Saturday, April 18, 2026
Homeರಾಜ್ಯಅಕ್ರಮ ವಿದೇಶಿವಲಸಿಗರ ತಾಣವಾಗುತ್ತಿರುವ ಬೆಂಗಳೂರು : ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಗ್ಯಾರಂಟಿ

ಅಕ್ರಮ ವಿದೇಶಿವಲಸಿಗರ ತಾಣವಾಗುತ್ತಿರುವ ಬೆಂಗಳೂರು : ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಗ್ಯಾರಂಟಿ

Bangalore is becoming a destination for illegal immigrants

ನಿವೃತ್ತರ ಸ್ವರ್ಗ ಎಂದು ಹೇಳಲಾಗುತ್ತಿರುವ ಕರ್ನಾಟಕದ ರಾಜಧಾನಿ ಬೆಂಗಳೂರು ಇದೀಗ ವಿದೇಶಿ ಅಕ್ರಮ ವಲಸಿಗರ ತಾಣವಾಗುತ್ತಿದೆ.ಐಟಿ ಹಬ್‌ ಬೆಂಗಳೂರು ನಗರ ಶರವೇಗದಲ್ಲಿ ಬೆಳೆಯುತ್ತಿದ್ದು ಬೃಹತ್‌ ನಗರವಾಗುತ್ತಿದೆ. ಐದು ಮಹಾನಗರ ಪಾಲಿಕೆಗಳಿರುವ ಈ ನಗರದಲ್ಲಿನ ಒಂದು ಮೂಲೆಯ ಬಡಾವಣೆಯ ಜನರು ಮತ್ತೊಂದು ಮೂಲೆಯಲ್ಲಿನ ಬಡಾವಣೆಯ ಜನರ ಪರಿಚಯ ಇರಲಿ ಅವರು ಯಾರು? ಎಲ್ಲಿಂದ ಬಂದಿದ್ದಾರೆ ಎಂಬುವುದೇ ಗೊತ್ತಾಗುವುದಿಲ್ಲ ಈ ಗ್ರೇಟರ್‌ ಬೆಂಗಳೂರು ನಗರದಲ್ಲಿ.

ಪ್ರಪಂಚದ ಬಹುತೇಕ ದೇಶಗಳ ಜನರು ಈ ನಮ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಉದ್ಯೋಗ, ವ್ಯಾಪಾರ, ವಿದ್ಯಾಭ್ಯಾಸ ಮುಂತಾದ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ವ್ಯವಹಾರ ನಿಮಿತ್ತ ಕೆಲವು ವಿದೇಶಿಗರು ಪದೇ ಪದೇ ಬಂದು ಹೋಗುತ್ತಾರೆ.
ಕೆಲವು ದೇಶಗಳ ಪ್ರಜೆಗಳು ಇಲ್ಲಿಗೆ ಬಂದು ನೆಲೆಸಿದರೆ ವಾಪಸ್‌‍ ಅವರುಗಳ ದೇಶಕ್ಕೆ ಹೋಗದೇ ಇಲ್ಲೇ ಠಿಕಾಣಿ ಹೂಡಿಬಿಡುತ್ತಾರೆ.

ವ್ಯಾಪಾರ, ಉದ್ಯೋಗ, ವಿದ್ಯಾಭ್ಯಾಸ, ಪ್ರವಾಸ ಮುಂತಾದ ವೀಸಾಗಳ ಮೂಲಕ ವಿದೇಶಿ ಪ್ರಜೆಗಳು ಬೆಂಗಳೂರು ನಗರಕ್ಕೆ ಬರುತ್ತಾರೆ. ಅವರುಗಳು ಯಾವ ಕೆಲಸದ ನಿಮಿತ್ತ ಇಲ್ಲಿಗೆ ಬಂದಿದ್ದಾರೋ ಅದು ಮುಗಿದ ನಂತರ ಅವರವರ ಮಾತೃದೇಶಕ್ಕೆ ವಾಪಸ್‌‍ ಹೋಗಲೇಬೇಕು.

