Saturday, May 2, 2026
Homeರಾಜ್ಯಬಸ್ ಮೇಲೆ ರಾರಾಜಿಸಿದ ಉಗ್ರ ಹಾಗೂ ಅಂಡರ್‌ವರ್ಲ್ಡ್ ಡಾನ್‌ ದಾವುದ್‌ ಹೆಸರು : ಸ್ಥಳೀಯರ ಆಕ್ರೋಶ

ಬಸ್ ಮೇಲೆ ರಾರಾಜಿಸಿದ ಉಗ್ರ ಹಾಗೂ ಅಂಡರ್‌ವರ್ಲ್ಡ್ ಡಾನ್‌ ದಾವುದ್‌ ಹೆಸರು : ಸ್ಥಳೀಯರ ಆಕ್ರೋಶ

Chikkamagaluru Bus Row: Vehicle with Dawood Ibrahim Stickers Detained After Protest

ಚಿಕ್ಕಮಗಳೂರು,ಮಾ.27- ಕಾಫಿನಾಡು ಚಿಕ್ಕಮಗಳೂರಿನಲ್ಲಿ ಅಂಡರ್‌ವರ್ಲ್ಡ್ ಡಾನ್‌ ದಾವುದ್‌ ಇಬ್ರಾಹಿಂ ಹೀರೋ ರೀತಿ ಬಿಂಬಿಸಿದ್ದ ತಮಿಳುನಾಡಿನ ಖಾಸಗಿ ಬಸ್‌‍ವೊಂದನ್ನು ಸ್ಥಳೀಯ ಹಿಂದೂ ಸಂಘಟನೆಗಳ ಕಾರ್ಯಕರ್ತರು ತಡೆದು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ನಡೆದಿದೆ.

ಅಂಡರ್‌ವರ್ಲ್‌್ಡ ಡಾನ್‌ ದಾವುದ್‌ ಇಬ್ರಾಹಿಂ ಫೋಟೋ ಮತ್ತು ಆತನನ್ನು ವೈಭವೀಕರಿಸುವ ಬರಹಗಳನ್ನು ಹೊಂದಿದ್ದ ತಮಿಳುನಾಡು ಮೂಲದ ಖಾಸಗಿ ಬಸ್‌‍ ಮೇಲೆ ವೈಭವೀಕರಿಸಲಾಗಿತ್ತು. ನಗರದ ಎನ್‌.ಎಂ.ಸಿ. ಸರ್ಕಲ್‌ ಬಳಿ ಈ ಬಸ್ಸನ್ನು ಪತ್ತೆಹಚ್ಚಿದ ಸಂಘಟನೆಗಳು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಬಸ್ಸನ್ನು ವಶಕ್ಕೆ ಪಡೆಯುವಂತೆ ಒತ್ತಾಯಿಸಿದವು.

ಬಸ್ಸಿನ ಮೇಲೆ ಲೈವ್‌ ಬೈ ಎ ಗನ್‌, ಡೈ ಬೈ ಎ ಗನ್‌, ಕ್ರೈಮ್‌ ಲಾರ್ಡ್‌ ಕ್ರಾನಿಕಲ್ಸ್ ಮತ್ತು ದಾವುದ್‌ ದಿ ರಿಯಲ್‌ ಡಾನ್‌ ಎಂಬ ವಿವಾದಾತಕ ಸ್ಟಿಕರ್ಗಳನ್ನು ಅಂಟಿಸಲಾಗಿತ್ತು. ಅಷ್ಟೇ ಅಲ್ಲದೆ, ಬಸ್ಸಿನ ಹಿಂಭಾಗದಲ್ಲಿ ಱಱಡಿ ಗ್ಯಾಂಗ್‌ ಆಫ್‌ ಮುಂಬೈೞೞ ಹಾಗೂ ಱಱಬಾಂಬೆ ಅಂಡರ್‌ ವರ್ಲ್ಡ್ ದಾವುದ್‌ ರಿಯಲ್‌ ಡಾನ್‌”ೞೞ” ಎಂಬ ಬರಹಗಳನ್ನು ಬರೆಯುವ ಮೂಲಕ ಭಯೋತ್ಪಾದಕ ಹಾಗೂ ಅಪರಾಧ ಜಗತ್ತಿನ ನಾಯಕನನ್ನು ಹೀರೋನಂತೆ ಬಿಂಬಿಸಲಾಗಿತ್ತು.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಬಸ್ಸನ್ನು ವಶಕ್ಕೆ ಪಡೆದು ಬಸವನಹಳ್ಳಿ ಪೊಲೀಸ್‌‍ ಠಾಣೆಯ ಆವರಣಕ್ಕೆ ಕೊಂಡೊಯ್ದಿದ್ದಾರೆ. ತನಿಖೆ ಕೈಗೊಂಡು ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಪೋಲಿಸ್‌‍ ಮೂಲಗಳು ತಿಳಿಸಿವೆ.

ದೇಶದ್ರೋಹಿ ಮತ್ತು ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ವ್ಯಕ್ತಿಯನ್ನು ಪ್ರಚೋದನಾಕಾರಿ ರೀತಿಯಲ್ಲಿ ಪ್ರದರ್ಶಿಸಿದ ಬಸ್ಸಿನ ಮಾಲೀಕರು ಮತ್ತು ಚಾಲಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಹಾಗೂ ಸಂಘಟನೆಗಳು ಆಗ್ರಹಿಸಿವೆ.

RELATED ARTICLES

Latest News