ಬೆಂಗಳೂರು,ಮಾ.10- ನಗರ ಪೊಲೀಸರು ಮೂರು ಹೊರ ರಾಜ್ಯದ ಡ್ರಗ್ ಪೆಡ್ಲರ್‌ಗಳು ಸೇರಿದಂತೆ ನಾಲ್ವರನ್ನು ಬಂಧಿಸಿ, 48.24 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಮಹದೇವಪುರ, ಕೆಜಿಹಳ್ಳಿ ಹಾಗೂ ಮಲ್ಲೇಶ್ವರಂ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಮಾದಕ ವಸ್ತುಗಳಾದ ಗಾಂಜಾ, ಹೈಡ್ರೋ ಗಾಂಜಾ ಮತ್ತು ಎಂಡಿಎಂಎ ಮಾರಾಟ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿಗಳು ಲಭಿಸಿವೆ.ಈ ಆಧಾರದ ಮೇಲೆ ಠಾಣೆಗಳಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಿಕೊಂಡು ಸ್ಥಳಗಳ ಮೇಲೆ ದಾಳಿ ಮಾಡಿ ಹೊರ ರಾಜ್ಯದ ಮೂವರು ಸೇರಿದಂತೆ ನಾಲ್ವರು ಡ್ರಗ್‌ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ.
ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ, ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ಹೊರರಾಜ್ಯದ ಅಪರಿಚಿತರಿಂದ ಮಾದಕ ವಸ್ತುಗಳನ್ನು ಖರೀದಿಸಿ ನಗರದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದುದ್ದಾಗಿ ಬಾಯ್ಬಿಟ್ಟಿದ್ದಾರೆ.
ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 20 ಲಕ್ಷ ಮೌಲ್ಯದ 19 ಕೆಜಿ 200 ಗ್ರಾಂ ಗಾಂಜಾ, ಕೆಜಿಹಳ್ಳಿ ವ್ಯಾಪ್ತಿಯಲ್ಲಿ 16.24 ಲಕ್ಷ ಮೌಲ್ಯದ 16 ಕೆಜಿ 240 ಗ್ರಾಂ ಗಾಂಜಾ ಹಾಗೂ ಮಲ್ಲೇಶ್ವರಂ ವ್ಯಾಪ್ತಿಯಲ್ಲಿ 12 ಲಕ್ಷ ಮೌಲ್ಯದ 1 ಕೆಜಿ 940 ಗ್ರಾಂ ಗಾಂಜಾ, 33 ಗ್ರಾಂ ಹೈಡ್ರೋ ಗಾಂಜಾ ಮತ್ತು 23.19 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ.
ಡ್ರಗ್‌ಪೆಡ್ಲರ್‌ಗಳಿಂದ ಒಟ್ಟಾರೆ 37 ಕೆಜಿ 400 ಗ್ರಾಂ ಗಾಂಜಾ, 33 ಗ್ರಾಂಹೈಡ್ರೋ ಗಾಂಜಾ, 23.19 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದ್ದು, ಇವುಗಳ ಒಟ್ಟು ಮೌಲ್ಯ 48.24 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ.ಇವರಿಗೆ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದ ಹೊರ ರಾಜ್ಯದ ವ್ಯಕ್ತಿಗಳ ಪತ್ತೆಕಾರ್ಯ ಮುಂದುವರೆದಿದೆ. ಇನ್‌್ಸಪೆಕ್ಟರ್‌ಗಳು ಹಾಗೂ ಅವರ ಸಿಬ್ಬಂದಿಗಳ ತಂಡಗಳು ಪ್ರಕರಣಗಳನ್ನು ಭೇದಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿವೆ.
ಕಳುವಾಗಿದ್ದ 321 ಮೊಬೈಲ್‌ಗಳು ಹಸ್ತಾಂತರ :
ಬೆಂಗಳೂರು,ಮಾ.10- ಕಳುವಾಗಿದ್ದ ಮೊಬೈಲ್‌ಗಳನ್ನು ನಗರದ ಆಗ್ನೇಯ ವಿಭಾಗದ ಪೊಲೀಸರು ಈ ತಿಂಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ಸಿಇಐಆರ್ ತಂತ್ರಾಂಶದ ಮೂಲಕ ಪತ್ತೆಹಚ್ಚಿ 49.30 ಲಕ್ಷ ರೂ.ಮೌಲ್ಯದ 321 ಮೊಬೈಲ್‌ಗಳನ್ನು ವಶಕ್ಕ ಪಡೆದು ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ.