ಆದರೆ ಕೆಲವು ವಿದೇಶಿ ಪ್ರಜೆಗಳು ವೀಸಾ ಅವಧಿ ಮುಗಿದಿದ್ದರೂ ಸಹ ಇಲ್ಲೇ ಅಕ್ರಮವಾಗಿ ನೆಲೆಸಿರುತ್ತಾರೆ. ಅದರಲ್ಲೂ ಆಫ್ರಿಕಾ ಖಂಡದ ಪ್ರಜೆಗಳೇ ಹೆಚ್ಚು. ವಿದ್ಯಾಭ್ಯಾಸದ ವೀಸಾದಡಿ ಬರುವ ಕೆಲವು ದೇಶದ ವಿದ್ಯಾರ್ಥಿಗಳು ಸರಿಯಾಗಿ ಓದದೆ ಫೇಲಾಗಿ ಇಲ್ಲೇ ಉಳಿದುಕೊಂಡು ಅಡ್ಡದಾರಿ ಹಿಡಿಯುತ್ತಾರೆ. ಇನ್ನು ಬ್ಯುಸಿನೆಸ್‌‍ ವೀಸಾದಲ್ಲಿ ಬರುವ ಆಫ್ರಿಕಾ ಖಂಡದ ಕೆಲವು ಪ್ರಜೆಗಳು ವಾಪಸ್‌‍ ಹೋಗದೆ ಬಟ್ಟೆ ವ್ಯಾಪಾರ ನೆಪದಲ್ಲಿ ಡ್ರಗ್‌್ಸ ಮಾರುವುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.

ಬೆಂಗಳೂರು ನಗರ ಪೊಲೀಸರು ಮಾದಕವಸ್ತು ಸಾಗಾಟ ಮತ್ತು ಮಾರಾಟವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕೆಂದು ಪಣತೊಟ್ಟು ಹಗಲು, ರಾತ್ರಿ ಶ್ರಮಿಸುತ್ತಿದ್ದಾರೆ. ಪ್ರತಿಸಲ ನಗರ ಪೊಲೀಸರು ಡ್ರಗ್ಸ್ ದಂಧೆ ಪತ್ತೆ ಹಚ್ಚಿದಾಗಲೂ ಕನಿಷ್ಠ ಒಬ್ಬ ವಿದೇಶಿ ಪ್ರಜೆ ಸಿಕ್ಕಿಯೇ ಸಿಕ್ಕುತ್ತಾರೆ.

ವೀಸಾ ಅವಧಿ ಮುಗಿದಿದ್ದರೂ ಸುಲಭವಾಗಿ ಹಣ ಸಂಪಾದನೆ ಮಾಡಬಹುದೆಂದು ಡ್ರಗ್‌್ಸ ದಂಧೆಗೆ ಇಳಿದು ಮೋಜು ಜೀವನ ನಡೆಸುತ್ತಾ, ತಮ ಮಾತೃ ದೇಶವನ್ನೇ ಮರೆತುಬಿಡುತ್ತಾರೆ.ವಿವಿಧ ವೀಸಾಗಳ ಮೂಲಕ ಬಹಳಷ್ಟು ಮಂದಿ ವಿದೇಶಿಗರು ಬೆಂಗಳೂರು ನಗರಕ್ಕೆ ಬರುತ್ತಾರೆ. ಇವರುಗಳಲ್ಲಿ ಶೇ.10 ಮಂದಿ ತಮ ತಮ ದೇಶಗಳಿಗೆ ವಾಪಸ್‌‍ ಹೋಗದೆ ಇಲ್ಲೇ ಉಳಿದುಕೊಳ್ಳುತ್ತಾರೆ ಎಂಬ ಮಾಹಿತಿ ಇದೆ.

ಹಾಗಾದರೆ ಎಫ್‌ಆರ್‌ಆರ್‌ಒ ಅಧಿಕಾರಿಗಳು ಮತ್ತು ಸಿಬ್ಬಂದಿ ಏನು ಮಾಡುತ್ತಿದ್ದಾರೆ? ಯಾವ ಯಾವ ದೇಶಗಳಿಂದ ಎಷ್ಟು ಮಂದಿ, ಯಾವ ವೀಸಾಗಳಲ್ಲಿ ಬಂದಿದ್ದಾರೆ ಎಂಬ ಸಂಪೂರ್ಣ ಮಾಹಿತಿ ಇವರ ಬಳಿ ಇದ್ದೇ ಇರುತ್ತದೆ.

