Homeಜಿಲ್ಲಾ ಸುದ್ದಿಗಳುಚಾಮರಾಜನಗರ ತಾಲ್ಲೂಕಿಗೆ ಡಾ.ರಾಜ್‌ಕುಮಾರ್‌ ಅವರ ಹೆಸರಿಡಿ

ಚಾಮರಾಜನಗರ ತಾಲ್ಲೂಕಿಗೆ ಡಾ.ರಾಜ್‌ಕುಮಾರ್‌ ಅವರ ಹೆಸರಿಡಿ

Chamarajanagar taluk named after Dr Rajkumar

ಬೆಂಗಳೂರು, ಮೇ 8-ಚಾಮರಾಜನಗರ ತಾಲ್ಲೂಕಿಗೆ ವರನಟ ಡಾ.ರಾಜ್‌ಕುಮಾರ್‌ ಅವರ ಹೆಸರಿಡಬೇಕೆಂದು ಅಖಿಲ ಕರ್ನಾಟಕ ಡಾ. ರಾಜ್‌ ಕುಮಾರ್‌ ಅಭಿಮಾನಿ ಸಂಘಗಳ ಒಕ್ಕೂಟ ಡಿಸಿಎಂ ಡಿ.ಕೆ ಶಿವಕುಮಾರ್‌ ಅವರಿಗೆ ಮನವಿ ಮಾಡಿಕೊಂಡಿದೆ.

ಒಕ್ಕೂಟದ ಅಧ್ಯಕ್ಷ ಎನ್‌.ಆರ್‌ ರಮೇಶ್‌ ಅವರು, ಡಿಕೆಶಿಯನ್ನು ಭೇಟಿಯಾಗಿ ಕನ್ನಡ ನಾಡು, ನೆಲ, ಜಲ ಮತ್ತು ಭಾಷೆಗಾಗಿ ಅಪಾರ ಸೇವೆ ಸಲ್ಲಿಸಿದ ಡಾ. ರಾಜ್‌ ಕುಮಾರ್‌ ಅವರು ತಮ ಸರಳತೆ, ಸಾಮಾಜಿಕ ಬದ್ಧತೆ ಮತ್ತು ಹೋರಾಟಗಳ ಮೂಲಕ ಜನಮನ ಗೆದ್ದ ಅಪರೂಪದ ವ್ಯಕ್ತಿತ್ವ ಎಂದು ವಿವರಿಸಿದರು.

2028-29ರಲ್ಲಿ ರಾಜ್‌ ಜನ ಶತಮಾನೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ರಾಜ್ಯ ಸರ್ಕಾರ ಮುಂದಾಗಬೇಕು ಎಂಬುವುದು ಸೇರಿದಂತೆ ಹಲವಾರು ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.

ಡಾ. ರಾಜ್‌ ಕುಮಾರ್‌ ಅವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಲು ಕೇಂದ್ರಕ್ಕೆ ಶಿಾರಸು ಮಾಡಬೇಕು, ಚಾಮರಾಜನಗರ ತಾಲ್ಲೂಕಿಗೆ ಡಾ. ರಾಜ್‌ ಕುಮಾರ್‌ ತಾಲ್ಲೂಕು ಎಂದು ನಾಮಕರಣ ಮಾಡುವುದು, ಬೆಂಗಳೂರು ಮತ್ತು ಚಾಮರಾಜನಗರದಲ್ಲಿ 100 ಅಡಿ ಎತ್ತರದ ಕಂಚಿನ ಪ್ರತಿಮೆಗಳ ಸ್ಥಾಪನೆ ಮಾಡಬೇಕು, ಕೆಐಎಎಲ್‌ಟರ್ಮಿನಲ್‌‍-2ಗೆ, ಮಾಗಡಿ ರಸ್ತೆ ಮೆಟ್ರೋ ನಿಲ್ದಾಣಕ್ಕೆ ಡಾ. ರಾಜ್‌ ಕುಮಾರ್‌ ಹೆಸರಿಡಬೇಕು, ರಾಜ್‌ ಹುಟ್ಟುಹಬ್ಬದ ದಿನವಾದ ಏ.24ನ್ನು ಅಂತರಾಷ್ಟ್ರೀಯ ಕಲಾವಿದರ ದಿನವಾಗಿ ಘೋಷಣೆ ಮಾಡಬೇಕು ಎನ್ನುವುದು ಸಂಘಟನೆಯ ಪ್ರಮುಖ ಬೇಡಿಕೆಯಾಗಿದೆ.

ಮೈಸೂರಿನ ಫಿಲ್‌‍ ಸಿಟಿಗೆ ಡಾ. ರಾಜ್‌ ಕುಮಾರ್‌ ಚಲನಚಿತ್ರ ನಗರಿ ನಾಮಕರಣ ಮಾಡಿ ಚಿತ್ರರಂಗದ ಕಾರ್ಮಿಕರಿಗೆ ಡಾ. ರಾಜ್‌ ಕುಮಾರ್‌ ಸಹಾಯಧನ ಯೋಜನೆ ಘೋಷಣೆ ಮಾಡಬೇಕು ಎನ್ನುವುದು ಬೇಡಿಕೆಗಳಲ್ಲಿದೆ.
ಅದೇ ರೀತಿ ನಗರದಲ್ಲಿರುವ ಡಾ.ರಾಜ್‌ಕುಮಾರ್‌ ಸಮಾಧಿ ಸ್ಥಳದಲ್ಲಿರುವ ಪುಣ್ಯಸ್ಥಳಕ್ಕೆ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

RELATED ARTICLES

Latest News