ಶಿವಮೊಗ್ಗ,ಮೇ 19-ನಗರದ ಮಾಲ್‌ವೊಂದರ ಕಟ್ಟಡದ ಲಿಫ್‌್ಟನಲ್ಲಿ ಸಿಲುಕಿಕೊಂಡಿದ್ದ 9 ಜನರನ್ನು ಅಗ್ನಿಶಾಮಕ ದಳದ ತಂಡ ಹರಸಾಹಸ ಪಟ್ಟು ಸುರಕ್ಷಿತವಾಗಿ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದೆ.ಇಲ್ಲಿನ ವಿಶಾಲ್ ಮಾರ್ಟ್ ಈ ಘಟನೆ ನಡೆದಿದೆ.
ತಾಂತ್ರಿಕ ಸಮಸ್ಯೆಯಿಂದ ಲಿಫ್ಟ್ ಹಠಾತ್ ಆಗಿ ಮೊದಲ ಮಹಡಿಯಲ್ಲಿ ನಿಂತಿತ್ತು. ಅದರಲ್ಲಿ ಭರತ್, ಅನುಷಾ, ಅನೀಸ್ ಫಾತಿಮಾ, ಮುಸರತ್, ಸೂಬಿಯಾ , ಮಿಜ್ಜಾ , ಪ್ರಶಾಂತ್, ಪ್ರವೀಣ್ ಕುಮಾರ್ ಹಾಗು 5 ವರ್ಷದ ಬಾಲಕ ಬಿಲಾಲ್ ಎಂಬವರು ಸಿಲುಕಿದ್ದರು. ಸುಮಾರು 1 ಗಂಟೆಗೂ ಹೆಚ್ಚು ಕಾಲ ಹೊಗೆ ಬರಲು ಸಾಧ್ಯವಾಗದೆ ಮೊಬೈಲ್ ಮೂಲಕ ಮಾಹಿತಿ ನೀಡಿದ್ದಾರೆ.
ಕೆಲವರು ಭಯಭೀತರಾಗಿ ಕಿರುಚಾಡಿ ದ್ದರು. ಅಲ್ಲದೇ ಮಹಿಳೆ ಯೊಬ್ಬರ ಆರೋಗ್ಯದಲ್ಲಿ ಏರುಪೇರಾಗಿತ್ತು. ಅಗ್ನಿಶಾಮಕ ದಳ ತಕ್ಷಣ ಕಾರ್ಯಾಚರಣೆಯಿಂದ ಲಿಫ್‌್ಟನಲ್ಲಿ ಸಿಲುಕಿದ್ದವರೆಲ್ಲರೂ ಸುರಕ್ಷಿತವಾಗಿ ಹೊರಬಂದಿದ್ದಾರೆ. ಅಗ್ನಿಶಾಮಕ ದಳದ ಅಧಿಕಾರಿಗಳು ಹಾಗೂ ಸಿಬ್ಬಂದಿ ಹೈಡ್ರಾಲಿಕ್ ಟೂಲ್ಸ್ ಬಳಸಿ, ಲಿಫ್ಟ್ ಮುರಿದು ಒಳಗಿದ್ದ ಜನರನ್ನು ರಕ್ಷಿಸಿದ್ದಾರೆ.
ಘಟನೆ ಕುರಿತು ಕಟ್ಟಡ ಮಾಲೀಕರು ಸುರಕ್ಷತಾ ಕ್ರಮ ಕೈಗೊಳ್ಳದ ಬಗ್ಗೆ ಗ್ರಾಹಕರು ಕಿಡಿ ಕಾರಿದ್ದಾರೆ.ಎಲ್ಲರೂ ಸುಕಕ್ಷತವಾಗಿ ಹೊರಬಂದ ನಂತರ ಅವರಿಗೆ ನೀರು ,ಜೂಸ್ ನೀಡಿ ಸಮಾಧನ ಮಾಡಿದ್ದಾರೆ. ಕೆಲವರು ಹೆಚ್ಚಿನ ಅನಾಹುತ ತಪ್ಪಿದ್ದರಿಂದ ನಿಟ್ಟುಸಿರುಬಿಟ್ಟಿದ್ದಾರೆ.
