ನಿತ್ಯ ನೀತಿ : ಪಾದರಕ್ಷೆ ಮನೆಯ ಹೊರಗಿದ್ದರೆ ಮನೆ ಶುಚಿಯಾಗಿರುತ್ತದೆ, ಹಾಗೆಯೇ ಅಹಂಕಾರ ಮನುಷ್ಯನ ಹೊರಗಿದ್ದರೆ ಅವನ ಮನಸ್ಸು ಮತ್ತು ಸಂಸ್ಕಾರ ಎರಡೂ ಶುದ್ಧವಾಗಿರುತ್ತದೆ.
ಪಂಚಾಂಗ : ಮಂಗಳವಾರ, 05-05-2026
ಪರಾಭವನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ಗ್ರೀಷ್ಮ / ಮಾಸ: ವೈಶಾಖ / ಪಕ್ಷ: ಕೃಷ್ಣ / ತಿಥಿ: ಚತುರ್ಥಿ / ನಕ್ಷತ್ರ: ಜ್ಯೇಷ್ಠಾ / ಯೋಗ: ಶಿವ / ಕರಣ: ಬವ
ಸೂರ್ಯೋದಯ – 05.59
ಸೂರ್ಯಾಸ್ತ – 6.36
ರಾಹುಕಾಲ – 3.30-4.30
ಯಮಗಂಡ ಕಾಲ – 9.00- 10.30
ಗುಳಿಕ ಕಾಲ – 12.00- 1.30
ರಾಶಿಭವಿಷ್ಯ :
ಮೇಷ: ಮಹಿಳೆಯರಿಗೆ ಉದ್ಯೋಗಪ್ರಾಪ್ತಿಯಾಗ ಲಿದೆ. ಕಷ್ಟಕ್ಕೆ ತಕ್ಕ ಪ್ರತಿಫಲ ಸಿಗಲಿದೆ.
ವೃಷಭ: ಮೇಲ ಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ-ಕಾರ್ಯ ಮಾಡಿ.
ಮಿಥುನ: ಹಲವು ದಿನಗಳಿಂದ ನನೆಗುದಿಗೆ ಬಿದ್ದಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ.
ಕಟಕ: ಸಾಲಗಾರರ ಕಿರಿಕಿರಿ ಉಂಟಾಗಲಿದೆ. ಮಕ್ಕಳ ವಿಷಯದಲ್ಲಿ ಚಿಂತೆ ಕಾಡಲಿದೆ.
ಸಿಂಹ: ಆರ್ಥಿಕ ಮುಗ್ಗಟ್ಟು ಉಂಟಾಗಬಹುದು. ಅನಾರೋಗ್ಯ ಸಮಸ್ಯೆ ಹೆಚ್ಚಾಗಿ ಕಾಡಲಿದೆ.
ಕನ್ಯಾ: ಸಣ್ಣಪುಟ್ಟ ವ್ಯಾಪಾರಿಗಳು ನಷ್ಟ ಅನುಭವಿಸಬಹುದು.
ತುಲಾ: ಬಂಧುಗಳೊಂದಿಗೆ ವಿರೋಧ ಉಂಟಾಗಲಿದೆ. ಅನವಶ್ಯಕ ಖರ್ಚು.
ವೃಶ್ಚಿಕ: ವಿಳಂಬವಾದ ಕೆಲಸಗಳು ತ್ವರಿತಗತಿಯಲ್ಲಿ ಪೂರ್ಣಗೊಳ್ಳಲಿವೆ. ಸಿಹಿಸುದ್ದಿ ಕೇಳುವಿರಿ.
ಧನುಸ್ಸು: ಹಣಕಾಸಿನ ಪರಿಸ್ಥಿತಿ ಬಿಗಡಾಯಿಸ ಬಹುದು. ಉದ್ಯೋಗದಲ್ಲಿ ತೊಂದರೆಯಾಗಲಿದೆ.
ಮಕರ: ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಲಾಭ ದೊರೆಯಲಿದೆ. ಕೃಷಿಕರಿಗೆ ಶುಭಕರವಾದ ದಿನ.
ಕುಂಭ: ಸರ್ಕಾರಿ ಕೆಲಸಗಳಲ್ಲಿ ಸಫಲತೆ ಕಾಣುವಿರಿ. ಕಲಾವಿದರಿಗೆ ನಿರಾಸೆಯಾಗಲಿದೆ.
ಮೀನ: ವಿದ್ಯಾರ್ಥಿಗಳ ಪ್ರಯತ್ನಕ್ಕೆ ಸೂಕ್ತ ಪ್ರತಿಫಲ ದೊರೆಯಲಿದೆ. ಅನಗತ್ಯ ಖರ್ಚು ಮಾಡುವಿರಿ.