ಆಡುಗೋಡಿ ಠಾಣೆ ಪೊಲೀಸರು 45 ಮೊಬೈಲ್‌ಗಳು, ಬೊಮನಹಳ್ಳಿ 49,ಹೆಚ್‌ಎಸ್‌ಆರ್‌ಲೇಔಟ್ 15,ಕೋರಮಂಗಲ 27, ಮಡಿವಾಳ 49, ಮೈಕೋ ಲೇಔಟ್ 65,ಸುದ್ದಗುಂಟೆಪಾಳ್ಯ 41ಹಾಗೂ ತಿಲಕ್‌ನಗರ ಠಾಣೆ ಪೊಲೀಸರು 30 ಮೊಬೈಲ್‌ಗಳನ್ನು ಜಪ್ತಿ ಮಾಡಿ ವಾರಸುದಾರರಿಗೆ ಹಿಂದಿರುಗಿಸಲಾಗಿದೆ.
ಟೆಕ್ಕಿ ಮನೆ ದೋಚಿದ್ದ ಮೂವರು ಆರೋಪಿಗಳು ಸೇರಿ ಐದು ಮಂದಿ ಸೆರೆ
ಬೆಂಗಳೂರು,ಮಾ.10- ಸಾಫ್‌್ಟ ವೇರ್ ಎಂಜಿನಿಯರ್ ಮನೆಯ ಬೀಗ ಒಡೆದು ಹಣ, ಆಭರಣ ದೋಚಿ ಪರಾರಿಯಾಗಿದ್ದ ಮೂವರು ಆರೋಪಿಗಳು ಸೇರಿದಂತೆ ಐವರನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿ 9.50 ಲಕ್ಷ ರೂ. ನಗದು ಸೇರಿದಂತೆ 1.26 ಕೋಟಿ ರೂ. ಮೌಲ್ಯದ ಆಭರಣಗಳು, ಕಾರು, ಮೂರು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ವಾಜರಹಳ್ಳಿಯ ರಘು ಅಲಿಯಾಸ್ ಪೆಪ್ಸಿ (25), ತ್ಯಾಗರಾಜನಗರದ ಮಿಥುನ್ ಅಲಿಯಾಸ್ ಮಿಲ್ಕಿ (22), ಆಂಧ್ರಪ್ರದೇಶದ ಲಿಖಿತ್ ಅಲಿಯಾಸ್ ಕಡ್ಡಿ (23),ಕಳವು ಮಾಲು ಸ್ವೀಕರಿಸಿದ್ದ ಬನಶಂಕರಿ 1ನೇ ಹಂತದ ಪುನೀತ್ (34) ಮತ್ತು ಇದಕ್ಕೆ ಸಹಕರಿಸಿದ ಪುನೀತ್ ಅಲಿಯಾಸ್ ನಂದಿ (19) ಬಂಧಿತರು.
ಬನಶಂಕರಿ 2ನೇ ಹಂತದ ಸಾಫ್‌್ಟವೇರ್ ಇಂಜಿನಿಯರ್ ಗೋಪಿ ರವಿಚಂದ್ರನ್ ಅವರು ಕುಟುಂಬ ಸಮೇತ ತಮಿಳುನಾಡಿಗೆ ಹೋಗಿದ್ದಾಗ ಕಳ್ಳರು ಮನೆಯ ಬೀಗ ಮುರಿದು ಒಳ ನುಗ್ಗಿ ಕೊಠಡಿಯ ಬೀರುವಿನಲ್ಲಿದ್ದ 900 ಗ್ರಾಂ ಚಿನ್ನಾಭರಣ, 2 ವಜ್ರದ ನೆಕ್ಲೇಸ್, 110 ಗ್ರಾಂ ಪ್ಲಾಟಿನಂ ಆಭರಣಗಳನ್ನು ದೋಚಿಕೊಂಡು ಪರಾರಿಯಾಗಿದ್ದರು.
ಕುಟುಂಬ ಸದಸ್ಯರು ವಾಪಸ್ ಬಂದು ನೋಡಿದಾಗ ಮನೆಯಲ್ಲಿ ಕಳ್ಳತನವಾಗಿರುವುದು ಕಂಡು ಬಂದಿದ್ದು, ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾರೆ.ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ಮಾಹಿತಿಗಳನ್ನು ಕಲೆಹಾಕಿ ಯಲಹಂಕ ರೈಲ್ವೆ ನಿಲ್ದಾಣದ ಬಳಿ ಆರೋಪಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈ ಪ್ರಕರಣದಲ್ಲಿ ಇನ್ನೂ ಇಬ್ಬರು ಸಹಚರರು ಭಾಗಿಯಾಗಿರುವುದಾಗಿ ಹೇಳಿದ್ದಾನೆ.
