Sunday, April 19, 2026
Homeಬೆಂಗಳೂರುಮೂವರು ಮನೆಗಳ್ಳರ ಬಂಧನ : 1.40 ಕೋಟಿ ರೂ.ಮೌಲ್ಯದ 711 ಗ್ರಾಂ ಚಿನ್ನಾಭರಣ ವಶ

ಮೂವರು ಮನೆಗಳ್ಳರ ಬಂಧನ : 1.40 ಕೋಟಿ ರೂ.ಮೌಲ್ಯದ 711 ಗ್ರಾಂ ಚಿನ್ನಾಭರಣ ವಶ

Three house robbers arrested: 711 grams of gold jewellery worth Rs. 1.40 crore seized

ಬೆಂಗಳೂರು,ಮಾ.3-ಮನೆಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಮಾದನಾಯಕನ ಹಳ್ಳಿ ಠಾಣೆ ಪೊಲೀಸರು ಬಂಧಿಸಿ 19 ಲಕ್ಷ ನಗದು ಸೇರಿದಂತೆ 1.40 ಕೋಟಿ ರೂ.ಮೌಲ್ಯದ 711 ಗ್ರಾಂ ಚಿನ್ನಭರಣ ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಯನ್ನು ಮಂಡ್ಯದ ಬಾನೇಮಲ್ಲಿಗೆಯ ನಿವಾಸಿ ಸಿದ್ದು ಎಂದು ಗುರುತಿಸಲಾಗಿದೆ.
ಈಗಾಗಲೇ ಈ ಪ್ರಕರಣದಲ್ಲಿ ಶ್ರೀಕಾಂತ್‌ ಎಂಬುವವನ್ನು ಬಂಧಿಸಿರುವ ಪೊಲೀಸರು, ವಿಚಾರಣೆ ವೇಳೆ ಮುನಿರಾಜುನನ್ನು ಖೆಡ್ಡಾಕ್ಕೆ ಬೀಳಿಸಿದ್ದರು.ಅಂಚೆಪಾಳ್ಯ ಗ್ರಾಮದ ಪ್ರಕೃತಿ ಲೇಔಟ್‌ ನಿವಾಸಿಯೊಬ್ಬರು ಕುಟುಂಬ ಸಮೇತ ತಮಿಳುನಾಡಿಗೆ ಹೋಗಿದ್ದರು.

ಆ ಸಂದರ್ಭದಲ್ಲಿ ಕಳ್ಳರು ಮನೆಯ ಮುಂಬಾಗಿಲನ್ನು ಆಯುಧದಿಂದ ಮೀಟಿ ತೆಗೆದು ಒಳನುಗ್ಗಿ ಕೊಠಡಿಯ ಬೀರುವಿನಲ್ಲಿದ್ದ ಚಿನ್ನಾಭರಣ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದರು. ಮೂರು ದಿನಗಳ ನಂತರ ಪಕ್ಕದ ಮನೆಯವರು ಗಮನಿಸಿ ಮಾಲೀಕರಿಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದಾರೆ.

ತಮಿಳುನಾಡಿನಿಂದ ಮನೆ ಮಾಲೀಕರು ಬಂದು ನೋಡಿದಾಗ ಬೀರುವಿನಲ್ಲಿದ್ದ 248 ಗ್ರಾಂ ಚಿನ್ನಾಭರಣ ಕಳ್ಳತನವಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ಮಾಹಿತಿಗಳನ್ನು ಕಲೆಹಾಕಿ ಒಬ್ಬಾತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಮತ್ತಿಬ್ಬರು ಸಹಚರರು ಭಾಗಿ ಯಾಗಿರುವುದಾಗಿ ತಿಳಿಸಿದ್ದಾರೆ.

ಈತನಿಂದ 348 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ ಬೈಕ್‌ನನ್ನು ವಶಪಡಿಸಿಕೊಂಡು ತನಿಖೆ ಮುಂದು ವರೆಸಿದ್ದಾರೆ.ಈ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ಇಬ್ಬರು ಸಹಚರರ ಪೈಕಿ ಒಬ್ಬಾತನನ್ನು ಚಾಮರಾಜನಗರ ಮಲೈ ಮಹದೇಶ್ವರ ಬೆಟ್ಟದಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿ ಮತ್ತೊಬ್ಬನನ್ನು ಬನಶಂಕರಿಯ ಸಾರಕ್ಕಿಯಲ್ಲಿ ಬಂಧಿಸಿದ್ದಾರೆ.

