ಬೆಂಗಳೂರು,ನ.23- ವೈಟ್‌ಫೀಲ್ಡ್ ವಿಭಾಗದಲ್ಲಿ ಇಂದು ಸಹ ಪೊಲೀಸರು ರೌಡಿಗಳ ಮನೆ ಪರಿಶೀಲನೆ ನಡೆಸಿದ್ದಾರೆ.ಇಂದು ಮುಂಜಾನೆ ಆರು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿನ 10ಕ್ಕೂ ಹೆಚ್ಚು ರೌಡಿ ಮನೆಗಳಿಗೆ ದಾಳಿ ಮಾಡಿದ ಪೊಲೀಸರು ಅವರುಗಳನ್ನು ಹೊರಗೆ ಕರೆ ತಂದು ವಿಚಾರಣೆಗೆ ಒಳಪಡಿಸಿ ಮಾಹಿತಿಗಳನ್ನು ಕಲೆಹಾಕಿದ್ದಾರೆ.
ನಿನ್ನೆ ಇದೇ ವಿಭಾಗದಲ್ಲಿನ 22 ರೌಡಿ ಶೀಟರ್‌ಗಳ ಮನೆಗಳಿಗೆ ಪೊಲೀಸರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಈ ಸಂದರ್ಭದಲ್ಲಿ ರೌಡಿಗಳ ವಾಹನಗಳನ್ನೂ ಸಹ ಪರಿಶೀಲನೆ ನಡೆಸಲಾಯಿತು.
ಸಾರ್ವಜನಿಕ ಶಾಂತಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುವ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳನ್ನು ಮಾಡದಂತೆ ಪೊಲೀಸರು ರೌಡಿಗಳಿಗೆ ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಿದ್ದಾರೆ.