ತನಿಖೆ ಮುಂದುವರೆಸಿದ ಪೊಲೀಸರು ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ಸಹಚರರು ಹಾಗೂ ಚಿನ್ನಾಭರಣಗಳನ್ನು ಸ್ವೀಕರಿಸಿದ್ದ ವ್ಯಕ್ತಿಯ ಬಗ್ಗೆ ಮಾಹಿತಿಯನ್ನು ಕಲೆಹಾಕಿದ್ದಾರೆ. ಆತನ ಮಾಹಿತಿಯಂತೆ ಬನಶಂಕರಿ 1ನೇ ಹಂತದಲ್ಲಿ ವಾಸವಾಗಿರುವ ಚಿನ್ನಾಭರಣಗಳನ್ನು ಸ್ವೀಕರಿಸಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
ಮತ್ತೊಬ್ಬ ಸಹಚರನನ್ನು ಕೋಣನಕುಂಟೆ ಮೆಟ್ರೋ ನಿಲ್ದಾಣದ ಬಳಿ ಹಾಗೂ ಇನ್ನಿಬ್ಬರನ್ನು ತಲಕಾಡಿನ ಕಲಿಯೂರು ಗ್ರಾಮದಲ್ಲಿ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಆರೋಪಿಯೊಬ್ಬನ ಮನೆಯಲ್ಲಿದ್ದ ಆಭರಣ ಹಾಗೂ ನಾಯಂಡಳ್ಳಿ ಮತ್ತು ಯಲಹಂಕದಲ್ಲಿ ವಾಸವಿರುವ ಸ್ನೇಹಿತರಿಬ್ಬರಿಗೆ ನೀಡಿದ್ದ ಆಭರಣ ಹಾಗೂ ಕಾಟನ್‌ಪೇಟೆ ಜ್ಯೂವೆಲರಿ ಅಂಗಡಿಯಲ್ಲಿ ಮಾರಾಟ ಮಾಡಿದ್ದ ಆಭರಣ ಸೇರಿದಂತೆ ಒಟ್ಟು 589 ಗ್ರಾಂ ಚಿನ್ನಾಭರಣ ಹಾಗೂ 1.126 ಗ್ರಾಂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಒಟ್ಟಾರೆ ಈ ಐದು ಮಂದಿ ಆರೋಪಿಗಳ ಬಂಧನದಿಂದ 1,26,63,000 ಮೌಲ್ಯದ ಚಿನ್ನಾಭರಣಗಳು, ಆಭರಣ ಮಾರಿ ಖರೀದಿಸಿದ್ದ ಕಾರು ಮತ್ತು ಕೃತ್ಯಕ್ಕೆ ಬಳಸಿದ್ದ 3 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಇನ್‌್ಸಪೆಕ್ಟರ್ ಕೊಟ್ರೇಶಿ ಮತ್ತು ಸಿಬ್ಬಂದಿ ತಂಡ ಯಶಸ್ವಿಯಾಗಿದೆ.
ಮನೆಗೆಲಸದವನ ಸೆರೆ: 25 ಲಕ್ಷ ರೂ. ಮೌಲ್ಯದ ಆಭರಣ ವಶ
ಬೆಂಗಳೂರು,ಮಾ.10-ಕೆಲಸ ಮಾಡುತ್ತಿದ್ದ ಮನೆಯಲ್ಲಿಯೇ ವಜ್ರ ಮತ್ತು ಚಿನ್ನಾಭರಣಗಳನ್ನು ಕಳವು ಮಾಡಿದ್ದ ಹೊರರಾಜ್ಯದ ಕಳ್ಳನನ್ನು ಕೋರಮಂಗಲ ಪೊಲೀಸರು ಬಂಧಿಸಿ 25 ಲಕ್ಷ ಮೌಲ್ಯದ 172 ಗ್ರಾಂ ವಜ್ರ, ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಜಕ್ಕಸಂದ್ರದ ಅಪಾರ್ಟ್‌ಮೆಂಟ್‌ವೊಂದರ ನಿವಾಸಿ ಕಳೆದ ಮಾ.2 ರಂದು ದೂರು ನೀಡಿದ್ದರು.
ಹಿಂದಿನ ದಿನ ರಾತ್ರಿ ಕುಟುಂಬ ಸಮೇತ ಊಟಕ್ಕೆ ಹೊರಗೆ ಹೋಗಿ ವಾಪಸ್ ಮನೆಗೆ ಬಂದಾಗ ಕೊಠಡಿಯ ಕಬೋರ್ಡ್‌ನಲ್ಲಿಟ್ಟಿದ್ದ ಚಿನ್ನ ಮತ್ತು ವಜ್ರದ ಆಭರಣಗಳು ಹಾಗೂ ನಗದನ್ನು ಕಳುವಾಗಿದ್ದು ಗೊತ್ತಾಗಿದೆ.