ಈ ಇಬ್ಬರನ್ನು ಸುದೀರ್ಘವಾಗಿ ವಿಚಾರಣೆಗೆ ಒಳಪಡಿಸಿದಾಗ ಕಳವು ಮಾಡಿದ ಆಭರಣಗಳನ್ನು ವಿವಿಧ ಜ್ಯೂವೆಲರಿ ಅಂಗಡಿಗಳಲ್ಲಿ ಅಡವಿಟ್ಟಿರುವುದಾಗಿ ಹಾಗೂ ಕೆಲವು ಆಭರಣಗಳನ್ನು ಪರಿಚಯಸ್ಥರಿಗೆ ನೀಡಿರುವುದಾಗಿ ತಿಳಿಸಿದ್ದಾರೆ.

ಈ ಇಬ್ಬರು ನೀಡಿದ ಮಾಹಿತಿ ಯಂತೆ ಜ್ಯೂವೆಲರಿ ಅಂಗಡಿಗಳಿಂದ ಹಾಗೂ ಪರಿಚಯಸ್ಥರಿಂದ ಒಟ್ಟು 19.50 ಲಕ್ಷ ರೂ. ನಗದು 711 ಗ್ರಾಂ ಚಿನ್ನಾಭರಣ, ಒಂದು ಕಾರು ಹಾಗೂ ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಇನ್ಸ್ ಪೆಕ್ಟರ್‌ ಮುರಳಿಧರ ಮತ್ತು ಸಿಬ್ಬಂದಿ ತಂಡ ಯಶಸ್ವಿಯಾಗಿದೆ.

ಪ್ರಕರಣದ ಪ್ರಮುಖ ಸಹಚರ ನೊಬ್ಬನ ಮೇಲೆ ಈ ಹಿಂದೆ 30 ಮನೆಗಳ್ಳತನ, ದರೋಡೆ ಯತ್ನ, ವಾಹನ ಕಳವು ಪ್ರಕರಣಗಳು ವಿವಿಧ ಪೊಲೀಸ್‌‍ ಠಾಣೆಗಳಲ್ಲಿ ದಾಖಲಾಗಿವೆ. ಈತನ ಬಂಧನದಿಂದ ಮಾದನಾಯಕನಹಳ್ಳಿ ಠಾಣೆಯ 13 ಕಳವು ಪ್ರಕರಣಗಳು ಮತ್ತು ನೆಲಮಂಗಲ ಟೌನ್‌ ಪೊಲೀಸ್‌‍ ಠಾಣೆಯ 2 ಕಳವು ಪ್ರಕರಣಗಳು ಪತ್ತೆಯಾಗಿರುತ್ತವೆ.

ಬಂಧಿತ ಆರೋಪಿ ಸಿದ್ದು ವಿರುದ್ಧ 31 ಪ್ರಕರಣಗಳು ದಾಖಲಾಗಿದ್ದು, ಈತ ವೃತ್ತಿಪರ ಮನೆಗಳ್ಳನಾಗಿದ್ದು, ಈತನ ವಿರುದ್ಧ ಈಗ ಕಠಿಣ ಕಾನೂನು ಕ್ರಮಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ನಗರ ಪೊಲೀಸ್‌‍ ಆಯುಕ್ತ ಸೀಮಂತ್‌ಕುಮಾರ್‌ ಸಿಂಗ್‌ ತಿಳಿಸಿದ್ದಾರೆ.
ಬಂಧಿತ ಮೂವರು ಸ್ನೇಹಿತರಾಗಿದ್ದು ಇವರು ಮನೆಗಳ್ಳತನ ಮಾಡಿ ಮೋಜಿನ ಜೀವನ ನಡೆಸುತ್ತಿದ್ದರು.

ಸಿದ್ದು ಹಲವು ಬಾರಿ ಪೊಲೀಸರಿಗೆ ಸಿಕ್ಕಿಬಿದ್ದರೂ ಜಾಮೀನಿನ ಮೇಲೆ ಹೊರಗೆ ಬಂದು ತನ್ನ ಹಳೆ ಚಾಳಿಯನ್ನು ಮುಂದುವರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಹೊರರಾಜ್ಯದ ಡ್ರಗ್‌ ಪೆಡ್ಲರ್‌ ಬಂಧನ : 55 ಲಕ್ಷ ವೌಲ್ಯದ ಮಾದಕ ವಸ್ತು ಜಪ್ತಿ

ಬೆಂಗಳೂರು,ಮಾ.3- ಮಾದಕ ವಸ್ತುಗಳನ್ನು ಐಟಿ-ಬಿಟಿ ಉದ್ಯೋಗಿಗಳಿಗೆ ಮಾರಾಟ ಮಾಡುತ್ತಿದ್ದ ಹೊರ ರಾಜ್ಯದ ಡ್ರಗ್‌ ಪೆಡ್ಲರ್‌ನನ್ನು ವೈಟ್‌ಫೀಲ್‌್ಡ ಠಾಣೆ ಪೊಲೀಸರು ಬಂಧಿಸಿ 55 ಲಕ್ಷ ಮೌಲ್ಯದ 27 ಕೆಜಿ 239 ಗ್ರಾಂ ಗಾಂಜಾ, 3 ಕೆಜಿ 200 ಗ್ರಾಂ ಹ್ಯಾಸಿಸ್‌‍ ಆಯಿಲ್‌ ವಶಪಡಿಸಿಕೊಂಡಿದ್ದಾರೆ.

