Saturday, April 18, 2026
Homeರಾಜ್ಯಅಧಿಕಾರದಲ್ಲಿದ್ದಾಗಲೇ ಜೀವಾವಧಿ ಶಿಕ್ಷೆಗೆ ಗುರಿಯಾದ ರಾಜ್ಯದ 2ನೇ ರಾಜಕಾರಣಿ ವಿನಯ್‌ ಕುಲಕರ್ಣಿ

ಅಧಿಕಾರದಲ್ಲಿದ್ದಾಗಲೇ ಜೀವಾವಧಿ ಶಿಕ್ಷೆಗೆ ಗುರಿಯಾದ ರಾಜ್ಯದ 2ನೇ ರಾಜಕಾರಣಿ ವಿನಯ್‌ ಕುಲಕರ್ಣಿ

Vinay Kulkarni is the second politician in the state to be sentenced to life imprisonment while in office

ಬೆಂಗಳೂರು,ಏ.18- ಕರ್ನಾಟಕದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದ ಜನಪ್ರತಿನಿಧಿಗಳ ಪೈಕಿ ವಿನಯ್‌ ಕುಲಕರ್ಣಿ 2ನೇಯವರು. ಇನ್ನು ಅಧಿಕಾರದಲ್ಲಿದ್ದಾಗಲೇ ಜೀವಾವಧಿ ಶಿಕ್ಷೆಯಾಗಿದ್ದು ಇದೇ ಮೊದಲು.ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಸಂಸದರಾಗಿದ್ದಾಗ ಬಂಧನವಾಗಿದ್ದ ಪ್ರಜ್ವಲ್‌ ರೇವಣ್ಣ ಅವರಿಗೆ ಅವರ ಅಧಿಕಾರಾವಧಿ ಮುಗಿದ ಬಳಿಕ (ಬಂಧನವಾಗಿ 1 ವರ್ಷದ ನಂತರ) ಜನಪ್ರತಿನಿಧಿಗಳ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿತ್ತು. ಸದ್ಯ ಅವರು ಜೈಲಿನಲ್ಲಿದ್ದಾರೆ.

ಇನ್ನು ವಿನಯ್‌ ಕುಲಕರ್ಣಿಯವರು ಧಾರವಾಡ ಜಿಲ್ಲಾ ಸಚಿವರಿದ್ದಾಗ (2016ರ ಜೂನ್‌) ಯೋಗೀಶ್‌ಗೌಡ ಕೊಲೆ ನಡೆದಿತ್ತು. ಆ ಕೊಲೆಗೆ ಸಂಬಂಧಿಸಿದಂತೆ 2020 ರಲ್ಲಿ ವಿನಯ್‌ ಕುಲಕರ್ಣಿಯವರ ಬಂಧನವೂ ಆಗಿತ್ತು. ಜಾಮೀನಿನ ಮೇಲೆ ಹೊರಗಿದ್ದ ವಿನಯ್‌ 2023 ರಲ್ಲಿ ಶಾಸಕರಾಗಿಯೂ ಆಯ್ಕೆಯಾಗಿದ್ದರು. ಸದ್ಯ ಜೀವಾವಧಿ ಶಿಕ್ಷೆ ಪ್ರಕಟವಾಗಿದೆ. ಈ ಮೂಲಕ ಅಧಿಕಾರದಲ್ಲಿದ್ದಾಗಲೇ ಜೀವಾವಧಿ ಶಿಕ್ಷೆಗೆ ಗುರಿಯಾದ ಮೊದಲ ಜನಪ್ರತಿನಿಧಿ ವಿನಯ್‌ ಆಗಿದ್ದಾರೆ.

ಕ್ರಿಮಿನಲ್‌ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾದ ರಾಜ್ಯದ ಜನಪ್ರತಿನಿಧಿಗಳು ಯಾರು ? :
ಸತೀಶ್‌ ಸೈಲ್‌ (ಕಾರವಾರದ ಶಾಸಕ): ಬೇಲೆಕೇರಿ ಅಕ್ರಮ ಅದಿರು ಸಾಗಾಣಿಕೆ ಪ್ರಕರಣದಲ್ಲಿ ಇತ್ತೀಚೆಗೆ (ಅಕ್ಟೋಬರ್‌ 2024) ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಇವರು ದೋಷಿ ಎಂದು ತೀರ್ಪು ನೀಡಿದ್ದು, 7 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ಕೋಟ್ಯಂತರ ರೂಪಾಯಿ ದಂಡ ವಿಧಿಸಿತ್ತು. ಸದ್ಯ ಉನ್ನತ ನ್ಯಾಯಾಲಯಕ್ಕೆ (ಹೈಕೋರ್ಟ್‌) ಹೋಗಿ ತೀರ್ಪಿಗೆ ತಡೆ ತಂದು ಜಾಮೀನಿನಲ್ಲಿದ್ದಾರೆ. ಶಾಸಕರಾಗಿಯೂ ಮುಂದುವರೆದಿದ್ದಾರೆ.

ವೈ. ಸಂಪಂಗಿ (ಕೆ.ಜಿ.ಎಫ್‌ ಮಾಜಿ ಶಾಸಕ): ಲಂಚ ಪ್ರಕರಣದಲ್ಲಿ ನ್ಯಾಯಾಲಯವು 3.5 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಭ್ರಷ್ಟಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾದ ರಾಜ್ಯದ ಮೊದಲ ಶಾಸಕ ಇವರಾಗಿದ್ದರು. ಆ ನಂತರ ಉನ್ನತ ನ್ಯಾಯಾಲಯದ ಮೊರೆ ಹೋಗಿ ಬಿಡುಗಡೆಯಾಗಿದ್ದರು.

ಗಂಭೀರ ಪ್ರಕರಣಗಳಲ್ಲಿ ವಿಚಾರಣೆ ಎದುರಿಸುತ್ತಿರುವ ನಾಯಕರು :
ಗಾಲಿ ಜನಾರ್ದನ ರೆಡ್ಡಿ (ಶಾಸಕ ಹಾಗೂ ಮಾಜಿ ಸಚಿವ):
ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜನಾರ್ದನ ರೆಡ್ಡಿಗೆ ಸಿಬಿಐ ವಿಶೇಷ ನ್ಯಾಯಾಲಯ 7 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಈ ಆದೇಶಕ್ಕೆ ತೆಲಂಗಾಣ ಹೈಕೋರ್ಟ್‌ ತಡೆ ನೀಡಿದೆ.

ಜತೆಗೆ ಬೇಲೆೆಕೇರಿ ಬಂದರು ಅಕ್ರಮ ಅದಿರು ರಫ್ತು ಪ್ರಕರಣ, ಅಕ್ರಮ ಆಸ್ತಿ ಸಂಪಾದನೆ ಮತ್ತು ಮನಿ ಲಾಂಡರಿಂಗ್‌ ಸೇರಿ ಹಲವು ಪ್ರಕರಣಗಳಿದ್ದು, ವಿಚಾರಣೆ ನಡೆಯುತ್ತಿವೆ. 3 ವರ್ಷ ಜೈಲಿನಲ್ಲಿದ್ದು, ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಡಿ.ಕೆ.ಶಿವಕುಮಾರ್‌ : ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇ.ಡಿ ಯಿಂದ ನ್ಯಾಯಾಂಗ ಬಂಧನಕ್ಕೊಳಗಾಗಿ ತಿಹಾರ್‌ ಜೈಲಿನಲ್ಲಿದ್ದು, ಬಳಿಕ ಜಾಮೀನು ಪಡೆದರು.

RELATED ARTICLES

Latest News