ಬೆಂಗಳೂರು,ಮಾ.10- ರಾತ್ರಿ ವೇಳೆ ಮನೆಗಳ್ಳತನ ಮಾಡುತ್ತಿದ್ದ ರಾಜಸ್ಥಾನ ಮೂಲದ ಆರೋಪಿಯೊಬ್ಬನನ್ನು ಯಲಹಂಕ ಠಾಣೆ ಪೊಲೀಸರು ಬಂಧಿಸಿ 3 ಕೋಟಿ ಬೆಲೆ ಬಾಳುವ ವಜ್ರ ಹಾಗೂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ವೆಲಾರಾಮ ಮೀನಾ ಅಲಿಯಾಸ್ ಸುನೀಲ್ (19) ಬಂಧಿತ ಆರೋಪಿ. ಈತ ಟೈಲ್‌್ಸ ಕೆಲಸ ಮಾಡಿಕೊಂಡಿದ್ದನು. ಯಲಹಂಕ ಜೂಡಿಷಿಯಲ್ ಲೇಔಟ್‌ನಲ್ಲಿ ಲಲಾನ-ಪ್ರಕಾಶ ಮುನಿಯಪ್ಪ ದಂಪತಿಗೆ ಸೇರಿದ ಮನೆಯಿದ್ದು ಅವರು ಪ್ರಸ್ತುತ ಯುಎಎಸ್‌ನಲ್ಲಿದ್ದಾರೆ.
ಫೆ.15 ರಂದು ಕಳ್ಳರು ಅವರ ಮನೆಯ ಟೆರೆಸ್‌ನ ಬಾಗಿಲು ಮೀಟಿ ಮನೆಯೊಳಗೆ ನುಗ್ಗಿ ವಜ್ರ ಹಾಗೂ ಚಿನ್ನಾಭರಣಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ.ಮಾರನೇ ದಿನ ಅಕ್ಕಪಕ್ಕದವರು ಇವರ ಮನೆಯಲ್ಲಿ ಕಳ್ಳತನವಾಗಿರುವುದನ್ನು ನೋಡಿದ್ದಾರೆ. ಈ ಬಗ್ಗೆ ವಿಷಯ ತಿಳಿದು ಅವರ ಸಂಬಂಧಿ ಆರ್‌ಟಿ ನಗರದ 6ನೇ ಕ್ರಾಸ್ ನಿವಾಸಿ ಸೇತು ಮಾದವ ಎಂಬುವವರು ಸ್ಥಳಕ್ಕೆ ಹೋಗಿ ನೋಡಿದ್ದಾರೆ.
ನಂತರ ಚಿಕ್ಕಮ ಲಲಾನ ಹಾಗೂ ಚಿಕ್ಕಪ್ಪ ಪ್ರಕಾಶ ಮುನಿಯಪ್ಪ ಅವರಿಗೆ ತಮ ಮನೆಯಲ್ಲಿ ಕಳ್ಳತನವಾಗಿರುವ ಬಗ್ಗೆ ವಿಷಯ ತಿಳಿಸಿ ನಂತರ ಪೊಲೀಸರಿಗೆ ದೂರು ನೀಡಿದ್ದಾರೆ.ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ಮಾಹಿತಿಗಳನ್ನು ಕಲೆ ಹಾಕಿ ರಾಜಸ್ಥಾನದ ಸಾಲಂಬರ್ ಜಿಲ್ಲೆಯ ಗಿಂಗಲಾ ವ್ಯಾಪ್ತಿಯ ಮಣಗಿರಿ ಪಾಲ ಗ್ರಾಮಕ್ಕೆ ತೆರಳಿ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.
ಮನೆಗಳ್ಳತನದ ಬಗ್ಗೆ ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆಗೆ ಒಳಪಡಿಸಿದಾಗ ಕಳವು ಮಾಡಿದ್ದ ವಜ್ರ ಹಾಗೂ ಚಿನ್ನಾಭರಣಗಳನ್ನು ತನ್ನ ಮನೆಯಲ್ಲಿ ಬಚ್ಚಿಟ್ಟಿರುವುದಾಗಿ ತಿಳಿಸಿದ್ದಾನೆ.ಆತನ ಮಾಹಿತಿಯಂತೆ ಪೊಲೀಸರು ಸುಮಾರು 3 ಕೋಟಿ ರೂ. ಬೆಲೆ ಬಾಳುವ ವಜ್ರ ಹಾಗೂ ವಿವಿಧ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕಾರ್ಯಾಚರಣೆಯನ್ನು ಇನ್‌್ಸಪೆಕ್ಟರ್ ಕೃಷ್ಣಮೂರ್ತಿ ಹಾಗೂ ಸಿಬ್ಬಂದಿ ತಂಡ ಕೈಗೊಂಡು ಆರೋಪಿಯನ್ನು ಬಂಧಿಸಿ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
