Homeಅಂತಾರಾಷ್ಟ್ರೀಯಇಸ್ರೇಲ್‌ನಲ್ಲಿ ಮತ್ತೆ ಸರ್ಕಾರ ರಚಿಸುವ ವಿಚಾರದಲ್ಲಿ ನೆತನ್ಯಾಹುಗೆ ಹಿನ್ನಡೆ

ಇಸ್ರೇಲ್‌ನಲ್ಲಿ ಮತ್ತೆ ಸರ್ಕಾರ ರಚಿಸುವ ವಿಚಾರದಲ್ಲಿ ನೆತನ್ಯಾಹುಗೆ ಹಿನ್ನಡೆ

ಜೆರುಸಲೇಂ, ನ. 8- (ಎಪಿ): ಇಸ್ರೇಲ್‌ನಲ್ಲಿ ಮತ್ತೆ ಸರ್ಕಾರ ರಚಿಸುವ ವಿಚಾರದಲ್ಲಿ ಮಾಜಿ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರಿಗೆ ಭಾರಿ ಹಿನ್ನಡೆಯುಂಟಾಗಿದೆ.ಅ. 27 ರಂದು ನಡೆದ ಚುನಾವಣೆಗಳ ನಂತರ ಸಮ್ಮಿಶ್ರ ಸರ್ಕಾರವನ್ನು ರಚಿಸಲು ವಿರೋಧ ಪಕ್ಷದ ಅಭ್ಯರ್ಥಿ ಗಾಡಿ ಐಸೆನ್‌ಕೋಟ್‌‍ ಅವರಿಗೆ ಮೊದಲ ಅವಕಾಶ ನೀಡುವುದಾಗಿ ಇಸ್ರೇಲ್‌ ಅಧ್ಯಕ್ಷ ಐಸಾಕ್‌ ಹರ್ಜೋಗ್‌ ಘೋಷಿಸಿದ್ದಾರೆ.

ಮಾಜಿ ಸೇನಾ ಮುಖ್ಯಸ್ಥರಾದ ಐಸೆನ್‌ಕೋಟ್‌‍, ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರಿಗೆ ಪ್ರಮುಖ ಸವಾಲೊಡ್ಡುವ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಇಸ್ರೇಲ್‌ನಲ್ಲಿ ಅತಿ ದೀರ್ಘಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿರುವ ನೆತನ್ಯಾಹು ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಪ್ರಯತ್ನಿಸುತ್ತಿದ್ದ ಪಕ್ಷಗಳ ಗುಂಪಿನ ನೇತೃತ್ವವನ್ನು ಅವರು ವಹಿಸಿದ್ದರು.

ಚುನಾವಣೆಯಲ್ಲಿ ಐಸೆನ್‌ಕೋಟ್‌ ಅಥವಾ ನೆತನ್ಯಾಹು – ಇಬ್ಬರೂ ಸ್ಪಷ್ಟ ಬಹುಮತವನ್ನು ಪಡೆಯಲಿಲ್ಲ. ಆದರೆ, ಈ ವಾರ ಅಧ್ಯಕ್ಷರೊಂದಿಗೆ ನಡೆದ ಸುದೀರ್ಘ ಸಮಾಲೋಚನೆಗಳಲ್ಲಿ, ಇಸ್ರೇಲ್‌ನ ಬಹುತೇಕ ಪ್ರಮುಖ ಪಕ್ಷಗಳ ಪ್ರತಿನಿಧಿಗಳು ಹೊಸ ಸರ್ಕಾರವನ್ನು ರಚಿಸುವ ಜವಾಬ್ದಾರಿಯನ್ನು ಐಸೆನ್‌ಕೋಟ್‌‍ ಅವರಿಗೆ ನೀಡುವಂತೆ ಶಿಫಾರಸು ಮಾಡಿದ್ದರು.

ಅರಬ್‌ ಸಮೂಹಗಳ ಒಕ್ಕೂಟದೊಂದಿಗೆ ಸರ್ಕಾರ ರಚಿಸುವ ಉದ್ದೇಶ ನಮಗಿಲ್ಲ ಎಂದು ಐಸೆನ್‌ಕೋಟ್‌ ಹೇಳಿಕೆ ನೀಡಿರುವುದರಿಂದ ಅವರು ಸಮೀಶ್ರ ಸರ್ಕಾರ ರಚಿಸುವಲ್ಲಿ ಯಶಸ್ವಿಯಾಗುತ್ತಾರಾ ಎಂಬ ಅನುಮಾನ ಕಾಡತೊಡಗಿದೆ.ಒಂದು ವೇಳೆ ಅವರು ಸರ್ಕಾರ ರಚಿಸುವಲ್ಲಿ ವಿಫಲವಾದರೆ ಮತ್ತೆ ಬೆಂಜಮಿನ್‌ ನೆತನ್ಯಾಹು ಅವರಿಗೆ ಸರ್ಕಾರ ರಚಿಸುವಂತೆ ಆಹ್ವಾನ ನೀಡುವ ಸಾಧ್ಯತೆಗಳಿವೆ.

RELATED ARTICLES

Latest News