ನಾಗೊಂಡನಹಳ್ಳಿಯ ದೇವಸ್ಥಾನವೊಂದರ ಸಮೀಪ ಗಸ್ತಿನಲ್ಲಿದ್ದ ಪೊಲೀಸರು ವಾಹನ ತಪಾಸಣೆ ಕರ್ತವ್ಯದಲ್ಲಿದ್ದಾಗ ದ್ವಿಚಕ್ರ ವಾಹನದಲ್ಲಿ ಬಂದ ಹೊರ ರಾಜ್ಯದ ವ್ಯಕ್ತಿಯನ್ನು ತಡೆದು ಪರಿಶೀಲಿಸಿದಾಗ ಆತನ ಬಳಿ ಗಾಂಜಾ ಹಾಗೂ ಹ್ಯಾಸಿಸ್‌‍ ಆಯಿಲ್‌ ಇರುವುದು ಕಂಡು ಬಂದಿದೆ. ಓಫಾರಂ ತಕ್ಷಣ ಆತನನ್ನು ಮಾಲಿನ ಸಮೇತ ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದು ಎನ್‌ಡಿಪಿಎಸ್‌‍ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕೊಂಡು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

ಹೆಚ್ಚಿನ ಹಣಗಳಿಸುವ ಉದ್ದೇಶ ದಿಂದ ಪರಿಚಿತ ವ್ಯಕ್ತಿಯಿಂದ ಕಡಿಮೆ ಬೆಲೆಗೆ ಗಾಂಜಾ ಮತ್ತು ಹ್ಯಾಸಿಸ್‌‍ ಆಯಿಲ್‌ ಖರೀದಿಸಿ ಕೊಂಡು ಬಂದು ಐಟಿ-ಬಿಟಿ ಉದ್ಯೋಗಿಗಳಿಗೆ ಹಾಗೂ ಸಾರ್ವಜನಿಕರಿಗೆ ಮಾರಾಟ ಮಾಡಲು ಸಾಗಿಸು ತ್ತಿದ್ದುದ್ದಾಗಿ ಆರೋಪಿ ಬಾಯ್ಬಿಟ್ಟಿ ದ್ದಾನೆ.
ಈ ಕಾರ್ಯಾಚರಣೆಯನ್ನು ಇನ್‌್ಸಪೆಕ್ಟರ್‌ ಗುರುಪ್ರಸಾದ್‌ ಹಾಗೂ ಸಿಬ್ಬಂದಿ ತಂಡ ಬೇಧಿಸಿದೆ.

ಕಾಶಿ ಯಾತ್ರೆಗೆಂದು ತೆರಳಿದ್ದವರ ಮನೆಗೆ ಕನ್ನ : 44 ಲಕ್ಷ ಮೌಲ್ಯದ ಚಿನ್ನಾಭರಣ ವಶ : ಮೂವರು ಆರೋಪಿಗಳ ಬಂಧನ

ಕುಟುಂಬ ಸಮೇತ ಕಾಶಿ ಯಾತ್ರೆಗೆ ತೆರಳಿದ್ದವರ ಮನೆಗೆ ಕನ್ನ ಹಾಕಿ ಕಳ್ಳತನ ಮಾಡಿದ ಮೂವರು ಆರೋಪಿಗಳನ್ನು ಹೆಬ್ಬಗೋಡಿ ಠಾಣೆ ಪೊಲೀಸರು ಬಂಧಿಸಿ 44 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ ಬೆಳ್ಳಿವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಹೆಬ್ಬಗೋಡಿ ಪೊಲೀಸ್‌‍ ಠಾಣಾ ವ್ಯಾಪ್ತಿಯ ಘಟ್ಟಹಳ್ಳಿ ಗ್ರಾಮದ ನಿವಾಸಿಯೊಬ್ಬರು ತನ್ನ ಸ್ನೇಹಿತನಿಗೆ ಮನೆ ಹಾಗೂ ಮನೆಯ ಆವರಣದಲ್ಲಿರುವ ಗಿಡಗಳನ್ನು ನೋಡಿಕೊಳ್ಳುವಂತೆ ಹೇಳಿ ಕುಟುಂಬ ಸಮೇತ ಕಳೆದ ಡಿ.13 ರಂದು ಕಾಶಿಯಾತ್ರೆಗೆ ತೆರಳಿದ್ದರು.