ಇಷ್ಟೆಲ್ಲಾ ಮಾಹಿತಿ ಇದ್ದರೂ ಕೂಡ ಎಫ್‌ಆರ್‌ಆರ್‌ಒ ಅವರು ಬಂದವರು ಅವರುಗಳ ದೇಶಕ್ಕೆ ವಾಪಸ್‌‍ ಹೋಗಿದ್ದಾರೆಯೇ ಅಥವಾ ಇಲ್ಲೇ ಇದ್ದಾರೆಯೇ ಎಂಬುದನ್ನು ಪರಿಶೀಲಿಸಬೇಕಲ್ಲವೆ? ಒಂದು ವೇಳೆ ಅವರು ಇಲ್ಲೇ ಇದ್ದರೆ ಸೂಕ್ತ ಕ್ರಮ ಕೈಗೊಳ್ಳಬೇಕಲ್ಲವೆ?

ಇದರಲ್ಲಿ ಪೊಲೀಸರ ಪಾತ್ರವೂ ಇದೆ. ತಮ ತಮ ಪೊಲೀಸ್‌‍ ಠಾಣೆಗಳ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ವಿದೇಶಿ ಪ್ರಜೆಗಳ ಮೇಲೆ ಸ್ಥಳೀಯ ಠಾಣೆಯ ಪೊಲೀಸರು ಸಂಪೂರ್ಣ ನಿಗಾ ಇಡಲೇಬೇಕು. ಅವರು ಯಾವ ಮನೆಯಲ್ಲಿ ಬಾಡಿಗೆಗೆ ಇದ್ದಾರೆ? ಅವರು ಯಾವ ವೀಸಾದಲ್ಲಿ ಬಂದು ಯಾವ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಗಮನಿಸಬೇಕಲ್ಲವೆ?

ಒಂದು ವೇಳೆ ಅವರ ವೀಸಾ ಅವಧಿ ಮುಗಿದು ಇಲ್ಲೇ ಇದ್ದರೆ. ಎಫ್‌ಆರ್‌ಆರ್‌ಒ ಗಮನಕ್ಕೆ ತರಬೇಕಲ್ಲವೇ..? ವಿದೇಶಿ ಪ್ರಜೆಗಳಿಗೆ ಮನೆ, ಫ್ಲ್ಯಾಟ್‌, ಅಂಗಡಿ, ಹೋಟೆಲ್‌ಗಳು ಬಾಡಿಗೆಗೆ ಕೊಡುವಾಗ ಮಾಲೀಕರು ಫಾರಂ ಸಿಯನ್ನು ಸ್ಥಳೀಯ ಪೊಲೀಸ್‌‍ ಠಾಣೆಗೆ ಕಡ್ಡಾಯವಾಗಿ ನೀಡಬೇಕೆಂಬ ನಿಯಮವಿದೆ. ಕೆಲವು ಮನೆ ಮಾಲೀಕರು ಪೊಲೀಸರ ಸಹವಾಸವೇ ಬೇಡ, ಹೆಚ್ಚಿನ ಬಾಡಿಗೆ ಬಂದರೆ ಸಾಕು ಎಂದು ಫಾರಂ ಸಿಯನ್ನು ಠಾಣೆಗೆ ನೀಡುವುದಿಲ್ಲ. ಸ್ಥಳೀಯ ಪೊಲೀಸರು ಇಂಥವರನ್ನು ಪತ್ತೆ ಹಚ್ಚಿ ಕಠಿಣ ಕ್ರಮಕೈಗೊಳ್ಳಬೇಕಲ್ಲವೇ?

ಎಫ್‌ಆರ್‌ಆರ್‌ಒ ಹಾಗೂ ಪೊಲೀಸರು ಈ ವಿಷಯದಲ್ಲಿ ಸರಿಯಾಗಿ ಕೆಲಸ ಮಾಡದಿದ್ದರೆ ಮತ್ತು ಮನೆ ಮಾಲೀಕರು ತಮ ಕರ್ತವ್ಯವನ್ನು ಪಾಲಿಸದಿದ್ದರೆ ಸಿಲಿಕಾನ್‌ ಸಿಟಿ ವಿದೇಶಿ ವಲಸಿಗರ ಅಕ್ರಮ ತಾಣವಾಗುತ್ತದೆ. ಮುಂದೊಂದು ದಿನ ಇದೇ ಅಕ್ರಮ ವಲಸಿಗರಿಂದ ದೇಶದ ಭದ್ರತೆಗೆ ಧಕ್ಕೆ ಬರಬಹುದು ಎಚ್ಚರ.

RELATED ARTICLES

Latest News