಿಂದ ಆರ್ಥಿಕ ಲಾಭ. ಕಚೇರಿಯಲ್ಲಿ ಉತ್ತಮ ವಾತಾವರಣವಿರುತ್ತದೆ.
ತುಲಾ: ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಕುಟುಂಬದೊಂದಿಗೆ ಪ್ರವಾಸ ಕೈಗೊಳ್ಳುವಿರಿ.
ವೃಶ್ಚಿಕ: ವ್ಯಾಪಾರದಲ್ಲಿ ಬೆಳವಣಿಗೆಗೆ ಹೊಸ ಅವಕಾಶಗಳಿವೆ. ಶೈಕ್ಷಣಿಕ ಕೆಲಸದ ಧನಾತ್ಮಕ ಫಲಿತಾಂಶಗಳನ್ನು ಪಡೆಯುತ್ತೀರಿ.
ಧನುಸ್ಸು: ಅನಗತ್ಯ ಖರ್ಚುಗಳನ್ನು ನಿಯಂತ್ರಿಸಿ. ವೃತ್ತಿ ಜೀವನದಲ್ಲಿ ಸವಾಲು ಎದುರಿಸುವಿರಿ.
ಮಕರ: ಬಹುದಿನಗಳ ಕನಸುಗಳು ನನಸಾ ಗಲಿದೆ.ಹಣಕಾಸಿನ ವಿಚಾರದಲ್ಲಿ ಉತ್ತಮ ದಿನ.
ಕುಂಭ: ಸಾಮಾಜಿಕ ಸ್ಥಾನಮಾನ ಮತ್ತು ಗೌರವ ಹೆಚ್ಚಾಗಬಹುದು. ಹೊಸ ಉದ್ಯೋಗ ಆರಂಭಿಸುವಿರಿ.
ಮೀನ: ಹಣಕಾಸಿನ ವಿಚಾರದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಎದುರಾಗಬಹುದು. ಪ್ರೇಮ ಜೀವನದಲ್ಲಿ ಪ್ರೀತಿ ಮತ್ತು ಉತ್ಸಾಹ ಹೆಚ್ಚಾಗಲಿದೆ.
