Saturday, April 18, 2026
Homeಮನರಂಜನೆಜೀ ಕನ್ನಡದಲ್ಲಿ ಮತ್ತೆ ಶುರು 'ಸರಿಗಮಪ ಲಿಟಲ್ ಚಾಂಪ್ಸ್

ಜೀ ಕನ್ನಡದಲ್ಲಿ ಮತ್ತೆ ಶುರು ‘ಸರಿಗಮಪ ಲಿಟಲ್ ಚಾಂಪ್ಸ್

Zee Kannada to resume 'Sarigamapa Little Champs'

ಬೆಂಗಳೂರು : ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ಕಾರ್ಯಕ್ರಮದ ಅಭೂತಪೂರ್ವ ಯಶಸ್ಸಿನ ನಂತರ, ಜೀ ಕನ್ನಡ ವಾಹಿನಿಯು ಈಗ ಸಂಗೀತದ ಮಾಯಾಲೋಕವನ್ನು ಮರಳಿ ತರಲು ಸಜ್ಜಾಗಿದೆ. ಅಸಾಧಾರಣ ಪ್ರತಿಭೆಗಳನ್ನು ಗುರುತಿಸಿ ಬೆಳೆಸುವಲ್ಲಿ ಹೆಸರುವಾಸಿಯಾದ ಜನಪ್ರಿಯ ಗಾಯನ ರಿಯಾಲಿಟಿ ಶೋ ‘ಸರಿಗಮಪ ಲಿಟಲ್ ಚಾಂಪ್ಸ್’, ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸಲು ಸಿದ್ಧವಾಗಿದೆ. 3 ರಿಂದ 15 ವರ್ಷದೊಳಗಿನ ಪುಟಾಣಿ ಪ್ರತಿಭೆಗಳು ಭಾಗವಹಿಸುವ ಈ ಸೀಸನ್, ಕರ್ನಾಟಕದ ಮೂಲೆ ಮೂಲೆಯ ಕಿರಿಯ ಗಾಯಕರ ಅದ್ಭುತ ಪ್ರದರ್ಶನಗಳು ಮತ್ತು ಮರೆಯಲಾಗದ ಸಂಗೀತದ ಕ್ಷಣಗಳಿಗೆ ಸಾಕ್ಷಿಯಾಗಲಿದೆ.

‘ಸರಿಗಮಪ ಲಿಟಲ್ ಚಾಂಪ್ಸ್’ ಏಪ್ರಿಲ್ 18ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 7:30ಕ್ಕೆ ಪ್ರಸಾರವಾಗಲಿದೆ. ಈ ಸೀಸನ್‌ನಲ್ಲಿ ಅಪ್ರತಿಮ ಪ್ರತಿಭೆ ಹೊಂದಿರುವ ಪುಟ್ಟ ಗಾಯಕರು ತಮ್ಮ ಧ್ವನಿಯ ಮೂಲಕ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಲಿದ್ದಾರೆ. ಮನೋರಂಜನೆ ಮತ್ತು ಭಾವನೆಗಳ ಸಮ್ಮಿಶ್ರಣವಾಗಿರುವ ಈ ಕಾರ್ಯಕ್ರಮವು, ಉದಯೋನ್ಮುಖ ಗಾಯಕರಿಗೆ ಭವ್ಯ ವೇದಿಕೆಯನ್ನು ಕಲ್ಪಿಸಿಕೊಡುವುದರ ಜೊತೆಗೆ ಸಂಗೀತದ ಸಂಭ್ರಮವನ್ನು ಆಚರಿಸಲಿದೆ.

ಈ ಬಾರಿಯೂ ಕನ್ನಡಿಗರ ನೆಚ್ಚಿನ ಗಾಯಕರಾದ ರಾಜೇಶ್ ಕೃಷ್ಣನ್, ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯ ಮತ್ತು ಎಲ್ಲರ ಫೇವರಿಟ್ ವಿಜಯ್ ಪ್ರಕಾಶ್ ಅವರು ತೀರ್ಪುಗಾರರಾಗಿದ್ದು ಸ್ಪರ್ಧಿಗಳಿಗೆ ಮಾರ್ಗದರ್ಶನ ನೀಡಲಿದೆ. ತಮ್ಮ ಅಪಾರ ಅನುಭವದ ಮೂಲಕ ಪುಟಾಣಿ ಪ್ರತಿಭೆಗಳು ವೇದಿಕೆಯ ಮೇಲೆ ಮಿಂಚಲು ಇವರು ಸ್ಫೂರ್ತಿಯಾಗಲಿದ್ದಾರೆ. ಜನಪ್ರಿಯ ನಿರೂಪಕಿ ಅನುಶ್ರೀ ಅವರು ತಮ್ಮ ನಿರೂಪಣೆ ಮೂಲಕ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ಮತ್ತು ಚೈತನ್ಯ ನೀಡಲಿದ್ದಾರೆ.

ಟೆಲಿವಿಷನ್ ಮಾತ್ರವಲ್ಲದೆ, ಜೀ ಕನ್ನಡದ ಸಾಮಾಜಿಕ ಜಾಲತಾಣಗಳ ಮೂಲಕವೂ ವೀಕ್ಷಕರು ತೆರೆಯ ಹಿಂದಿನ ಕ್ಷಣಗಳು, ಸ್ಪರ್ಧಿಗಳ ಪಯಣ ಮತ್ತು ಹಾಸ್ಯ ಸನ್ನಿವೇಶಗಳ ತುಣುಕುಗಳನ್ನು ಆನಂದಿಸಬಹುದು. ಪ್ರಾಕ್ಟೀಸ್ ನಿಂದ ಹಿಡಿದು ತೀರ್ಪುಗಾರರ ಸಹಜ ಪ್ರತಿಕ್ರಿಯೆಗಳವರೆಗೆ ಎಲ್ಲವನ್ನೂ ಒಳಗೊಂಡ ಈ ವಿಡಿಯೋ ಗಳು ಅಭಿಮಾನಿಗಳನ್ನು ಈ ರಿಯಾಲಿಟಿ ಶೋ ಗೆ ಮತ್ತಷ್ಟು ಹತ್ತಿರವಾಗಿಸಲಿದೆ.

ಕರ್ನಾಟಕದ ಮುಂದಿನ ಸಿಂಗಿಂಗ್ ಸೂಪರ್ ಸ್ಟಾರ್ ಆಯ್ಕೆಯಾಗುವ ಈ ಸುಂದರ ಕ್ಷಣಕ್ಕೆ ನೀವು ಕೂಡ ಸಾಕ್ಷಿಯಾಗಿ. ಸಂಗೀತ, ಪ್ರತಿಭೆ ಮತ್ತು ಕನಸುಗಳ ಈ ಸಂಭ್ರಮವು ಸಂಗೀತ ಪ್ರಿಯರಿಗೆ ಮರೆಯಲಾಗದ ನೆನಪುಗಳನ್ನು ಸೃಷ್ಟಿಸಲಿದೆ.

RELATED ARTICLES

Latest News