Homeರಾಜ್ಯಬೆಂಗಳೂರು । ಹೋಟೇಲ್‌ ರೂಮ್‌ನಲ್ಲಿ ಜೀವಂತ ಗುಂಡುಗಳು ಪತ್ತೆ

ಬೆಂಗಳೂರು । ಹೋಟೇಲ್‌ ರೂಮ್‌ನಲ್ಲಿ ಜೀವಂತ ಗುಂಡುಗಳು ಪತ್ತೆ

Bengaluru: Live bullets found in hotel room, NRI arrested

ಬೆಂಗಳೂರು,ಮೇ 19-ಅಧಿಕಾರಿಗಳ ಕಣ್ತಪ್ಪಿಸಿ ವಿದೇಶದಿಂದ ಬುಲೆಟ್‌ಗಳನ್ನು ತಂದು ನಗರದ ಹೋಟೇಲ್‌ನಲ್ಲಿ ಮರೆತು ಬಿಟ್ಟು ಹೋಗಿದ್ದ ಜೀವಂತ ಗುಂಡುಗಳನ್ನು ವಶಪಡಿಸಿಕೊಂಡಿರುವ ಜೆಪಿನಗರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಕಳೆದ ಏ.27 ರಂದು ರಾತ್ರಿ ಅಮೆರಿಕದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ಪ್ರಜೆಯಾಗಿರುವ ಆರೋಪಿ ಅರ್ಮಾನ್‌ ಮುತಾಹರ್‌ (34) ಎಂಬಾತ ಸ್ನೇಹಿತೆಯೊಂದಿಗೆ ನಗರಕ್ಕೆ ಬಂದು ಜಯಮಹಲ್‌ ಪ್ಯಾಲೇಸ್‌‍ ಹೋಟೇಲ್‌ನಲ್ಲಿ ಗುರುತಿನ ಚೀಟಿಗಾಗಿ ತನ್ನ ಪಾಸ್‌‍ಪೋರ್ಟ್‌ ನೀಡಿ ತಂಗಿದ್ದನು.

ಮಾರನೇ ದಿನ ಬೆಳಗ್ಗೆ ಹೋಟೇಲ್‌ನಿಂದ ಚೆಕ್‌ ಔಟ್‌ ಆಗುವಾಗ ರೂಂ ನಲ್ಲಿ ಏಳು ಜೀವಂತ ಗುಂಡುಗಳಿದ್ದ ಪಿಸ್ತೂಲ್‌ ಮ್ಯಾಗ್ಜಿನ್‌ ಮರೆತು ಬಿಟ್ಟು ಹೋಗಿದ್ದು, ಸ್ವಲ್ಪ ಸಮಯದ ಬಳಿಕ ಆತನಿಗೆ ನೆನಪಾಗಿದೆ.

ತಕ್ಷಣ ಆತ ಹೋಟೇಲ್‌ ರಿಸೆಷ್ಷನ್‌ಗೆ ಕರೆ ಮಾಡಿ ಗುಂಡುಗಳಿದ್ದ ಮ್ಯಾಗ್ಜಿನ್‌ ಮರೆತು ಬಿಟ್ಟು ಬಂದಿದ್ದೇನೆ, ಅದನ್ನು ಎತ್ತಿಡಿ. ನಾನು ಒಂದೆರೆಡು ದಿನಗಳಲ್ಲಿ ಬಂದು ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾನೆ.

ಆತ ತಂಗಿದ್ದ ಕೊಠಡಿಯನ್ನು ಹೌಸ್‌‍ಕೀಪಿಂಗ್‌ ಸಿಬ್ಬಂದಿ ಪರಿಶೀಲಿಸಿದಾಗ ಗುಂಡುಗಳು ಪತ್ತೆಯಾಗಿವೆ. ತದ ನಂತರದಲ್ಲಿ ಹೋಟೇಲ್‌ ಸಿಬ್ಬಂದಿ ಹಲವು ಬಾರಿ ಕರೆ ಮಾಡಿದರೂ ಆತ ಬಂದಿಲ್ಲ.

ಮೇ 4 ರಂದು ಹೋಟೇಲ್‌ ಮ್ಯಾನೇಜರ್‌ ಆತನಿಗೆ ಕರೆ ಮಾಡಿ ನಿಮ ಮ್ಯಾಗ್ಜಿನ್‌ನ್ನು ಪೊಲೀಸರಿಗೆ ಒಪ್ಪಿಸುತ್ತೇನೆ ಎಂದು ಹೇಳಿದಾಗ ಆತ ಆಯ್ತು ನಾನು ಪೊಲೀಸ್‌‍ ಠಾಣೆಯಿಂದಲೇ ಪಡೆದುಕೊಳ್ಳುತ್ತೇನೆ ಎಂದು ಹೇಳಿದ್ದಾನೆ.ಈ ಬಗ್ಗೆ ಹೋಟೇಲ್‌ ಮ್ಯಾನೇಜರ್‌ ಪೊಲೀಸರಿಗೆ ದೂರು ನೀಡಿ ಪಿಸ್ತೂಲಿನ ಮ್ಯಾಗ್ಜಿನ್‌ಹಸ್ತಾಂತರಿಸಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.ಅಮೆರಿಕದಲ್ಲಿ ತಯಾರಿಸಲಾದ ಈ ಬುಲೆಟ್‌ಗಳನ್ನು ಅಧಿಕಾರಿಗಳ ಕಣ್ತಪ್ಪಿಸಿ ನಮ ದೇಶಕ್ಕೆ ಹೇಗೆ ತಂದ ಎಂಬುವುದರ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.ಈತ ಮೂಲತಃ ಆರ್‌ಟಿ ನಗರದವರು. ಅಮೆರಿಕದಲ್ಲಿ ನೆಲೆಸಿದ್ದಾರೆ. ಕಾರ್ಯನಿಮಿತ್ತ ನಗರಕ್ಕೆ ಬಂದಿದ್ದರು ಎಂದು ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ.

RELATED ARTICLES
spot_img

Latest News