Homeಬೆಂಗಳೂರುಬೆಂಗಳೂರಿನಲ್ಲಿ ಕೆಲಕಾಲ ಆತಂಕ ಮೂಡಿಸಿದ್ದ ಸ್ಫೋಟಕ ಮಾದರಿಯ ವಸ್ತು

ಬೆಂಗಳೂರಿನಲ್ಲಿ ಕೆಲಕಾಲ ಆತಂಕ ಮೂಡಿಸಿದ್ದ ಸ್ಫೋಟಕ ಮಾದರಿಯ ವಸ್ತು

ಬೆಂಗಳೂರು,ಅ.31-ನಗರದಲ್ಲಿ ಸ್ಫೋಟಕ ಮಾದರಿಯ ವಸ್ತು ಪತ್ತೆಯಾಗಿದ್ದು, ಕೆಲಕಾಲ ಆತಂಕದ ವಾತಾವರಣ ಉಂಟಾಗಿತ್ತು.ಜ್ಞಾನಭಾರತಿ ಪೊಲೀಸ್‌‍ ಠಾಣೆ ವ್ಯಾಪ್ತಿಯ ಸೊಣ್ಣೇನಹಳ್ಳಿ ರಿಂಗ್‌ ರೋಡ್‌ ಅವಾ ಆಶ್ರಮ ಸಮೀಪದ ವಿಜಯ ಆಸ್ಪತ್ರೆ ಹಿಂಭಾಗದಲ್ಲಿ ಇಂದು ಬೆಳಗ್ಗೆ ಸ್ಫೋಟಕ ವಸ್ತು ಪತ್ತೆಯಾಗಿದೆ. ದಾರಿ ಹೋಕರು ನೋಡಿ ತಕ್ಷಣ ನಮ 112 ಗೆ ಮಾಹಿತಿ ನೀಡಿದ್ದಾರೆ.

ವಿಷಯ ತಿಳಿದು ಪೊಲೀಸರು, ಬಾಂಬ್‌ ಪತ್ತೆದಳ , ಬಾಂಬ್‌ ನಿಷ್ಕ್ರೀಯ ದಳ, ಎಫ್‌ಎಸ್‌‍ಎಲ್‌ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿವೆ.ಮೇಲ್ನೋಟಕ್ಕೆ ಇದು ಸ್ಫೋಟಕ ವಸ್ತುವಂತೆ ಕಂಡು ಬಂದಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ವಸ್ತುವನ್ನು ಈ ಜಾಗದಲ್ಲಿ ಯಾರು, ಏತಕ್ಕಾಗಿ ಇಟ್ಟು ಹೋಗಿದ್ದಾರೆಂಬ ಬಗ್ಗೆ ಪೊಲೀಸರು ಘಟನಾ ಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದಾರೆ.

ಆರೋಪಿಗಳು ಮೂರು ಪೈಪ್‌ ತುಂಡುಗಳಿಗೆ ಟೇಪ್‌ಸುತ್ತಿ ಅದರೊಳಗೆ ವೈರ್‌ಗಳನ್ನು ಜೋಡಿಸಿ ರಸ್ತೆ ಬದಿ ಇಟ್ಟು ಹೋಗಿರುವುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಅನುಮಾನಾಸ್ಪದ ವಸ್ತುವಿನ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ನರೇಂದ್ರಮೋದಿ ಅವರು ಆರ್ಟ್‌ ಆಫ್‌ ಲಿವಿಂಗ್‌ ಆಶ್ರಮಕ್ಕೆ ಆಗಮಿಸಿದ ವೇಳೆ ಮಾರ್ಗಮಧ್ಯೆ ಜಿಲೆಟಿನ್‌ ಕಡ್ಡಿಗಳು ಪತ್ತೆಯಾಗಿದ್ದವು.ಈ ಬಗ್ಗೆ ಕಗ್ಗಲಿಪುರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಈ ಘಟನೆ ಮಾಸುವ ಮುನ್ನವೇ ಸ್ಪೋಟಕ ಮಾದರಿಯ ವಸ್ತು ಪತ್ತೆಯಾಗಿರುವುದು ನಗರ ಪೊಲೀಸರನ್ನು ನಿದ್ದೆಗೆಡಿಸಿದೆ.

RELATED ARTICLES

Latest News