Thursday, April 16, 2026
Homeಬೆಂಗಳೂರುಬೆಂಗಳೂರು : ಕಾಲೇಜು ಬಸ್‌ ಡಿಕ್ಕಿ ಹೊಡೆದು ತಾಯಿ-ಮಗ ಸ್ಥಳದಲ್ಲೇ ಸಾವು

ಬೆಂಗಳೂರು : ಕಾಲೇಜು ಬಸ್‌ ಡಿಕ್ಕಿ ಹೊಡೆದು ತಾಯಿ-ಮಗ ಸ್ಥಳದಲ್ಲೇ ಸಾವು

Bengaluru: Mother and son die on the spot after being hit by a college bus

ಬೆಂಗಳೂರು,ಜ.19- ಕಾಲೇಜು ಬಸ್‌ ಡಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ತಾಯಿ-ಮಗ ಸ್ಥಳದಲ್ಲೇ ಸಾವನ್ನಪ್ಪಿರುವ ದುರಂತ ಘಟನೆ ಇಂದು ಬೆಳಗ್ಗೆ ಅಶೋಕನಗರ ಸಂಚಾರಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಈಜಿಪುರದ ನಿವಾಸಿ ಸಂಗೀತಾ (37) ಮತ್ತು ಇವರ ಪುತ್ರ ಪಾರ್ಥ (8) ಮೃತ ದುರ್ದೈವಿಗಳು. ಸಂಗೀತಾ ಅವರು ಆಡುಗೋಡಿ ಸಮೀಪದ ಆರ್ಮಿ ಪಬ್ಲಿಕ್‌ ಶಾಲೆಯಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದು, ಇವರಿಗೆ ಇಬ್ಬರು ಮಕ್ಕಳಿದ್ದು, ಪತಿ ಆಂಧ್ರ ಪ್ರದೇಶದಲ್ಲಿ ವಾಸವಾಗಿದ್ದು, ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದರು.

ಇಂದು ಬೆಳಗ್ಗೆ ಸುಮಾರು 6.30ರ ಸಂದರ್ಭದಲ್ಲಿ ಮಗ ಪಾರ್ಥನನ್ನು ಕರೆದುಕೊಂಡು ಸಂಗೀತಾ ಅವರು ಶಾಲೆ ಸಮೀಪ ರಸ್ತೆ ದಾಟುತ್ತಿರುವಾಗ ವಿವೇಕನಗರದ ಜಂಕ್ಷನ್‌ ಬಳಿ ಖಾಸಗಿ ಕಾಲೇಜಿನ ಬಸ್ಸೊಂದು ಇವರಿಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಇಬ್ಬರೂ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಅಪಘಾತದ ನಂತರ ಬಸ್‌ ಚಾಲಕ ವಾಹನವನ್ನು ನಿಲ್ಲಿಸದೆ ಚಾಲನೆ ಮಾಡಿಕೊಂಡು ಹೋಗಿದ್ದಾನೆ. ಸುದ್ದಿ ತಿಳಿದು ಸ್ಥಳಕ್ಕೆ ದಾವಿಸಿದ ಪೊಲೀಸರು ಮೃತ ದೇಹಗಳನ್ನು ಬೌರಿಂಗ್‌ ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ದೃಶ್ಯ ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.ಅಶೋಕನಗರ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

RELATED ARTICLES

Latest News