Monday, April 13, 2026
Homeಅಂತಾರಾಷ್ಟ್ರೀಯಸದ್ಯದಲ್ಲೇ ಇರಾನ್‌ ವಿರುದ್ಧ ಯುದ್ಧ ಅಂತ್ಯ : ಸುಳಿವು ನೀಡಿದ ಟ್ರಂಪ್‌

ಸದ್ಯದಲ್ಲೇ ಇರಾನ್‌ ವಿರುದ್ಧ ಯುದ್ಧ ಅಂತ್ಯ : ಸುಳಿವು ನೀಡಿದ ಟ್ರಂಪ್‌

Trump says war on Iran will end 'very soon,' calls conflict 'very complete'

ದುಬೈ, ಮಾ.10- ಇಸ್ಲಾಮಿಕ್‌ ಆಡಳಿತದ ಉಳಿಕೆಗಾಗಿ ಕಟ್ಟಾವಾದಿ ಮುಸ್ಲಿಂ ನಾಯಕನ ಆಯ್ಕೆಯ ಹೊರತಾಗಿಯೂ ಇರಾನ್‌ ವಿರುದ್ಧದ ಯುದ್ಧ ಸದ್ಯದಲ್ಲೇ ಸ್ಥಗಿತಗೊಳ್ಳಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್‌್ಡ ಟ್ರಂಪ್‌ ಹೇಳಿದ್ದಾರೆ.

ಆದರೆ ಇರಾನ್‌ ಏನಾದರೂ ಜಾಗತಿಕ ತೈಲ ಪೂರೈಕೆಯನ್ನು ನಿಲ್ಲಿಸಿದ್ದೇ ಆದರೆ ಘೋರ ಪರಿಣಾಮ ಮುಂದಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.ನಾವು ಈ ಬೆದರಿಕೆಗೆ ಒಮೆಲೇ ಅಂತ್ಯ ಹಾಡುತ್ತಿದ್ದೇವೆ. ಇದರ ಫಲಿತಾಂಶವಾಗಿ ಅಮೆರಿಕ ಕುಟುಂಬಗಳಿಗೆ ತೈಲ ಮತ್ತು ಅನಿಲ ದರದ ಹೊರೆ ತಗ್ಗಲಿದೆ ಎಂದು ಟ್ರಂಪ್‌ ತಿಳಿಸಿದ್ದಾರೆ.

ಕಟ್ಟಾವಾದಿ ಇಸ್ಲಾಂ ಧುರೀಣ ಆಯತೊಲ್ಲಾ ಮೊಜ್ತಾಬಾ ಖಮೇನಿ ಅವರನ್ನು ಇರಾನ್‌ನ ಪರಮೋಚ್ಚ ನಾಯಕರನ್ನಾಗಿ ಆಯ್ಕೆ ಮಾಡಿದ ಬಳಿಕ ತೈಲ ಬೆಲೆಗಳು ಹೆಚ್ಚಳಗೊಂಡವು. ಅಮೆರಿಕ ಮತ್ತು ಇಸ್ರೇಲ್‌ ದೇಶಗಳು ಇರಾನ್‌ ಮೇಲೆ ಜಂಟಿ ದಾಳಿ ನಡೆಸಿದ ಈ 10 ದಿನಗಳಲ್ಲಿ ಇರಾನ್‌ ತನ್ನ ತೈಲ ಪೂರೈಕೆಯನ್ನು ಸ್ಥಗಿತಗೊಳಿಸುತ್ತಿದೆ ಎಂದು ಹೂಡಿಕೆದಾರರು ಭಾವಿಸುತ್ತಾರೆ.

ನಾವು ದುಷ್ಟಶಕ್ತಿಯೊಂದನ್ನು ತೊಲಗಿಸಲು ಮಧ್ಯಪ್ರಾಚ್ಯಕ್ಕೆ ಒಂದು ಸಂಕ್ಷಿಪ್ತ ಪ್ರವಾಸವನ್ನು ಕೈಗೊಂಡೆವು. ಅದು ಅಲ್ಪಾವಧಿ ಪ್ರವಾಸ ಎಂಬುದನ್ನು ನೀವೆಲ್ಲಾ ಶೀಘ್ರದಲ್ಲೇ ತಿಳಿಯುವಿರಿ ಎಂದು ನಾನು ಭಾವಿಸುತ್ತೇನೆ ಎಂದು ಟ್ರಂಪ್‌ ಹೇಳಿದ್ದಾರೆ.

ಇದಲ್ಲದೆ ಟ್ರಂಪ್‌ ಅವರು ಸೋಮವಾರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರನ್ನು ಭೇಟಿಯಾಗಿ ಯುದ್ಧ ಮತ್ತಿತರ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದರು. ಪುಟಿನ್‌ ಅವರು ಕ್ಷಿಪ್ರ ರಾಜಕೀಯ ಮತ್ತು ರಾಜತಾಂತ್ರಿಕ ಸಂಧಾನ ಏರ್ಪಡಿಸುವ ಕುರಿತು ಕೆಲವು ಸಲಹೆಗಳನ್ನು ನೀಡಿದರು ಎಂದು ರಷ್ಯಾದ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಯೂರಿ ಉಷಾ ಕೊವ್‌ ಅವರು ತಿಳಿಸಿದ್ದಾರೆ.

ನೇಪಥ್ಯದಲ್ಲಿದ್ದ 56 ವರ್ಷ ವಯಸ್ಸಿನ ಧರ್ಮಗುರು ಖಮೇನಿ ಅವರು ಇರಾನ್‌ ಇಸ್ಲಾಮಿ ಗಣರಾಜ್ಯದ ಕೇವಲ ಮೂರನೇ ಸರ್ವೋಚ್ಛ ನಾಯಕನಾಗಿದ್ದಾರೆ. ಅವರು ಇಸ್ರೇಲ್‌ ಮತ್ತು ಕೊಲ್ಲಿ ರಾಷ್ಟ್ರಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್‌ಗಳ ದಾಳಿ ನಡೆಸುತ್ತಿರುವ ಪಾರ್ಲಿಮೆಂಟರಿ ರೆವಲ್ಯೂಷನರಿ ಗಾರ್ಡ್‌ ಪಡೆಯ ಜೊತೆಗೆ ನಿಕಟ ಸಂಬಂಧ ಹೊಂದಿದ್ದಾರೆ.

RELATED ARTICLES

Latest News