Monday, April 13, 2026
Homeಬೆಂಗಳೂರುದ್ವಿಚಕ್ರ ವಾಹನಗಳನ್ನು ಖಾಲಿ ಜಾಗದಲ್ಲಿ ನಿಲ್ಲಿಸಿದ್ದ ಆರೋಪಿ ಅರೆಸ್ಟ್

ದ್ವಿಚಕ್ರ ವಾಹನಗಳನ್ನು ಖಾಲಿ ಜಾಗದಲ್ಲಿ ನಿಲ್ಲಿಸಿದ್ದ ಆರೋಪಿ ಅರೆಸ್ಟ್

Accused arrested for parking two-wheelers in vacant lot

ಬೆಂಗಳೂರು,ಮಾ.25- ದಿಚಕ್ರ ವಾಹನಗಳನ್ನು ಕಳವು ಮಾಡಿ ಖಾಲಿ ಜಾಗದಲ್ಲಿ ನಿಲ್ಲಿಸಿದ್ದ ಆರೋಪಿಯೊಬ್ಬನನ್ನು ಮಡಿವಾಳ ಠಾಣೆ ಪೊಲೀಸರು ಬಂಧಿಸಿ 6.25 ಲಕ್ಷ ರೂ. ಮೌಲ್ಯದ ಹತ್ತು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಬೆಳ್ಳಂದೂರಿನ ಚಂಪಾಲೇನ್‌ ನಿವಾಸಿಯೊಬ್ಬರು ಸಿಲ್‌್ಕಬೋರ್ಡ್‌ ಆಟೋ ನಿಲ್ದಾಣದ ಬಳಿ ದ್ವಿಚಕ್ರ ವಾಹನ ನಿಲ್ಲಿಸಿ ಕೆಲಸದ ನಿಮಿತ್ತ ತೆರಳಿದ್ದು, ಸಂಜೆ ವಾಪಸ್‌‍ ಬಂದು ನೋಡಿದಾಗ ಅವರ ವಾಹನ ಇರಲಿಲ್ಲ. ಈ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಹಲವು ಮಾಹಿತಿಗಳನ್ನು ಕಲೆ ಹಾಕಿ ಮಾರುತಿನಗರ ಮುಖ್ಯರಸ್ತೆಯ 8ನೇ ಕ್ರಾಸ್‌‍ ಬಳಿ ದ್ವಿಚಕ್ರ ವಾಹನ ಸಮೇತ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ವಾಹನ ಕಳವು ಮಾಡಿರುವುದಾಗಿ ಹೇಳಿದ್ದಾನೆ.

ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಿದಾಗ ಕಳವು ಮಾಡಿದ ದ್ವಿಚಕ್ರ ವಾಹನಗಳನ್ನು ಸಿಲ್‌್ಕಬೋರ್ಡ್‌ನ ದರ್ಗಾ ಬಳಿ ಖಾಲಿ ಜಾಗದಲ್ಲಿ ಐದು ದ್ವಿಚಕ್ರ ವಾಹನ ಹಾಗೂ ಹೊಸೂರು ರಸ್ತೆಯ ಸಿಲ್‌್ಕಬೋರ್ಡ್‌ನ ಕೆಎಸ್‌‍ಆರ್‌ಪಿ ಸಮುದಾಯ ಭವನದ ಬಳಿ ನಾಲ್ಕು ದ್ವಿಚಕ್ರ ವಾಹನಗಳನ್ನು ನಿಲ್ಲಿಸಿರುವುದಾಗಿ ಹೇಳಿದ್ದು, ಆತನ ಮಾಹಿತಿಯಂತೆ ಒಟ್ಟು ಹತ್ತು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಯ ಬಂಧನದಿಂದ ಮಡಿವಾಳ 3, ಎಚ್‌ಎಸ್‌‍ಆರ್‌ ಲೇಔಟ್‌ 2, ಕಿಬ್ಬಗೋಡಿ ಹಾಗೂ ಬೆಳ್ಳಂದೂರು ಪೊಲೀಸ್‌‍ ಠಾಣೆಯ ತಲಾ ಒಂದು ಪ್ರಕರಣ ಸೇರಿದಂತೆ ಒಟ್ಟು 7 ದ್ವಿಚಕ್ರ ವಾಹನ ಪ್ರಕರಣಗಳು ಪತ್ತೆಯಾಗಿವೆ. ಉಳಿದ ಮೂರು ದ್ವಿಚಕ್ರ ವಾಹನಗಳ ವಾರಸುದಾರರ ಪತ್ತೆ ಕಾರ್ಯ ಮುಂದುವರೆದಿದೆ.

ಇನ್‌ಸ್ಪೆಕ್ಟರ್‌ ಮೊಹಮದ್‌ ಹಾಗೂ ಸಿಬ್ಬಂದಿ ತಂಡವು ಈ ಕಾರ್ಯಾಚರಣೆಯನ್ನು ಕೈಗೊಂಡು ಆರೋಪಿಯನ್ನು ಬಂಧಿಸಿ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

RELATED ARTICLES

Latest News