ಈ ನಡುವೆ ತಮ ಕೈಚಳಕ ತೋರಿಸಿದ್ದ ಕಳ್ಳರು ಮನೆ ಕಿಟಕಿ ಮುರಿದು ಒಳನುಗ್ಗಿ ಬೀರುವಿನಲ್ಲಿದ್ದ 220 ಗ್ರಾಂ ಚಿನ್ನಾಭರಣ, 3 ಕೆಜಿ 391 ಗ್ರಾಂ ಬೆಳ್ಳಿ ವಸ್ತುಗಳನ್ನು ಕದ್ದು ಪರಾರಿಯಾಗಿದ್ದರು. ಡಿ.22 ರಂದು ಸ್ನೇಹಿತ ಗಿಡಗಳಿಗೆ ನೀರು ಹಾಕಲು ಮನೆ ಬಳಿ ಬಂದಾಗ ಕಿಟಕಿ ಬಾಗಿಲು ತೆರೆದಿದ್ದು, ಕೂಡಲೇ ಕಾಶಿ ಯಾತ್ರೆಗೆ ತೆರಳಿದ್ದ ಸ್ನೇಹಿತನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಕೂಡಲೇ ಗಾಬರಿಗೊಂಡ ಸ್ನೇಹಿತ ಮನೆಯ ಒಳಗಡೆ ಹೋಗಿ ಪರಿಶೀಲಿಸುವಂತೆ ತಿಳಿಸಿದ್ದಾರೆ. ಕಬೋರ್ಡ್‌ನಲ್ಲಿಟ್ಟಿದ್ದ ಚಿನ್ನಾಭರಣ, ಬೆಳ್ಳಿ ವಸ್ತುಗಳು ಕಳ್ಳತನವಾಗಿರುವುದು ಈ ವೇಳೆ ಬೆಳಕಿಗೆ ಬಂದಿದೆ.

ಈ ಸಂಬಂಧ ಸ್ನೇಹಿತ ಹೆಬ್ಬಗೋಡಿ ಠಾಣೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ಕೈಗೊಂಡು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಬಾತಿದಾರ ನೀಡಿದ ಖಚಿತ ಮಾಹಿತಿ ಮೇರೆಗೆ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಹೆಬ್ಬಗೋಡಿ ಠಾಣಾ ವ್ಯಾಪ್ತಿಯಲ್ಲಿ ಹಲವು ಮನೆಗಳಲ್ಲಿ ಕಳವು ಮಾಡಿದ್ದು, ಚಿನ್ನಾಭರಣಗಳನ್ನು ಗಿರವಿ ಅಂಗಡಿಗಳಲ್ಲಿ ಮಾರಾಟ ಮಾಡಿದ್ದು, ಇನ್ನೂ ಹಲವು ಆಭರಣಗಳನ್ನು ಸ್ನೇಹಿತರಿಗೆ ಕೊಟ್ಟಿರುವುದಾಗಿ ತಿಳಿಸಿದ್ದಾರೆ.

ಜ.24 ರಿಂದ ಮಾ.3ರ ಅವಧಿಯಲ್ಲಿ ವಿವಿಧ ಜ್ಯುವೆಲ್ಲರಿ ಅಂಗಡಿ ಮತ್ತು ಸ್ನೇಹಿತರಿಗೆ ನೀಡಿದ್ದ 220 ಗ್ರಾಂ ಚಿನ್ನಾಭರಣ, 3 ಕೆಜಿ 391 ಗ್ರಾಂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ಎಲೆಕ್ಟ್ರಾನಿಕ್‌ ಸಿಟಿ ವಿಭಾಗದ ಉಪ ಪೊಲೀಸ್‌‍ ಆಯುಕ್ತ ನಾರಾಯಣ್‌ ಅವರ ಮಾರ್ಗದರ್ಶನದಲ್ಲಿ ಸಹಾಯಕ ಪೊಲೀಸ್‌‍ ಆಯುಕ್ತರಾದ ಸತೀಶ್‌ ಅವರ ನೇತೃತ್ವದಲ್ಲಿ ಹೆಬ್ಬಗೋಡಿ ಠಾಣೆ ಇನ್‌ಸ್ಪೆಕ್ಟರ್‌ ಸೋಮಶೇಖರ್‌ ಹಾಗೂ ಸಿಬ್ಬಂದಿಗಳ ತಂಡ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

RELATED ARTICLES

Latest News