ಮನೆಯಲ್ಲಿ ಕೆಲಸ ಮಾಡಿ ಕೊಂಡಿದ್ದ ವ್ಯಕ್ತಿಯ ಮೇಲೆ ಅನುಮಾನವಿರುವುದಾಗಿ ಪೊಲೀಸರಿಗೆ ತಿಳಿಸಿದ್ದರು. ಈ ಕುರಿತು ಮನೆ ಕಳವು ಪ್ರಕರಣ ದಾಖಲಾಗಿತ್ತು. ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು, ಖಚಿತ ಮಾಹಿತಿಯನ್ನು ಕಲೆಹಾಕಿ ಅದೇ ದಿನ ಕೃಷ್ಣ ಗಾರ್ಡನ್ ಲೇಔಟ್ ಕಟ್ಟಿಗೇನಹಳ್ಳಿ, ಸಾತನೂರಿನಲ್ಲಿ ಮನೆ ಕೆಲಸದವನನ್ನು ವಶಕ್ಕೆ ಪಡೆದುಕೊಳ್ಳಲಾಯಿತುಆತನ ವಿಚಾರಣೆ ನಡೆಸಿದಾಗ ಕಳವು ಮಾಡಿರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಅಭಿರಕ್ಷೆಗೆ ಪಡೆದ ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆಮಾಡಿ, ಈ ಪ್ರಕರಣದಲ್ಲಿ ಕಳವು ಮಾಡಿದ್ದ ವಜ್ರ ಮತ್ತು ಚಿನ್ನಾಭರಣಗಳು ಹಾಗೂ ನಗದನ್ನು ಯಲಹಂಕದಲ್ಲಿ ವಾಸವಾಗಿರುವ ಆತನ ಸ್ನೇಹಿತನೋರ್ವನ ಮನೆಯಲ್ಲಿಟ್ಟಿರುವುದಾಗಿ ತಿಳಿಸಿದ್ದು, ಅದೇದಿನ ಆತನ ಸ್ನೇಹಿತನ ಮನೆಯಿಂದ 172 ಗ್ರಾಂ ವಜ್ರ ಮತ್ತು ಚಿನ್ನದ ಆಭರಣಗಳು ಹಾಗೂ 48,000/-ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕಾರ್ಯಚರಣೆಯನ್ನು ಬೆಂಗಳೂರು ನಗರ, ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಮೊಹಮ್ಮದ್ ಸುಜೀತ.ಎಂ.ಎಸ್. ರವರ ಮಾರ್ಗದರ್ಶನದಲ್ಲಿ, ಮಡಿವಾಳ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ವಾಸುದೇವ್.ವಿ.ಕೆ ರವರ ನೇತೃತ್ವದಲ್ಲಿ, ಇನ್‌್ಸಪೆಕ್ಟರ್ ಎಸ್.ಎಲ್.ಆರ್.ರೆಡ್ಡಿ ಹಾಗೂ ಅಧಿಕಾರಿ/ಸಿಬ್ಬಂದಿಗಳ ತಂಡ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆಯತಪ್ಪಿ ಬಿದ್ದು ಬೈಕ್ ಸವಾರ ಸಾವು
ಬೆಂಗಳೂರು,ಮಾ.10- ಬೈಕ್‌ನಲ್ಲಿ ಹೋಗುತ್ತಿದ್ದ ಸವಾರ ಆಯತಪ್ಪಿ ಬಿದ್ದು ಮೃತಪಟ್ಟಿರುವ ಘಟನೆ ವಿಜಯನಗರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.ಮೃತಪಟ್ಟ ಬೈಕ್ ಸವಾರನ ಹೆಸರು, ವಿಳಾಸ ಸದ್ಯಕ್ಕೆ ತಿಳಿದು ಬಂದಿಲ್ಲ. ಬಸವೇಶ್ವರ ನಗರದ ಸಿದ್ದಯ್ಯಪುರಾಣಿಕ ರಸ್ತೆಯಲ್ಲಿ ರಾತ್ರಿ 8.30 ರ ಸುಮಾರಿನಲ್ಲಿ ಬೈಕ್‌ನಲ್ಲಿ ಯುವಕ ಹೋಗುತ್ತಿದ್ದಾಗ ಆಯತಪ್ಪಿ ಉರುಳಿದ ಪರಿಣಾಮ ಅವರು ಗಂಭೀರ ಗಾಯಗೊಂಡರು.ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.ಈ ಬಗ್ಗೆ ವಿಜಯನಗರ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
